Friday, 13th December 2024

ಓಎನ್‌ಡಿಸಿ(ONDC) ಕಾರ್ಯಜಾಲ ಸೇರಿಕೊಳ್ಳುವ ಮೂಲಕ ಡಿಜಿಟಲ್ ಹೆಜ್ಜೆಗುರುತು ವರ್ಧಿಸಿದ ಕೋಕ-ಕೋಲಾ

ತನ್ನ ರೀಟೇಲ್ ಭಾಗೀದಾರರಿಗಾಗಿ ಕೋಕ್ ಶಾಪ್(Coke Shop) ಅನಾವರಣ

ಬೆಂಗಳೂರು: ಕೋಕ-ಕೋಲಾ ಇಂಡಿಯಾ, ತಾನು ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್‌ವರ್ಕ್(Open Network for Digital Commerce (ONDC) ಸೇರಿರುವುದಾಗಿ ಘೋಷಿಸಿದೆ.

ಈ ಸಹಭಾಗಿತ್ವವು, ಪ್ರಾರಂಭದಲ್ಲಿ ಸೆಲ್ಲರ್ ಆಪ್(SellerApp) ಮೂಲಕ ಬೆಂಬಲ ಒದಗಿಸಲಿದ್ದು, ತನ್ನ ಡೇಟಾ-ಚಾಲಿತ ದೃಷ್ಟಿಕೋನಗಳು, ಮಾರುಕಟ್ಟೆ ಚುರುಕುತನ ಹಾಗೂ ತಂತ್ರಗಳೊಂದಿಗೆ ಓಎನ್‌ಡಿಸಿ ಕಾರ್ಯಜಾಲವನ್ನು ವರ್ಧಿಸಿಕೊಳ್ಳಲು ಕೋಕ-ಕೋಲಾಕ್ಕೆ ನೆರವಾಗಲಿದೆ. ಅಲ್ಲದೆ, ಕೋಕ-ಕೋಲಾ, ಓಎನ್‌ಡಿಸಿ ವೇದಿಕೆಯಲ್ಲಿ ತನ್ನದೇ ಸ್ವಂತ ಮಾರುಕಟ್ಟೆ ಸ್ಥಳವಾದ ಕೋಕ್ ಶಾಪ್ (‘Coke Shop’)ಕೂಡ ಪ್ರಾರಂಭಿಸಿದೆ. ಈ ವಿನೂತನ ಮಾರುಕಟ್ಟೆ ಸ್ಥಳವು, ಗ್ರಾಹಕರು ಕೋಕ-ಕೋಲಾ ಉತ್ಪನ್ನಗಳೊಡನೆ ಪರಸ್ಪರ ಸಂವಹಿಸುವ ರೀತಿಯನ್ನು ಮಾರ್ಪಡಿಸಿ, ದೇಶಾದ್ಯಂತ ಇರುವ ರೀಟೇಲರ‍್ಗಳಿಗೆ ಬಲ ಒದಗಿಸಲಿದೆ.

ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರಗಳ ಅಭಿವೃದ್ಧಿ ಇಲಾಖೆ(Department for Promotion of Industry and Internal Trade (DPIIT) ಯ ಯೋಜನೆಯಾದ ಓಎನ್‌ಡಿಸಿ ಕಾರ್ಯಜಾಲ ಸೇರಿಕೊಳ್ಳುವ ಮೂಲಕ, ಡಿಜಿಟಲ್ ವಾಣಿಜ್ಯ ಕ್ಷೇತ್ರದಲ್ಲಿನ ವಿಶಾಲವಾದ ಹಾಗೂ ವೈವಿಧ್ಯಮಯವಾದ ಗ್ರಾಹಕ ಬೇಸ್‌ಗೆ ಪ್ರವೇಶಾವಕಾಶ ಪಡೆದುಕೊಂಡು ತನ್ನ ಉತ್ಪನ್ನಗಳ ವ್ಯಾಪಕ ಲಭ್ಯತೆಯನ್ನು ಖಾತರಿಪಡಿಸಲಿದೆ.

