Tuesday, 5th November 2024

Road Accident: ವಿಧಾನಸೌಧದ ಬಳಿ ಭೀಕರ ಅಪಘಾತ, ಆಟೋಗೆ ಲಾರಿ ಡಿಕ್ಕಿ, ಮಹಿಳೆ ಸಾವು

Road accident

ಬೆಂಗಳೂರು: ರಾಜಧಾನಿಯಲ್ಲಿ (Bangalore news) ಶನಿವಾರ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ (Road Accident news) ಸಂಭವಿಸಿದೆ. ಆಟೋಗೆ ಲಾರಿ ಡಿಕ್ಕಿಯಾದ (Lorry Auto Hit) ಪರಿಣಾಮ ಆಟೋದಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿಧಾನಸೌಧದ ಸಮೀಪದ ಕಾಫಿ ಬೋರ್ಡ್ ಸಿಗ್ನಲ್ ಬಳಿ ಅಪಘಾತ ಸಂಭವಿಸಿದೆ.

ಆಟೋದಲ್ಲಿದ್ದ ಶಾಲಿನಿ ಎಂಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್‌ನಿಂದ ಆಟೋ ಬರುತ್ತಿತ್ತು. ನಮ್ಮ ಯಾತ್ರಿ ಆಪ್‌ನಲ್ಲಿ ಆಟೋ ಬುಕ್ ಮಾಡಿ ಮೆಜೆಸ್ಟಿಕ್‌ಗೆ ತೆರಳಲು ಶಾಲಿನಿ ಆಟೋ ಹತ್ತಿದ್ದರು. ಈ ವೇಳೆ ಸಿಗ್ನಲ್ ಜಂಪ್ ಮಾಡಿ ವೇಗವಾಗಿ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ಬಳಿಕ ಲಾರಿ ಹಾಗೂ ಆಟೋ ಚಾಲಕ ಇಬ್ಬರೂ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ಐಟಿ ಅಧಿಕಾರಿಗಳಿಂದ ದರ್ಶನ್‌ ವಿಚಾರಣೆ

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ತನ್ನ ಪಾತ್ರ ಮುಚ್ಚಿಹಾಕಲು 85 ಲಕ್ಷ ರೂ. ಬಳಸಿದ್ದ ನಟ ದರ್ಶನ್‌ನನ್ನು (Actor Darshan) ಈ ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು (Income tax Officers) ಎರಡು ದಿನಗಳಿಂದ ಸತತ ವಿಚಾರಣೆಗೆ ಒಳಪಡಿಸಿದ್ದಾರೆ. ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ (Bellary jail) ವಿಚಾರಣೆ ನಡೆದಿದೆ.

ಐವರು ಅಧಿಕಾರಿಗಳ ಐಟಿ ತಂಡ ಜೈಲಿಗೆ ಆಗಮಿಸಿದೆ. ಹೈಸೆಕ್ಯೂರಿಟಿ ಸೆಲ್‌ನಲ್ಲಿದ್ದ ದರ್ಶನ್‌ನನ್ನು ಕಾರಾಗೃಹದ ಅಧೀಕ್ಷಕರ ಕಚೇರಿ ಪಕ್ಕದ ಕೊಠಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಗುರುವಾರ ಸಂಜೆ 7.15ರವರೆಗೆ ವಿಚಾರಣೆ ನಡೆಯಿತು. ದರ್ಶನ್‌ ಪರ ಆಡಿಟರ್‌ ಎಂ.ಆರ್‌.ರಾವ್‌, ಸಹಾಯಕ ವಕೀಲ ರಾಮಸಿಂದ್‌ ಸಹ ಈ ವೇಳೆ ಜತೆಗಿದ್ದರು. ತಮ್ಮ ಆಪ್ತ ವಲಯಕ್ಕೆ ಅಪಾರ ಹಣ ನೀಡಿದ ಆರೋಪ ಕುರಿತು ಪ್ರಶ್ನೆಗಳನ್ನು ಕೇಳಿದ ಐಟಿ ಅಧಿಕಾರಿಗಳು ದರ್ಶನ್‌ ಹೇಳಿಕೆ ದಾಖಲಿಸಿಕೊಂಡರು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ದರ್ಶನ್‌ ಪರದಾಡಿದ್ದಾನೆ.

ಇದನ್ನೂ ಓದಿ: Accident News : ಟ್ರಕ್, ಆಟೋ ನಡುವೆ ಅಪಘಾತ, ಏಳು ಮಂದಿ ಸಾವು