Wednesday, 9th October 2024

ಮಾರಾಟಾ ನಂತರದ ಸೇವೆಗಳು: ಪ್ರ&ಉ

1. ಅತ್ಯುತ್ಕೃಷ್ಟವಾದ ಅಗ್ರಮಾನ್ಯ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿಯ ಜೊತೆಗೆ, ಟಾಟಾ ಮೋಟರ್ಸ್ ಉದ್ದಿಮೆಯಲ್ಲೇ ಅತ್ಯುತ್ತಮವಾದ ಮಾರಾಟಾನಂತರದ ಸೇವೆಗಳಿಗೂ ಹೆಸರುವಾಸಿಯಾಗಿದೆ. ಇದರ ಬಗ್ಗೆ ತಾವು ದಯವಿಟ್ಟು ಸ್ವಲ್ಪ ಬೆಳಕು ಚೆಲ್ಲುವಿರಾ?
ಟಾಟಾ ಮೋಟರ್ಸ್, ದೇಶದ ಮುಂಚೂಣಿ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿದೆ ಮತ್ತು ಗ್ರಾಹಕ ಗಮನ ಕೇಂದ್ರೀಕರಣ ಯಾವಾಗಲೂ ನಮ್ಮ ಕಾರ್ಯಾಚರಣೆಗಳ ಹೃದ್ಭಾಗದಲ್ಲಿರುತ್ತದೆ. ಇಂದು ಗ್ರಾಹಕ ಇಚ್ಛೆಗಳು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದ್ದು, ವಾಣಿಜ್ಯ ವಾಹನದ ಗ್ರಾಹಕರು ತಮ್ಮ ವ್ಯಾಪಾರಕ್ಕಾಗಿ ಸಮಗ್ರವಾದ ಮೊಬಿಲಿಟಿ ಪರಿಹಾರಗಳನ್ನು ನೋಡುತ್ತಾರೆ. ವಿವಿಧ ವರ್ಗಗಳು ಮತ್ತು ಅಪ್ಲಿಕೇಶನ್ಸ್ ಆದ್ಯಂತ ಅತ್ಯುತ್ಕೃಷ್ಟವಾದ ಉತ್ಪನ್ನಗಳನ್ನು ಒದಗಿಸುವುದರ ಜೊತೆಗೆ ಟಾಟಾ ಮೋಟರ್ಸ್, ಒಂದು ಮೊಬಿಲಿಟಿ ಪರಿಹಾರಗಳನ್ನು ಒದಗಿಸುವ ಸಂಸ್ಥೆಯಾಗಿ ತನ್ನ ಸಂಪೂರ್ಣ ಸೇವ 2.0 ಉಪಕ್ರಮದಡಿ, ಹಲವಾರು ವಾಹನ ಕಾಳಜಿ ಕಾರ್ಯಕ್ರಮಗಳು, ಫ್ಲೀಟ್ ನಿರ್ವಹಣಾ ಪರಿಹಾರಗಳು, ವಾರ್ಷಿಕ ನಿರ್ವಹಣಾ ಪ್ಯಾಕೇಜ್‌ಗಳು ಮತ್ತು ರಸ್ತೆಬದಿ ನೆರವಿನ ಸೇವೆಗಳನ್ನು ವಿಸ್ತರಿಸುತ್ತದೆ.

ಟಾಟಾ ಮೋಟರ್ಸ್‌ನಲ್ಲಿ ನಾವು, ಫ್ಲೀಟ್ ಮಾಲೀಕರು ಮತ್ತು ಟ್ರಕ್ ಚಾಲಕರೊಂದಿಗೆ ಪ್ರಬಲವಾದ ಸಹಭಾಗಿತ್ವ ನಿರ್ಮಾಣ ಮಾಡುವ ಮೂಲಕ ಉದ್ದಿಮೆಯಲ್ಲೇ ಅತ್ಯುತ್ತಮವಾದ ಉತ್ಪನ್ನ ಜೀವಾವರ್ತನ ಅನುಭವವನ್ನು ಒದಗಿಸಲು ಶ್ರಮಿಸುತ್ತೇವೆ. ಪ್ರತಿಯೊಂದು ಹೆಜ್ಜೆಯಲ್ಲೂ ಗ್ರಾಹಕರ ಹಿತಾಸಕ್ತಿಗಳನ್ನೇ ಕೇಂದ್ರಭಾಗದಲ್ಲಿರಿಸುವ ನಮ್ಮ ನೀತಿಗೆ ಅನುಗುಣವಾಗಿ ನಾವು ನಿರಂತರ ಪ್ರಯತ್ನ ಮಾಡುತ್ತಿರುತ್ತೇವೆ.

