Friday, 13th December 2024

ಉನ್ನತ ಕೌಶಲ್ಯಾಭಿವೃದ್ದಿ ನಂತರ ಟೆಕ್ ವೃತ್ತಿಪರರು 150% ಸರಾಸರಿ ವೇತನ ಹೆಚ್ಚಳಕ್ಕೆ ಸಾಕ್ಷಿ

~ ಟಾಪ್ 25% ಸಾಫ್ಟ್‍ವೇರ್ ಡೆವಲಪ್‍ಮೆಂಟ್ ಪೆÇ್ರೀಗ್ರಾಂ ಕಲಿಯುವವರು ವಾರ್ಷಿಕ ರೂ 48 ಲಕ್ಷ ಮತ್ತು ಡಿಎಸ್‍ಎಂಎಲ್ ಪೆÇ್ರೀಗ್ರಾಂ ಕಲಿಯುವವರು ಸರಾಸರಿ ವಾರ್ಷಿಕ ರೂ 35 ಲಕ್ಷ ಪಡೆಯುತ್ತಿದ್ದಾರೆ

~ ತಂತ್ರಜ್ಞಾನವನ್ನು ಮೀರಿ, ಇ-ಕಾಮರ್ಸ್, ಫಿನ್‍ಟೆಕ್, ಮತ್ತು ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್‍ನಂತಹ ಕೈಗಾರಿಕೆಗಳಲ್ಲಿ ನುರಿತ ಸಾಫ್ಟ್‍ವೇರ್ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ

~ ಸ್ಕೇಲರ್ ಅಕಾಡೆಮಿಯಲ್ಲಿ ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ಉದ್ಯೋಗದಾತರಾಗಿ ಮೊದಲ ಎರಡು ಸ್ಥಾನಗಳನ್ನು ಉಳಿಸಿಕೊಂಡಿವೆ

ಬೆಂಗಳೂರು: ಪರಿಶೀಲಿಸಲಾದ ವೃತ್ತಿ ಪರಿವರ್ತನೆಯ ಮೌಲ್ಯಮಾಪನ ವರದಿಯ ಪ್ರಕಾರ ಭಾರತದಲ್ಲಿನ ಪ್ರಮುಖ ಶಿಕ್ಷಣ ಸಂಸ್ಥೆ ಆಗಿರುವ ಸ್ಕೇಲರ್, ತನ್ನ ಉನ್ನತ ಕೌಶಲ್ಯದ ಕಾರ್ಯಕ್ರಮಗಳಾದ ಸ್ಕೇಲರ್ ಅಕಾಡೆಮಿ ಮತ್ತು ಸ್ಕೇಲರ್ ಡಿಎಸ್‍ಎಂಎಲ್ (ಡೇಟಾ ಸೈನ್ಸ್ & ಮೆಷಿನ್ ಲನಿರ್ಂಗ್) ನಲ್ಲಿ ವ್ಯಾಸಂಗ ಮಾಡಿದವರು ಕಳೆದ ಎರಡು ವರ್ಷಗಳಲ್ಲಿ, ಕ್ರಮವಾಗಿ 150% ಮತ್ತು 110% ರಷ್ಟು ಸರಾಸರಿ ವೇತನದ ಹೆಚ್ಚಳವನ್ನು ಪಡೆದುಕೊಂಡಿದ್ದಾರೆ ಎಂದು ಘೋಷಿಸಿದೆ.

