Wednesday, 11th December 2024

ಯಾರೂ ಗಾಬರಿಯಾಗಬೇಡಿ, ಗಟ್ಟಿಮುಟ್ಟಾಗಿದ್ದೇನೆ: ವಿಪಕ್ಷ ನಾಯಕ ಸಿದ್ಧರಾಮಯ್ಯ

ಬೆಂಗಳೂರು: ಕಾರು ಹತ್ತುವಾಗ ಮಾಜಿ ಸಿಎಂ ಸಿದ್ಧರಾಮಯ್ಯ ಕುಸಿದು ಬಿದ್ದಿದ್ದಾರೆ ಎಂಬ ಸುದ್ದಿ ಕೇಳಿ ಅನೇಕ ಅಭಿಮಾನಿಗಳು, ಕಾರ್ಯಕರ್ತರು ಗಾಬರಿಗೊಂಡಿದ್ದರು. ಆದರೆ ಯಾರೂ ಗಾಬರಿಯಾಗಬೇಡಿ. ಗಟ್ಟಿಮುಟ್ಟಾಗಿದ್ದೇನೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧ ರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ. ನಿತ್ಯ ಅಡ್ಡಾಡುವ ಕಾರು ಬದಲಾ ಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ.

ಈ ವೇಳೆ ವೈದ್ಯರು ಗ್ಲೂಕೋಸ್ ನೀಡಿದ್ದಾರೆ. ಬಳಿಕ ಸುಧಾರಿಸಿಕೊಂಡ ಸಿದ್ದರಾಮಯ್ಯ ಜನರತ್ತ ಕೈ ಬೀಸಿ ಕಾರು ಹತ್ತಿ ಕೂಡ್ಲಿಗಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ.ಶ್ರೀನಿವಾಸ್ ಮನೆಗೆ ತೆರಳಿದ್ದರು.