2. ಸಮಗ್ರವಾದ ವಾಹನ ನಿರ್ವಹಣೆ ಮತ್ತು ಫ್ಲೀಟ್ ಮಾಲೀಕರಿಗೆ ಸಂಪೂರ್ಣ ಶಾಂತಿ ಒದಗಿಸುವ ಕೆಲವು ಪ್ರಮುಖ ಉಪಕ್ರಮಗಳು ಯಾವುವು?
ಸಂಪೂರ್ಣ ಸೇವಾ ಉಪಕ್ರಮದಡಿ ಬರುವ ನಮ್ಮ ವಾಹನ ನಿರ್ವಹಣೆ ಮತ್ತು ಮಾರಾಟಾನಂತರದ ಸೇವೆಯ ಕೆಲವು ವಿಶಿಷ್ಟ ಅಂಶಗಳು, ಉದ್ದಿಮೆಯಲ್ಲೇ ಅತ್ಯುತ್ತಮ ಸೇವೆ, ಬಿಡಿಭಾಗಗಳ ಸುಲಭ ಲಭ್ಯತೆ ಮತ್ತು ಮೌಲ್ಯವರ್ಧಿತ ಸೇವೆಗಳನ್ನು ಒಳಗೊಂಡಿದೆ. ಪ್ರಮುಖ ಉಪಕ್ರಮಗಳು ಇವುಗಳನ್ನು ಒಳಗೊಂಡಿದೆ: ಟಾಟಾ ಅಲರ್ಟ್- 30 ನಿಮಿಷಗಳ ಖಚಿತ ಪ್ರತಿಕ್ರಿಯಾ ಸಮಯ ಮತ್ತು 2 ಘಂಟೆಗಳ ತಲುಪುವಿಕೆ ಸಮಯದ ರಸ್ತೆಬದಿ ನೆರವಿನ ಯೋಜನೆ ಹಾಗು ವಾರಂಟಿ ಅಡಿ (ILM&HCV) 24 ಘಂಟೆಗಳೊಳಗೆ ಸಮಸ್ಯೆ ನಿವಾರಣೆ. ಟಾಟಾ ಝಿಪ್ಪಿ- 48 ಘಂಟೆಗಳೊಳಗೆ ಸಮಸ್ಯೆ ಪರಿಹಾರವಿರುವ ರಿಪೇರಿ ಸಮಯದ ಖಾತರಿ ಯೋಜನೆ; ಟಾಟಾ ಗುರು- 50,000+ ತರಬೇತಿ ಪಡೆದ ತಂತ್ರಜ್ಞರು, ದೇಶಾದ್ಯಂತ ರಿಪೇರಿ ಮತ್ತು ಸರ್ವಿಸ್ ಗಾಗಿ ರಸ್ತೆ ಬದಿ ಮತ್ತು ವರ್ಕ್‌ಶಾಪ್ ನೆರವು ಒದಗಿಸುತ್ತಾರೆ. ಇವೆಲ್ಲವನ್ನೂ, 2800+ಗಿಂತ ಹೆಚ್ಚಿನ ಟಚ್ ಪಾಯಿಂಟ್‌ಗಳು ಮತ್ತು ದೇಶದುದ್ದಕ್ಕೂ ಪ್ರತಿ 62 ಕಿ.ಮೀಗಳಿಗೆ ಒಂದು ಸರ್ವಿಸ್ ಘಟಕದೊಂದಿಗೆ, ಸರ್ವಿಸ್ ಕಾರ್ಯಜಾಲದ ಟಾಟಾ ಮೋಟರ್ಸ್‌ನ ವ್ಯ್ಪಾಕ ಡೀಲರ್‌ಶಿಪ್ ಮೂಲಕ ಒದಗಿಸಲಾಗುತ್ತದೆ; ಮತ್ತೆ, ಇವೆಲ್ಲವುಗಳಿಗೆ ತರಬೇತಿ ಹೊಂದಿದ ತಜ್ಞರು ಮತ್ತುಟಾಟಾ ಜೆನ್ಯೂನ್ ಬಿಡಿಭಾಗಗಳ ಬೆಂಬಲವಿದೆ.

