Friday, 13th December 2024

ಮೇ 6ರಂದು ಪ್ರಧಾನಿ ಮೆಗಾ ರೋಡ್‌ ಶೋ

ಬೆಂಗಳೂರು : ಬೆಂಗಳೂರಿನಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್‌ ಶೋ ನಡೆಯಲಿದ್ದು, ಒಂದೇ ದಿನ ಬೃಹತ್‌ ರೋಡ್‌ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಬೆಂಗಳೂರಲ್ಲಿ ಬೆಳಗ್ಗೆ ಮತ್ತು ಸಂಜೆ ರೋಡ್‌ ಶೋ ನಡೆಸಲಿದ್ದು, ಬೆಳಗ್ಗೆ 8ಕಿ.ಲೊ ಮೀಟರ್‌, ಸಂಜೆ 28 ಕಿ.ಲೋ ಬೃಹತ್‌ ರೋಡ್‌ ಶೊ ನಡೆಸಲಿದ್ದಾರೆ.

ಸಿ.ವಿ ರಾಮನ್‌ ನಗರದಿಂದ ರೋಡ್‌ ಶೋ ಆರಂಭವಾಗಲಿದೆ. ಬ್ರಿಗೇಡ್‌ ರೋಡ್‌ನಲ್ಲಿ ಮೋದಿ ರೋಡ್‌ ಶೋ ಅಂತ್ಯವಾಗುವ ಸಾಧ್ಯತೆಯಿದೆ.

ಕೋಣನಹುಂಟೆಯಿಂದ ರೋಡ್‌ ಶೊ ಆರಂಭಗೊಂಡು, ಜಯನಗರ, ಗಾಂಧಿ ಬಜಾರ್‌, ಶಾಂತಿನಗರ, ಬಿನ್ನಿಮಿಲ್‌ ಮಾಗಡಿ ರಸ್ತೆ, ಟೋಲ್‌ ಗೇಟ್‌, ದಾಸರಹಳ್ಳಿ, ಹೌಸಿಂಗ್‌ ಬೋರ್ಡ್‌ ಬಸವೇಶ್ವರ ನಗರ, ನವರಂಗ್‌, ಮಲ್ಲೇಶ್ವರಂ,ಸಂಪಿಗೆ ರಸ್ತೆ ಸರ್ಕಲ್‌ ಮಾರಮ್ಮ, ದೇವಸ್ಥಾನದವರೆಗೆ ರೋಡ್‌ ಶೋ ನಡೆಸುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಒಟ್ಟು 23 ಕ್ಷೇತ್ರಗಳು ಒಳಪಡುವಂತೆ ರೋಡ್‌ ಶೋ ನಡೆಸಲಿದ್ದಾರೆ.