ಬೆಂಗಳೂರು: ಗುರು ಪೂರ್ಣಿಮಾ ಪ್ರಯುಕ್ತ ಡಾ.ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಇಷ್ಟ ಲಿಂಗ ಪೂಜೆ ಮತ್ತು ಸಿದ್ದಂತ ಶಿಖಾಮನಿ ಪ್ರವಚನ ಕಾರ್ಯಕರ್ಮವನ್ನು ವಿಜಯನಗರದ ಶ್ರೀ ಬಸವೇಶ್ವರ ಸುಜ್ನ್ಯಾನ ಮಂಟಪ ದಲ್ಲಿ ನಡೆಸಲಾಗುವುದು ಎಂದು ಶ್ರೀ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿ ಗಳು ತಿಳಿಸಿದ್ದಾರೆ.
ಸುಡಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರು ಪೂರ್ಣಿಮಾ ಪ್ರಯುಕ್ತ ಜೂನ್ ೨೯ ರಿಂದ ಜುಲೈ ೩ ರವರಿಗೆ ೫ ದಿನ ನಡೆಸು ತ್ತಿದ್ದು ಎಲ್ಲ ಹಿಂದೂ ಸಮುದಾಯದವರು ಭಾಗವಯಿಸಬೇಕು ಎಂದು ಕೋರಿದರು.
ವೇದವ್ಯಾಸರ ಜನ್ಮ ದಿನದಂದು ಗುರು ಪೂರ್ಣಿಮಾ ನಡೆಯಕಿದ್ದು, ಋಗ್ವೇದ, ಯಜು ರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ ನಮಗೆ ಜೀವನದ ಸಂದೇಶ ನೀಡಿದವರು. ಜೂನ್ ೨೯ ರಂದು ನಿವೃತ ನ್ಯಾಯಾಧೀಶ ರಾದ ಶಿವರಾಜ್ ಪಾಟೀಲ್ ಪುಸ್ತಕ ಬಿಡುಗಡೆ ಮೂಲಕ ಕಾರ್ಯಕ್ರಮ ಪ್ರಾರಂಭ ವಾಗುತ್ತದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ. ಎಸ್. ಪರಮಶಿವಯ್ಯ ಅವರು ಅಧ್ಯಕ್ಷತೇ ನಡೆಯಲಿದ್ದು ಶ್ರೀ ಶೈಲ ಜಗದ್ಗುಗಳಿಂದ ಜೂನ್ ೩೦ ರಿಂದ ಜುಲೈ ೩ ರವರಿಗೆ ಬೆಳ್ಳಿಗೆ ೭ ರಿಂದ ಮಹಾ ಶಿವ ಪೂಜೆ ಮತ್ತು ಶಿಖಾ ಮನಿ ಪ್ರವಚನ ಕಾರ್ಯಕರ್ಮವನ್ನು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಲಕ್ಹ್ಮೀ ಹೆಬಾಳ್ಕರ್, ಶಾಸಕ ಬಿ.ವೈ .ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ಸ್ವಾಮಿಗಳು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಶೈಲ ಜಗದ್ಗುರು ಕಾರ್ಯಕ್ರಮ ಸೇವಾ ಸಮಿತಿಯ ಕಾರ್ಯದರ್ಶಿ ಮಹೇಶ್, ಸದ್ಯಸ್ಯರಾದ ಪ್ರೇಮ ಶಾಂತವೀರಯ್ಯ , ಮುಂತಾದವರು ಭಾಗವಹಿಸುದ್ದರು.