3. ದೇಶದ ಅತಿ ದೂರದೂರದ ಭಾಗಗಳಲ್ಲೂ ಟಾಟಾ ಮೋಟರ್ಸ್ ಯಾವ ರೀತಿ ಗುಣಮಟ್ಟದ ಸೇವೆಯನ್ನು ಖಾತರಿಪಡಿಸುತ್ತದೆ?
ಟಾಟಾ ಮೋಟರ್ಸ್ ಮಾರಾಟಾನಂತರದ ಸೇವೆಗಳ ಪರಿಸರವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಗ್ರಾಹಕರಿಗೆ 1500ಕ್ಕಿಂತ ಹೆಚ್ಚಿನ ವಾಹಿನಿ ಭಾಗೀದಾರರಿಗೆ ಪ್ರವೇಶಾವಕಾಶವಿದೆ. ಈ ವಾಹಿನಿಯು 29 ರಾಜ್ಯ ಸರ್ವಿಸ್ ಕವೇರಿಗಳು, 250+ ಟಾಟಾ ಮೋಟರ್ಸ್ ಇಂಜಿನಿಯರ್‌ಗಳು, ಆಧುನಿಕ ಸಾಧನ ಮತ್ತು ಸೌಲಭ್ಯಗಳು ಹಾಗೂ 24×7 ವ್ಯಾನುಗಳನ್ನು ಒಳಗೊಂಡಿದೆ. ಟಾಟಾ ಮೋಟರ್ಸ್‌ನ ವ್ಯಾಪಕ ಡೀಲರ್‌ಶಿಪ್ ಮತ್ತು ಸರ್ವಿಸ್ ಕಾರ್ಯಜಾಲವು ದೇಶಾದ್ಯಂತ ಲಭ್ಯವಿದ್ದು ಸಂಪೂರ್ಣ ಸೇವಾ ಯೋಜನೆಯಡಿ ವಿಶಿಷ್ಟವಾದ ಸೇವೆಗಳನ್ನು ಒದಗಿಸುತ್ತದೆ. ಟಾಟಾ ಝಿಪ್ಪಿ ಯೋಜನೆಯ ಒಂದು ಪ್ರಮುಖಾಂಶವೆಂದರೆ, ನಿಯಮ್ಇತ ಸರ್ವಿಸ್‌ಗಾಗಿ ವರ್ಕ್‌ಶಾಪ್‌ನಲ್ಲಿ ಎಂಟು ಘಂಟೆಗಳೊಳಗೆ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಪ್ರಧಾನವಾದ ಒಟ್ಟೂ ರಿಪೇರಿಗಳಿಗಾಗಿ 48 ಘಂಟೆಗಳೊಳಗೆ ಸಮಸ್ಯೆ ಬಗೆಹರಿಸುವುದು. ವಿಳಂಬಗೊಂಡ ಪ್ರತಿ 24 ಘಂಟೆಗಳಿಗೆ ಟಾಟಾ ಮೋಟರ್ಸ್ ಎಲ್ಲಾ ಟ್ರಕ್ ಗಳಿಗೆ ಪ್ರತಿದಿನ ರೂ. 500ರಿಂದ 2000 ಮತ್ತು ಪ್ರೈಮ ಟಿಪ್ಪರ್‌ಗಳಿಗೆ ಪ್ರತಿದಿನ ರೂ. 5000ದವರೆಗೆ ಪರಿಹಾರ ಒದಗಿಸುತ್ತದೆ.