ಈ ತಡೆರಹಿತ ಅನುಭವ ಒದಗಿಸುವುದಕ್ಕಾಗಿ ತಂತ್ರಜ್ಞಾನ ಬೆಂಬಲವಾದ SellerApp, ಆರ್ಡರ್ ನಿರ್ವಹಣೆ ಮತ್ತು ಇನ್ವೆಂಟರಿ ಟ್ರ್ಯಾಕಿಂಗ್‌ಅನ್ನು ಕ್ರಮಗೊಳಿಸಿ ಓಎನ್‌ಡಿಸಿ ಆರ್ಡರ್‌ಗಳನ್ನು ಸುಲಭವಾಗಿ ಗುರುತಿಸುವಂತೆ ಮಾಡುತ್ತದೆ. SellerAppನ ಡೇಟಾ-ಚಾಲಿತ ದೃಷ್ಟಿಕೋನದ ಮೂಲಕ ಕೋಕ-ಕೋಲಾದ ಮಾರಾಟಗಾರರು ನಿರ್ದಿಷ್ಟ ಮಾರುಕಟ್ಟೆ ವರ್ಗದೊಳಗೆ ಪ್ರವೃತ್ತಿಗಳು, ವರಸೆಗಳು ಮತ್ತು ಅವಕಾಶಗಳನ್ನು ಗುರುತಿಸುವುದು ಸಾಧ್ಯ ವಾಗುವುದರಿಂದ ತಮ್ಮ ಕಾರ್ಯತಂತ್ರಗಳನ್ನು ಕೂಡಲೇ ಮತ್ತು ಪರಿಣಾಮಕಾರಿಯಾಗಿ ಸರಿಪಡಿಸಿಕೊಳ್ಳಬಹುದು.

‘Coke Shop’ ಮಾರುಕಟ್ಟೆಸ್ಥಳ ಮಾಡಲ್ ಮೂಲಕ ಕೋಕ-ಕೋಲಾ, ರೀಟೇಲರ್‌ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತೊಂದು ವಾಹಿನಿಯೊಂದಿಗೆ ನೆರವಾಗುವ ಸಮಯದಲ್ಲೇ ಗ್ರಾಹಕರು ಖರೀದಿಸುವುದಕ್ಕಾಗಿ ಅನೇಕ ಟಚ್‌ಪಾಯಿಂಟ್‌ಗಳ ಬೆಂಬಲ ಒದಗಿಸಲಿದೆ. ಪ್ರಮುಖ ಇ-ವಾಣಿಜ್ಯ ವೇದಿಕೆಗಳಿಗೆ ಪ್ರವೇಶಾವಕಾಶ ಪಡೆದುಕೊಳ್ಳುವುದು ಸಾಧ್ಯವಾಗದಿದ್ದ ರೀಟೇಲರ್‌ಗಳು ಈಗ ಗ್ರಾಹಕರನ್ನು ಹಿಂಪಡೆದುಕೊಳ್ಳುವ ಮೂಲಕ ವಿಶಾಲವಾದ ಪ್ರೇಕ್ಷಕ ವೃಂದದ ಅಗತ್ಯಗಳನ್ನು ಪೂರೈಸಬಹುದು.

