Wednesday, 11th December 2024

ಮಹಾನಟಿ ಕಿರೀಟ ಮುಡಿಗೇರಿಸಿಕೊಂಡ ಮೈಸೂರಿನ ಪ್ರಿಯಾಂಕಾ

ಬೆಂಗಳೂರು: ಮಹಾನಟಿ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಮೈಸೂರಿನ ಪ್ರಿಯಾಂಕಾ ಮಹಾನಟಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ‘ಮಹಾನಟಿ’ ಸೀಜನ್-1ರ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮವಾಗಿ ಮೈಸೂರು ಮೂಲದ ಪ್ರಿಯಾಂಕ ಗೆದಿದ್ದು, ಮಹಾನಟಿ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.

ತರೀಕೆರೆ ಮೂಲದ ಧನ್ಯಶ್ರೀ ರನ್ನರ್ ಅಪ್ ಆಗಿದ್ದಾರೆ. ಮಹಾನಟಿ ಸೀಸನ್ 1ರ ವಿನ್ನರ್ ಗೆ ಭರ್ಜರಿ ಕ್ಯಾಶ್ ಗಿಫ್ಟ್ ಹಾಗೂ ಚಿನ್ನದ ಕಿರೀಟದ ಜೊತೆಗೆ ಹಲವು ಗಿಫ್ಟ್ ಗಳು ಲಭ್ಯವಾಗಿವೆ. ರನ್ನರ್ ಅಪ್ ಧನ್ಯಶ್ರೀಗೆ 10 ಲಕ್ಷ ರೂಪಾಯಿ ಬಹುಮಾನ ದೊರೆತೊದೆ.

ಅಂತಿಮ ಸುತ್ತಿನಲ್ಲಿ ಪ್ರಿಯಾಂಕಾ, ಧನ್ಯಶ್ರೀ, ಆರಾಧನಾ ಭಟ್, ಶ್ವೇತಾ ಭಟ್ ಸೇರಿದಂತೆ ಐವರು ಸ್ಪರ್ಧಿಗಳು ಇದ್ದರು. ಪ್ರಿಯಾಂಕಾ ಗ್ರ್ಯಾಂಡ್ ಫಿನಾಲೆ ಯಲ್ಲಿ ನಿರ್ದೇಶಕ ಜಯತೀರ್ಥ ಅವರ ‘ಅನುರಾಗ’ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ಮಹಾನಟಿ ಗ್ರ್ಯಾಂಡ್ ಫಿನಾಲೆಯಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ವಿನ್ನರ್ ಹೆಸರನ್ನು ಘೋಷಿಸಿದರು. ಮಹಾನಟಿಯಾಗಿ ಮೈಸೂರಿನ ಪ್ರಿಯಾಂಕಾ ಹೊರಹೊಮ್ಮಿದ್ದು, 15 ಲಕ್ಷ ಮೌಲ್ಯದ ಚಿನ್ನದ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.