ಐಐಎಂ ಅಹಮದಾಬಾದ್‍ನ ಉದ್ಯೋಗ ವರದಿಗಳನ್ನು ಪರಿಶೋಧನೆ ಮಾಡುವ ಏಜೆನ್ಸಿಯಾದ ಬಿ2ಕೆ ಅನಾಲಿಟಿಕ್ಸ್ ಮೌಲ್ಯಮಾಪನ ಮಾಡಿದ ವರದಿಯು, ಸಾಫ್ಟ್‍ವೇರ್ ಡೆವಲಪ್‍ಮೆಂಟ್ ಪೆÇ್ರೀಗ್ರಾಂ ಕಲಿಯುವವರಲ್ಲಿ ಅಗ್ರರು 25% ರಷ್ಟು ಸರಾಸರಿ ಉದ್ಯೋಗಿಗಳು ವಾರ್ಷಿಕ 48 ಲಕ್ಷ ರೂಪಾಯಿಗಳ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದರೆ, ಮಧ್ಯಮ ವರ್ಗದ 80% ಉದ್ಯೋಗಿಗಳು ವಾರ್ಷಿಕ 25 ಲಕ್ಷ ರೂಪಾಯಿಗಳ ಸರಾಸರಿ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸುತ್ತದೆ. ಅದೇ ಸಂಖ್ಯೆಗಳು ಕ್ರಮವಾಗಿ ಸ್ಕೇಲರ್ ಡಿಎಸ್‍ಎಂಎಲ್ ಸಮೂಹದಿಂದ ಕ್ರಮವಾಗಿ ವಾರ್ಷಿಕ 35 ಲಕ್ಷ ರೂಪಾಯಿ ಮತ್ತು 18 ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ.

ಸರಾಸರಿ ವೇತನ ಏರಿಕೆಯಲ್ಲಿನ ಈ ಗಮನಾರ್ಹ ಹೆಚ್ಚಳವು ಕಾರ್ಯಕ್ರಮದ ಹಿಂದಿನ ಯಶಸ್ಸು ಮತ್ತು 2022ರ ವರದಿಗೆ ಹೋಲಿಸಿದರೆ ಅದರ ನಿರಂತರ ಪ್ರಸ್ತುತತೆಯ ಮೇಲೆ ಸಾಧ್ಯವಾಗಿದೆ. ಈ ಸಂಖ್ಯೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ನುರಿತ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಫಲಿಸಿದೆ.

ಈ ವರದಿಯು ಕೆಲಸ ಕಲಿಯುವವರ ಸರಾಸರಿ ಸಂಬಳದಲ್ಲಿ ಗಣನೀಯ ಜಿಗಿತವನ್ನು ಎತ್ತಿ ತೋರಿಸುತ್ತದೆ. ಪ್ರಿ-ಅಪ್ ಸ್ಕಿಲ್ಲಿಂಗ್, ಸ್ಕೇಲರ್ ಅಕಾಡೆಮಿಯಲ್ಲಿ ಕಲಿಯುವವರ ಸರಾಸರಿ ಸಿಟಿಸಿ ವಾರ್ಷಿಕ 17.77 ಲಕ್ಷ ರೂಪಾಯಿ ಆಗಿದ್ದು ಅದು ಈಗ ರೂ.33.73 ಲಕ್ಷ ವಾರ್ಷಿಕ ವೇತನ ಕ್ಕೆ ಏರಿಕೆ ದಾಖಲಿಸಿದೆ. ಸಮಾನಾಂತರವಾಗಿ, ಸ್ಕೇಲರ್ ಡಿಎಸ್‍ಎಂಎಲ್ ಸಮೂಹದಿಂದ ಕಲಿಯುವವರ ಸರಾಸರಿ ವೇತನವು ವಾರ್ಷಿಕ 15.47 ಲಕ್ಷ ರೂಪಾಯಿ ಆಗಿತ್ತು. ಉನ್ನತ ಕೌಶಲ್ಯದ ನಂತರ, ಅವರು ಪಡೆದ ಸರಾಸರಿ ವೇತನ ವಾರ್ಷಿಕ 30.68 ಲಕ್ಷ ರೂಪಾಯಿಗಳಿಗೆ ಏರಿತು, ಇದು ತಂತ್ರಜ್ಞಾನ ವೃತ್ತಿಜೀವನದ ಭವಿಷ್ಯವನ್ನು ಹೆಚ್ಚಿಸುವಲ್ಲಿ ಉನ್ನತ ಕೌಶಲ್ಯ ಮತ್ತು ನಿರಂತರ ಕಲಿಕೆಯ ಪರಿಣಾಮಕಾರಿತ್ವವನ್ನು ಪ್ರತಿಬಿಂಬಿಸುತ್ತದೆ.