ಈ ಮಾಡಲ್‌ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೋಕ-ಕೋಲಾ nStore ಟೆಕ್ನಾಲಜೀಸ್‌ದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದ್ದು ಈ ಸಂಸ್ಥೆಯು, ರೀಟೇಲರ್‌ಗಳು, ಡಿಜಿಟಲ್ ಒದಗಿಸಲು-ಸಿದ್ಧವಾದ ಆರ್ಡರ್‌ಗಳನ್ನು ಸಂಯೋಜಿಸುವುದರ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ರೀಟೇಲರ್‌ ಗಳಿಗೆ ಗ್ರಾಹಕ ತೊಡಗಿಕೊಳ್ಳುವಿಕೆ ಪರಿಹಾರಗಳನ್ನು ಒದಗಿಸಲು ಅವರ ಡಿಜಿಟಲ್ ಬೆಳವಣಿಗೆ ತಂತ್ರಕ್ಕೆ ನೆರವಾಗುವಂತಹ “ತಂತ್ರಜ್ಞಾನ ವೇಗವರ್ಧಕ” ದ ಪಾತ್ರ ವಹಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡುತ್ತಾ, ಓಎನ್‌ಡಿಸಿದ ಎಮ್‌ಡಿ ಮತ್ತು ಸಿಇಒ ಟಿ ಕೋಶಿ, “ಈ ಪರಿವರ್ತನಾತ್ಮಕ ಪಯಣದಲ್ಲಿ ಕೋಕ-ಕೋಲಾ ನಮ್ಮ ಕಾರ್ಯಜಾಲಕ್ಕೆ ಸೇರಿಕೊಂಡು ಗ್ರಾಹಕರಿಗೆ ಅದ್ವಿತಿಯವಾದ ಶಾಪಿಂಗ್ ಅನುಭವ ಒದಗಿಸುವ ಸಂದರ್ಭದಲ್ಲೇ ಕಾರ್ಯಜಾಲದಲ್ಲಿ ಖರೀದಿದಾರರಿಗಾಗಿ ವಿಸ್ತರಿತ ಆಯ್ಕೆಗಳನ್ನು ಒದಗಿಸುತ್ತಿರುವುದು ನಮಗೆ ಅತ್ಯಂತ ಹರ್ಷದ ಸಂಗತಿಯಾಗಿದೆ. ಓಎನ್‌ಡಿಸಿದಲ್ಲಿ ನಾವು, ಸ್ಥಳೀಯ ರೀಟೇಲರ್‌ಗಳ ಬಲ ವರ್ಧನೆ ಮಾಡಿ, ಅವರು ತಮ್ಮ ಡಿಜಿಟಲ್ ಗೋಚರತೆಯನ್ನು ನಿರ್ಮಾಣಮಾಡಿಕೊಂಡು ತಮ್ಮ ವ್ಯಾಪಾರಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವಾಗುವ ಗುರಿ ಹೊಂದಿದ್ದೇವೆ. ಈ ಕಾರ್ಯಜಾಲದಲ್ಲಿ, ಎಲ್ಲಾ ವ್ಯಾಪಾರ ಸಂಸ್ಥೆಗಳು ಮತ್ತು ಎಲ್ಲಾ ಖರೀದಿದಾರರ ಸಕ್ರಿಯ ಭಾಗವಹಿಸುವಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ.”ಎಂದು ಹೇಳಿದರು.

ಕೋಕ-ಕೋಲಾ ಇಂಡಿಯಾ ಮತ್ತು ಸೌತ್‌ವೆಸ್ಟ್ ಏಶ್ಯಾದ ಡಿಜಿಟಲ್ ಆಕ್ಸಿಲರೇಶನ್ ಆಫಿಸ್‌ನ ಉಪಾಧ್ಯಕ್ಷ ಅಂಬುಜ್ ದಿಯೊ ಸಿಂಗ್, “ಡಿಜಿಟಲ್ ಮಾರು ಕಟ್ಟೆಗಳಿಗೆ ಹೆಚ್ಚಿನ ಪ್ರವೇಶಾವಕಾಶ ಒದಗಿಸಿ ಮಾರಾಟಗಾರರ ಬಲವರ್ಧನೆ ಮಾಡುವ ಮೂಲಕ ONDC ಇ-ವಾಣಿಜ್ಯ ಚಿತ್ರಣವನ್ನು ನಿಜವಾಗಿಯೂ ಸಮಾನಗೊಳಿಸಿದೆ. ಆನ್‌ಲೈನ್ ಮಾರುಕಟ್ಟೆಸ್ಥಳವನ್ನು ಹೆಚ್ಚು ಒಳಗೊಳ್ಳುವಂತೆ ಹಾಗೂ ಗ್ರಾಹಕ-ಕೇಂದ್ರಿತವಾಗಿ ಪರಿವರ್ತಿಸುವುದರ ಮೇಲೆ ಗಮನ ಕೇಂದ್ರೀಕರಿಸುವ ಈ ಪಯಣದ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಓಎನ್‌ಡಿಸಿದೊಂದಿಗೆ ನಿರಂತರ ಸಹಭಾಗಿತ್ವವನ್ನು ನಾವು ನಿರೀಕ್ಷಿಸುತ್ತಿದ್ದೇವೆ.”ಎಂದು ಹೇಳಿದರು.