4. ಟಾಟಾ ಮೋಟರ್ಸ್ ಕೈಗೊಂಡಿರುವ ಕೆಲವು ಟ್ರಕ್ ಚಾಲಕ-ಕೇಂದ್ರಿತ ಉಪಕ್ರಮಗಳು ಯಾವುವು?
ಚಾಲಕ ಸಮುದಾಯವು ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿರುವುದರಿಂದ, ಅವರಿಗೆ ನೆರವಾಗುವುದಕ್ಕೆ ಟಾಟಾ ಮೋಟರ್ಸ್ ಬದ್ಧವಾಗಿದೆ ಅದರಲ್ಲಿ ಒಳಗೊಂಡಿದೆ. ವಾಣಿಜ್ಯ ವಾಹನಗಳ ದೇಶದ ಅತಿದೊಡ್ಡ ಉತ್ಪಾದಕ ಸಂಸ್ಥೆಯಾಗಿ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಚಾಲಕರ ಸಮಗ್ರ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸಲು ನಿರಂತರ ಪ್ರಯತ್ನಗಳನ್ನು ಕೈಗೊಳ್ಳುತ್ತದೆ. ಜೊತೆಗೆ ಟಾಟಾ ಮೋಟರ್ಸ್, ಚಾಲಕರ ಕೌಟುಂಬಿಕ ಆರ್ಥಿಕ, ಶೈಕ್ಷಣಿಕ, ಅಪಘಾತ ಮತ್ತು ಆರೋಗ್ಯ ವಿಮಾ ಅಗತ್ಯಗಳಿಗಾಗಿಯೂ ಚಾಲಕ-ಕೇಂದ್ರಿತ ಉಪಕ್ರಮಗಳನ್ನು ಒದಗಿಸುತ್ತದೆ. ಟಾಟಾ ಮೋಟರ್ಸ್, ಭಾರತದಾದ್ಯಂತ ಇರುವ ವಾಣಿಜ್ಯ ವಾಹನಗಳ ಚಾಲಕರಿಗೆ ಸುರಕ್ಷಿತವಾದ ಚಾಲನಾ ತಂತ್ರಗಳ ಕುರಿತು ತರಬೇತಿಯನ್ನೂ ಕೂಡ ಒದಗಿಸುತ್ತದೆ. ಟ್ರಕ್ ಚಾಲಕರ ಚಾಲನಾ ಕೌಶಲ್ಯಗಳನ್ನು ವರ್ಧಿಸಲು ಮತ್ತು ಚಾಲಕರು ಹಾಗು ಆಪರೇಟರ್‌ಗಳ ಸುರಕ್ಷತೆಗಾಗಿ, ಟಾಟಾ ಮೋಟರ್ಸ್ ನಿಯಮಿತವಾಗಿ ಸಮಗ್ರವಾದ ತರಬೇತಿ ಅಧಿವೇಶನಗಳನ್ನು ಆಯೋಜಿಸುತ್ತಿರುತ್ತದೆ. ಒಂದು ದಶಕದಲ್ಲಿ ಅದು 5 ಲಕ್ಷಕ್ಕಿಂತ ಹೆಚ್ಚಿನ ಚಾಲಕರಿಗೆ ತರಬೇತಿ ಒದಗಿಸಿದೆ. ತನ್ನ ಗ್ರಾಹಕರು ಹಾಗೂ ಚಾಲಕರು ಇಬ್ಬರಿಂದಲೂ ಸಂಸ್ಥೆಯು ತನ್ನ ವಿಶ್ವದರ್ಜೆ ತರಬೇತಿ ಅಧಿವೇಶನಗಳಿಗಾಗಿ ಧನಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ.

– ಶ್ರೀ ಆರ್. ರಾಮಕೃಷ್ಣನ್- ಜಾಗತಿಕ ಮುಖ್ಯಸ್ಥರು-ಕಸ್ಟಮರ್ ಕೇರ್, ವಾಣಿಜ್ಯ ವಾಹನ ವ್ಯಾಪಾರ ಘಟಕ, ಟಾಟಾ ಮೋಟರ್ಸ್