ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಂಗಳವಾರದಂದು ಬೆಂಗಳೂರು ನಗರ ಭಾಗದಲ್ಲಿ ಸ್ಥಿರವಾಗಿದ್ದರೂ ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಪ ಕುಸಿತ ಕಂಡಿದೆ.
ಕಳೆದ ಸೋಮವಾರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಅನ್ನು 104.70 ರೂ.ಗೆ ಮತ್ತು ಡೀಸೆಲ್ ಅನ್ನು ಲೀಟರ್ಗೆ 94.04 ರೂ.ಗೆ ಮಾರಾಟ ಮಾಡಲಾಗಿತ್ತು. ದೇಶದ ವಿವಿಧ ಮಹಾನಗರಗಳಲ್ಲಿನ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಚೆನ್ನೈ -ಹೈದ್ರಾಬಾದ್ -ಮುಂಬೈ-ನೋಡ್ಡಾದಲ್ಲೂ ಸಹ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.
ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 98.96 ರೂ ಇದ್ದರೆ ಡೀಸೆಲ್ ಬೆಲೆ 93.26 ರೂ.ಗೆ ಮಾರಾಟ ಮಾಡಲಾ ಗುತ್ತಿದೆ. ಅದರಂತೆ, ಹೈದ್ರಾಬಾದ್ನಲ್ಲಿ ಪೆಟ್ರೋಲ್ ಬೆಲೆ 87.24 ರೂ ಆಗಿದ್ದರೆ, ಡೀಸೆಲ್ ಬೆಲೆ 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.