ಭಾರತದಲ್ಲಿ ಕೋಕ-ಕೋಲಾದ ಬಾಟ್ಲಿಂಗ್ ಭಾಗೀದಾರ ಸಂಸ್ಥೆಯಾದ ಮೂನ್ ಬೆವರೇಜಸ್ ಲಿಮಿಟೆಡ್, ಓಎನ್‌ಡಿಸಿದಲ್ಲಿ ಕೋಕ-ಕೋಲಾದ ಕೊಡುಗೆ ಗಳಿಗಾಗಿ “ನೆಟ್‌ವರ್ಕ್ ಪಾರ್ಟಿಸಿಪೆಂಟ್” ಆಗಿರಲಿದ್ದು, ಭಾರತದಲ್ಲಿ ಗ್ರಾಹಕರು ಸಂಸ್ಥೆಯ ಪಾನೀಯ ಪೋರ್ಟ್‌ಫೋಲಿಯೋಕ್ಕೆ ತಡೆರಹಿತ ಪ್ರವೇಶಾ ವಕಾಶ ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತದೆ.

“Wನಮ್ಮ ಗ್ರಾಹಕರಿಗೆ ಕೋಕ-ಕೋಲಾ ಉತ್ಪನ್ನಗಳು ಕೂಡಲೇ ಲಭ್ಯವಾಗುವುದನ್ನು ಖಾತರಿಪಡಿಸಲು ನಮ್ಮ ವಿತರಣಾ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳುತ್ತಿರುವುದು ನಮಗೆ ಗೌರವದ ವಿಷಯವಾಗಿದ್ದು, ಇದು ಗುಣಮಟ್ಟ ಹಾಗೂ ಪ್ರವೇಶಾವಕಾಶದ ಅತ್ಯುನ್ನತ ಮಾನದಂಡಗಳನ್ನು ಪ್ರತಿಫಲಿಸು ತ್ತದೆ.”ಎಂದು ಹೇಳಿದರು, ಮೂನ್ ಬೆವರೇಜಸ್ ಲಿಮಿಟೆಡ್‌ನ ಪ್ರೊಮೋಟರ್ ಅನಂತ್ ಅಗರ್‌ವಾಲ್.

SellerAppನ ಸಹಸ್ಥಾಪಕರಾದ ಬ್ರಿಜ್ ಪುರೋಹಿತ್, “ಓಎನ್‌ಡಿಸಿ ಆಪ್‌ನೊಂದಿಗೆ ತೊಡಗಿಕೊಳ್ಳುವ ಸ್ಮಾರ್ಟ್‌ಫೋನ್ ಬಳಕೆದಾರರ ಘಾತೀಯ ಬೆಳವಣಿಗೆ, ಕೋಕ-ಕೋಲಾದಂತಹ ಬ್ರ್ಯಾಂಡ್‌ಗಳಿಗೆ ಮಹತ್ತರವಾದ ಅವಕಾಶ ಒದಗಿಸುತ್ತದೆ. SellerAppನ ಇ-ವಾಣಿಜ್ಯ ಪರಿಹಾರಗಳ ಶ್ರೇಣಿಯು, ಇಂತಹ ಬ್ರ್ಯಾಂಡ್‌ಗಳು ಡೇಟಾ ವಿಶ್ಲೇಷಣೆಯ ಶಕ್ತಿಯನ್ನು ಗಳಿಸಿಕೊಂಡು, ತಮ್ಮ ಗೋಚರತೆಯನ್ನು, ಪರಿವರ್ತನಾ ಪ್ರಮಾಣಗಳು ಹಾಗೂ ಒಟ್ಟಾರೆ ಆನ್‌ಲೈನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಲ ಒದಗಿಸುತ್ತದೆ.”ಎಂದರು.