ಸಾಫ್ಟ್‍ವೇರ್ ಡೆವಲಪ್‍ಮೆಂಟ್ ನೇಮಕಾತಿದಾರರಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ಪ್ರಮುಖ ಪಾತ್ರಗಳಲ್ಲಿ ಹಿರಿಯ ಡೆವಲಪರ್ ಸೇರಿದ್ದಾರೆ ಎಂದು ವರದಿಯು ಬಹಿರಂಗಪಡಿಸುತ್ತದೆ, ಕಂಪನಿಗಳು ಸರಾಸರಿ ಸಿಟಿಸಿ ವಾರ್ಷಿಕ 32.04 ಲಕ್ಷ ರೂಪಾಯಿಗಳಾಗಿದ್ದು ಮತ್ತು ಮಧ್ಯಮ-ಹಿರಿಯ ಡೆವಲಪರ್ಗಳ , ಸರಾಸರಿ ಸಿಟಿಸಿ ವಾರ್ಷಿಕ 34.69 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ. ಗಮನಾರ್ಹವಾಗಿ, ಉನ್ನತ ಕೌಶಲ್ಯ ಶಿಕ್ಷಣಕ್ಕೂ ಮುಂಚಿತವಾಗಿ ಸೇವಾ-ಆಧಾರಿತ ಕಂಪನಿಗಳಲ್ಲಿ ಸಿಸ್ಟಮ್ ಇಂಜಿನಿಯರ್‍ಗಳು ಮತ್ತು ಬೆಂಬಲ ಇಂಜಿನಿಯರ್‍ಗಳಾಗಿ ನೇಮಕಗೊಂಡ ತಂತ್ರಜ್ಞಾನ ವೃತ್ತಿಪರರು ಸಾಫ್ಟ್‍ವೇರ್ ಅಭಿವೃದ್ಧಿಯಲ್ಲಿ ಉನ್ನತ ಕೌಶಲ್ಯದ ನಂತರ ಸಂಬಳ ಹೆಚ್ಚಳವನ್ನು ಪಡೆದರು.

