Friday, 20th September 2024

ನಟ ಉಪೇಂದ್ರರಿಗೆ ಹೈಕೋರ್ಟ್ ರಿಲೀಫ್

ಬೆಂಗಳೂರು: ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದ ಹೇಳಿಕೆ ಸಂಬಂಧ ಅವರ ವಿರುದ್ಧ ದಾಖಲಾಗಿದ್ದ ಅಟ್ರಾಸಿಟಿ ಕೇಸ್ ರದ್ದು ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದ ನಟ ಉಪೇಂದ್ರರಿಗೆ ಹೈಕೋರ್ಟ್ ರಿಲೀಫ್ ನೀಡಿದೆ.

ನಟ ಉಪೇಂದ್ರ ವಿರುದ್ಧ ಜಾತಿನಿಂದಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಮಧ್ಯಂತರ ತಡೆಯಾಜ್ಞೆ ನೀಡಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಕುರಿತು ಉಪೇಂದ್ರ ಅವರು ‘ಸಮುದಾಯದ ವಿರುದ್ಧ ನಾನು ಅವಹೇಳನಕಾರಿ ಹೇಳಿಕೆ ನೀಡಿಲ್ಲ.

ಹಳೆಯ ಗಾದೆ ಮಾತನ್ನು ಉಲ್ಲೇಖಿಸಿದ್ದು ಜಾತಿ ನಿಂದನೆ ಅಲ್ಲ. ಪ್ರಚಾರ ಪಡೆಯಲೆಂದು ಉಪೇಂದ್ರ ದೂರು ದಾಖಲಿಸಿದ್ದಾರೆ. ವಾಟ್ಸಪ್ ಮೂಲಕ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ FIR ರದ್ದು ಕೋರಿ ಮನವಿ ಮಾಡಿದ್ದಾರೆ.

ಇದಕ್ಕೂ ಮುಂಚೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಿಂದ ದೂರುದಾರರ ಸಮ್ಮುಖದಲ್ಲಿ ಉಪೇಂದ್ರ ಅವರ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದರು.

ಈ ಬಳಿಕ ಇದೀಗ ವಿಚಾರಣೆ ನಡೆಸಿದಂತ ಹೈಕೋರ್ಟ್ ಅವರ ವಿರುದ್ಧ ದಾಖಲಾಗಿದ್ದ ಅಟ್ರಾಸಿಟಿ ಕೇಸ್ ನ ಎಫ್‌ಐಆರ್ ಗೆ ತಡೆ ನೀಡಿದೆ.