nStore ReTech ಪ್ರೈವೇಟ್ ಲಿಮಿಟೆಡ್‌ನ ಪ್ರದೀಪ್ ಕೆ ಸಂಪತ್, “ಪ್ರಸ್ತುತದ ಸರಬರಾಜು ಸರಪಳಿಯಲ್ಲಿರುವ ಅಂತರಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿ, ಆನ್‌ಲೈನ್ ಮಾಧ್ಯಮದಲ್ಲಿ ಶೋಧ ಹಾಗೂ ಆರ್ಡರ್ ಏರ್ಪಟ್ಟು, ಅದರ ಪೂರೈಕೆಯು ಆಫ್‌ಲೈನ್‌ನಲ್ಲಿ ಪ್ರಸ್ತುತ ಇರುವ ರೀಟೇಲ್ ವಿತರಣೆಯ ಮೂಲಕ ಏರ್ಪಡುವಂತಹ ಆನ್‌ಲೈನ್ ಯೂನಿಯನ್ ಆಫ್‌ಲೈನ್ ಜಗತ್ತು ಸೃಷ್ಟಿಸುವುದು nStoreನ ಮೂಲ ಧ್ಯೇಯವಾಗಿದೆ. ಮೂನ್ ಬೆವರೇಜಸ್ ಲಿಮಿಟೆಡ್‌ದೊಂದಿಗೆ ಸಹಯೋಗ ಏರ್ಪಡಿಸಿಕೊಂಡಿರುವುದಕ್ಕೆ ನಾವು ಹರ್ಷಿಸುತ್ತೇವೆ; ಒಳಗೊಳ್ಳುವಿಕೆ ವಾಣಿಜ್ಯದ ಈ ಮಾಡಲ್, ಓಎನ್‌ಡಿಸಿದಿಂದ ವೇಗವರ್ಧನೆ ಪಡೆದುಕೊಂಡು ಮಾರುಕಟ್ಟೆಯಲ್ಲಿ ನಾವು ನೋಡುತ್ತಿರುವ ಇ-ವಾಣಿಜ್ಯದ ಕಾರ್ಯಾಚರಣೆಯನ್ನು ನಿಜವಾಗಿಯೂ ಮರುವಿವರಿಸಲಿದೆ.”ಎಂದು ಹೇಳಿದರು.

ಈ ಸಹಭಾಗಿತ್ವವು, ಆವಿಷ್ಕಾರ ಹಾಗೂ ಗ್ರಾಹಕ ಸಂತೃಪ್ತಿಗೆ ಕೋಕ-ಕೋಲಾದ ಬದ್ಧತೆಯಲ್ಲಿನ ಕೌತುಕಮಯವಾದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಕೌತುಕಮಯವಾದ ಈ ಹೊಸ ಆನ್‌ಲೈನ್ ಮಾರುಕಟ್ಟೆಸ್ಥಳವು, ರೀಟೇಲರ್‌‍ಗಳು ಹಾಗೂ ಗ್ರಾಹಕರು ಕೋಕ-ಕೋಲಾ ಉತ್ಪನ್ನಗಳೊಂದಿಗೆ ಸಂವಹಿಸುವ ರೀತಿಯನ್ನು ಪರಿವರ್ತಿಸಿ, ಅವರ ಒಟ್ಟಾರೆ ಶಾಪಿಂಗ್ ಅನುಭವವನ್ನು ವರ್ಧಿಸಲಿದೆ.