ಹೆಚ್ಚುವರಿಯಾಗಿ, ವರದಿಯು ಡಿಎಸ್‍ಎಂಎಲ್ ಪೆÇ್ರೀಗ್ರಾಂ ಅನ್ನು ಪೂರ್ಣಗೊಳಿಸಿದ ನಂತರ ಅಗ್ರ ಎರಡು ಅತಿ ಹೆಚ್ಚು-ಪಾವತಿಸುವ ವೃತ್ತಿಗಳು ಹಿರಿಯ ಡೇಟಾ ವಿಜ್ಞಾನಿಗಳು ಮತ್ತು ಹಿರಿಯ ಡೆವಲಪರ್‍ಗಳು ಎಂದು ಬಹಿರಂಗಪಡಿಸಿದೆ, ಸರಾಸರಿ ಸಿಟಿಸಿ ವಾರ್ಷಿಕ 20.28 ಲಕ್ಷ ರೂಪಾಯಿ ಮತ್ತು ವಾರ್ಷಿಕ ರೂ 24.06 ಲಕ್ಷ ರೂಪಾಯಿ ಆಗಿದೆ. ಕುತೂಹಲಕಾರಿಯಾಗಿ, ಉನ್ನತ-ಕೌಶಲ್ಯದ ನಂತರದ ಹಿರಿಯ ಯಂತ್ರ ಕಲಿಕಾ (ಮೆಷಿನ್ ಲನಿರ್ಂಗ್) ಇಂಜಿನಿಯರ್ ಹುದ್ದೆಗಳನ್ನು ಪಡೆಯುವ ವೃತ್ತಿಪರರು ಅತ್ಯಧಿಕ ವೇತನ ಏರಿಕೆ ದಾಖಲಿಸಿದ್ದು ಸರಾಸರಿ 150% ಹೆಚ್ಚಳವನ್ನು ಪಡೆದುಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಸ್ಕೇಲರ್ ಮತ್ತು ಇಂಟರ್‍ವ್ಯೂಬಿಟ್‍ನ ಸಹ-ಸಂಸ್ಥಾಪಕ ಅಂಶುಮಾನ್ ಸಿಂಗ್ ಅವರು “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯಗಳೊಂದಿಗೆ ಟೆಕ್ ವೃತ್ತಿಪರರನ್ನು ಸಜ್ಜುಗೊಳಿಸುವುದು ಸ್ಕೇಲರ್‍ನಲ್ಲಿ ನಮ್ಮ ಗುರಿಯಾಗಿದೆ. ಈ ಉದ್ಯೋಗ ವರದಿಯ ಸಂಶೋಧನೆಗಳು ವೃತ್ತಿ ಭವಿಷ್ಯವನ್ನು ಹೆಚ್ಚಿಸುವಲ್ಲಿ ಉನ್ನತ ಕೌಶಲ್ಯದ ಸ್ಪಷ್ಟ ಪ್ರಯೋಜನಗಳನ್ನು ಒತ್ತಿಹೇಳುತ್ತವೆ. ಮತ್ತು ಉದ್ಯಮದ ಬೇಡಿಕೆಗಳನ್ನು ಪೂರೈಸುವ ಸಂಸ್ಥೆಗಳು ಕ್ಷಿಪ್ರ ತಾಂತ್ರಿಕ ಪ್ರಗತಿಯನ್ನು ಮಾರ್ಗದರ್ಶನ ಮಾಡುವುದರಿಂದ, ಉದ್ಯಮ-ಜೋಡಣೆಯ ಪಠ್ಯಕ್ರಮವನ್ನು ಒದಗಿಸುವ ಸ್ಕೇಲರ್‍ನ ಬದ್ಧತೆ ಹೆಚ್ಚುತ್ತಲೇ ಇದೆ. ಇದು ವ್ಯಕ್ತಿಗಳಿಗೆ ತಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವುದಲ್ಲದೆ ಹೆಚ್ಚು ನುರಿತ ಮತ್ತು ಭವಿಷ್ಯ-ನಿರೋಧಕ ತಾಂತ್ರಿಕ ಕಾರ್ಯಪಡೆಗೆ ಕೊಡುಗೆ ನೀಡುತ್ತದೆ.

ಅಮೆಜಾನ್, ಮೈಕ್ರೋಸಾಫ್ಟ್, ಎಕ್ಸ್‍ಪ್ರೆಸ್‍ಬೀಸ್, ವಾಲ್‍ಮಾರ್ಟ್ ಮತ್ತು ಒರಾಕಲ್‍ನಂತಹ ಉದ್ಯಮಗಳಾದ್ಯಂತ ಉನ್ನತ ಕಂಪನಿಗಳಲ್ಲಿ ಸ್ಕೇಲರ್ ಅಕಾಡೆಮಿಯಿಂದ ಉನ್ನತ ಕೌಶಲ್ಯದ ವೃತ್ತಿಪರರನ್ನು ಆರಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಗೂಗಲ್, ಸೇಲ್ಸ್‍ಫೆÇೀರ್ಸ್, ಸ್ಯಾಮ್‍ಸಂಗ್ ಮತ್ತು ಪೇಪಾಲ್‍ನಂತಹ ಪ್ರಮುಖ ಹೆಸರುಗಳು ಸ್ಕೇಲರ್‍ನಲ್ಲಿ ವ್ಯಾಸಂಗ ಮಾಡಿದ ಪ್ರತಿಭಾವಂತ ಅಭ್ಯರ್ಥಿಗಳನ್ನು ಗುರುತಿಸಿವೆ ಮತ್ತು ನೇಮಕ ಮಾಡಿ ಕೊಂಡಿವೆ. ಅಂತೆಯೇ, ಡಿಎಸ್‍ಎಂಎಲ್ ವರ್ಟಿಕಲ್‍ನಿಂದ ಕಲಿಯುವವರು ಟಿಸಿಎಸ್, ಕಾಗ್ನಿಜೆಂಟ್, ಡೆಲಾಯ್ಟ್ ಮತ್ತು ಇವೈ (ಅನ್ಸ್ರ್ಟ್ & ಯಂಗ್) ಸೇರಿದಂತೆ ಕೆಲವು ದೊಡ್ಡ ವೃತ್ತಿಪರ ಸೇವಾ ಜಾಲಗಳನ್ನು ಒಳಗೊಂಡಂತೆ ಪ್ರಮುಖ ಐಟಿ ಪೂರಕ ಕಂಪನಿಗಳ ಗಮನ ಸೆಳೆದಿದ್ದಾರೆ.

