Wednesday, 11th December 2024

ಚಾಮ್‌ರಾಜ್ ಟೀ ಎಸ್ಟೇಟ್‌ನಿಂದ ಹೊಸ ನೀಲಗಿರಿ ಚಹಾ ಮಿಶ್ರಣಗಳು!

ಚಾಮ್‌ರಾಜ್ ಟೀ ಎಸ್ಟೇಟ್‌ನಿಂದ ಮಾಸ್ಟರ್ ಬ್ಲೆಂಡ್, ಮಾಸ್ಟರ್ ಬ್ಲೆಂಡ್ ಶುಂಠಿ ಚಹಾ ಮತ್ತು ಮಾಸ್ಟರ್ ಬ್ಲೆಂಡ್ ಲೆಮನ್ ಚಹಾ ಮಾರುಕಟ್ಟೆಗೆ

ಚಾಮ್‌ರಾಜ್ ಟೀ ಎಸ್ಟೇಟ್ ತನ್ನ ಪ್ರಸಿದ್ಧ ಸಿಂಗಲ್‌ ಎಸ್ಟೇಟ್ ಆರ್ಥೊಡಾಕ್ಸ್ ಟೀ ಬಿಒಪಿ (ಬ್ರೋಕನ್ ಆರೆಂಜ್ ಪೆಕೊ) ಅನ್ನು ಹೆಮ್ಮೆಯಿಂದ ಮತ್ತೊಮ್ಮೆ ಪರಿಚಯಿಸುತ್ತಿದೆ

ಬೆಂಗಳೂರು ಜೂನ್ 17, 2024: 1922ರಲ್ಲಿ ಸ್ಥಾಪನೆಯಾದ ಯುನೈಟೆಡ್ ನೀಲಗಿರಿ ಟೀ ಎಸ್ಟೇಟ್ಸ್ & ಕಂಪನಿ ಲಿಮಿಟೆಡ್‌ನ ಪ್ರೀಮಿಯಂ ನೀಲಗಿರಿ ಚಹಾ ಬ್ರಾಂಡ್ ಚಾಮ್‌ರಾಜ್, ತನ್ನ ‘ಮಾಸ್ಟರ್ ಬ್ಲೆಂಡ್’ ಮತ್ತು ಅದರ ಜನಪ್ರಿಯ ಸಿಟಿಸಿ ಬ್ರಾಂಡ್ ‘ಮಾಸ್ಟರ್ ಬ್ಲೆಂಡ್ ಸಿಟಿಸಿ ಟೀ’ ಅಡಿಯಲ್ಲಿ ಎರಡು ಹೊಸ ಉತ್ಪನ್ನಗಳನ್ನು ಘೋಷಿಸಿದೆ. ಚಹಾ ಪ್ರಿಯರು ಸಂಸ್ಥೆಯ ಹೊಸ ‘ಮಾಸ್ಟರ್ ಬ್ಲೆಂಡ್ ಜಿಂಜರ್’ ಮತ್ತು ‘ಮಾಸ್ಟರ್ ಬ್ಲೆಂಡ್ ಲೆಮನ್’ ಸ್ವಾದವನ್ನು ಸವಿಯಬಹುದು. ಹೊಸ ಚಹ ಮಿಶ್ರಣಗಳು, ದೇಶದೆಲ್ಲೆಡೆಯ ಚಹಾ ಪ್ರಿಯರ ನಿರೀಕ್ಷೆಯನ್ನು ಗರಿಗೆದರಿಸಿವೆ.

ಚಾಮ್‌ರಾಜ್‌ನ ಹೊಸ ಮಾಸ್ಟರ್ ಬ್ಲೆಂಡ್ ಸಿಟಿಸಿ ಚಹಾ ಮಿಶ್ರಣ ಹಾಲು ಮತ್ತು ಸಕ್ಕರೆ ಎರಡಕ್ಕೂ ಸಂಪೂರ್ಣ ಪೂರಕವಾಗಿದ್ದು, ನಿಮಗೆ ಚಹಾ ಸೇವನೆಯ ವಿಶಿಷ್ಟ ಅನುಭೂತಿ ನೀಡುತ್ತದೆ. ದೇಶದೆಲ್ಲೆಡೆಯ ಚಹಾ ಪ್ರಿಯರ ನಿರೀಕ್ಷೆಗೆ ಅನುಗುಣವಾಗಿ, ಈ ಚಹಾದ ಬ್ಲೆಂಡ್ಅನ್ನು ತಯಾರಿಸಲಾಗಿದೆ. ಮಾಸ್ಟರ್ ಬ್ಲೆಂಡ್ ಸಿಟಿಸಿ 500 ಗ್ರಾಮ್ ಹಾಗು 250 ಗ್ರಾಂಗಳ ಪ್ಯಾಕ್ ನಲ್ಲಿ ದೊರೆಯುತ್ತದೆ. ಅದಕ್ಕೆ ಕ್ರಮವಾಗಿ 175 ರೂಪಾಯಿ ಹಾಗು 95 ರೂಪಾಯಿ ದರ ನಿಗದಿಗೊಳಿಸಲಾಗಿದೆ.

‘ಮಾಸ್ಟರ್ ಬ್ಲೆಂಡ್ ಶುಂಠಿ’ ಉತ್ಪನ್ನ ಮಸಾಲೆಯುಕ್ತ ಶುಂಠಿಯ ರುಚಿಯನ್ನು ಪರಿಚಯಿಸುತ್ತದೆ. ಚಹಾದ ಹಲವಾರು ಕಾಲಾತೀತ ಆರೋಗ್ಯ ಪ್ರಯೋಜನಗಳಿಗೆ ಈ ಚಹಾ ಮಿಶ್ರಣ ಜನಪ್ರಿಯ. ಈ ಮಾಸ್ಟರ್ ಬ್ಲೆಂಡ್ ಶುಂಠಿ ಉತ್ಪನ್ನ ಅತ್ಯುತ್ತಮ ಶುಂಠಿಯ ರುಚಿಯನ್ನು ನೀವು ಸ್ವಾದಿಸುವಂತೆ ಮಾಡುತ್ತದೆ. ಈ ಉತ್ಪನ್ನ 250 ಗ್ರಾಂ ಪ್ಯಾಕ್ ನಲ್ಲಿ ಲಭ್ಯವಿದ್ದು, ಅದಕ್ಕೆ 210 ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ.