Wednesday, 11th December 2024

ಜು.28ರಂದು ರಾಜ್ಯಾಧ್ಯಂತ ಆಟೋ ಚಾಲಕರ ಮುಷ್ಕರ

ಬೆಂಗಳೂರು: ಶಕ್ತಿ ಯೋಜನೆಯ ಬಳಿಕ ಆಟೋ ಮತ್ತು ಟ್ಯಾಕ್ಸಿಗಳಿಗೆ ಜನರು ಇಲ್ಲದೇ ಚಾಲಕರು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಆಟೋ ಚಾಲಕರು, ಜು.28ರಂದು ರಾಜ್ಯಾಧ್ಯಂತ ಆಟೋ ಚಾಲಕರ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಶಕ್ತಿ ಯೋಜನೆ ನಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರು ನಷ್ಟ ಅನುಭವಿಸುವಂತೆ ಆಗಿದೆ. ಇದಕ್ಕಾಗಿ ಸರ್ಕಾರ ಆಟೋ ಚಾಲಕನಿಗೆ ಪ್ರತಿ ತಿಂಗಳು 10 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದಿಂದ ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸ ಬೇಕು. ಆಟೋ, ಟ್ಯಾಕ್ಸಿ ಚಾಲಕರಿಗೆ 2 ಲಕ್ಷ ಸಾಲ ಸೌಲಭ್ಯ ನೀಡಬೇಕು. ಎಲೆಕ್ಟ್ರಿಕ್ ಆಟೋಗಳನ್ನು ರ್ಯಾಪಿಡೋ, ಓಲಾ, ಊಬರ್ ಕಂಪನಿಗೆ ನೋಂದಣಿ  ನಿಲ್ಲಿಸಬೇಕು ಎಂದರು.

ಲೋನ್ ಆಪ್ ಅವಾಂತರ: 900 ಪ್ರಕರಣ ದಾಖಲು- click here
http://vishwavani.news/districts/bengaluru-urban/loan_app_/

ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 21 ಆಟೋ ಸಂಘಟನೆಗಳು ಹಾಗೂ ಖಾಸಗಿ ಬಸ್ ಒಕ್ಕೂಟ, ಶಾಲಾ ವಾಹನಗಳನ್ನು ಬಂದ್ ಮಾಡಿ ರಾಜ್ಯಾಧ್ಯಂತ ಅನಿರ್ದಿಷ್ಟಾವಧಿ ಮುಷ್ಕರ, ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ತಿಳಿಸಿದರು.