“ನಾನು ಆರಂಭದಲ್ಲಿ ನನ್ನ ಮೂಲಭೂತ ಅಂಶಗಳನ್ನು ಉನ್ನತೀಕರಿಸಲು ಸ್ಕೇಲರ್‍ಗೆ ಸೇರಿಕೊಂಡೆ ಆದರೆ ಬದಲಿಗೆ ಸಂಪೂರ್ಣ ಗ್ರ್ಯಾಂಡ್ ಪ್ಯಾಕೇಜ್ ಅನ್ನು ಪಡೆದುಕೊಂಡೆ. ಮತ್ತು ಇದು ಸುಲಭವಾಗಿ ನಾನು ನನಗಾಗಿ ಮಾಡಬಹುದಾದ ಅತ್ಯುತ್ತಮ ನಿರ್ಧಾರವಾಗಿತ್ತು! ನಾನು ಹೆಚ್ಚು ಅಗತ್ಯವಿರುವ ಕೌಶಲ್ಯ ವರ್ಧಕವನ್ನು ಪಡೆದುಕೊಂಡಿದ್ದೇನೆ ಮತ್ತು ಕೇಂದ್ರೀಕೃತ ಮತ್ತು ಶಿಸ್ತಿನ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಿದ್ದೇನೆ ಅದು ಮೈಕ್ರೋಸಾಫ್ಟ್ ಮತ್ತು ಒರಾಕಲ್‍ನಂತಹ ಕಂಪನಿಗಳನ್ನು ಸೇರುವ ನನ್ನ ದಾರಿಯನ್ನು ಸುಗಮಗೊಳಿಸಿತು ಎಂದು ಅಕಾಡೆಮಿಯ ಹಳೆಯ ವಿದ್ಯಾರ್ಥಿ ಪ್ರಸ್ತುತ ಒರಾಕಲ್‍ನಲ್ಲಿ ಕೆಲಸ ಮಾಡುತ್ತಿರುವ ಅಬಿನಯ್ ಬಿಂಗುಮಲ್ಲ ಹೇಳಿದರು.

“ನಾನು ಈಗಾಗಲೇ ಮೊದಲ ಮಾಸ್ಟರ್‍ಕ್ಲಾಸ್‍ನಿಂದ ಪ್ರಭಾವಿತನಾಗಿದ್ದೆ. ಆದರೆ ನಾನು ಡಿಎಸ್‍ಎಂಎಲ್ ಕೋರ್ಸ್ ಅನ್ನು ಪ್ರಾರಂಭಿಸಿದಾಗ, ಮೊದಲಿ ನಿಂದಲೂ ಕೋಡ್ ಮಾಡಲು ನನಗೆ ಕಲಿಸಿದ ಮತ್ತು ನನ್ನ ಕೋಡಿಂಗ್ ಫೆÇೀಬಿಯಾ ವನ್ನು ಯಶಸ್ವಿಯಾಗಿ ಎದುರಿಸಲು ಸಹಾಯ ಮಾಡಿದ ನನ್ನ ಬೋಧಕರಿಂದಾಗಿ ನನಗೆ ಉತ್ತಮ ಮಾರ್ಗದರ್ಶನ ಸಿಕ್ಕಿದೆ. ಪ್ರತಿದಿನ ಡಿಎಸ್‍ಎಂಎಲ್ ಬಗ್ಗೆ ಕಲಿಯುವುದರಿಂದ ಅದರ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂದು ನನಗೆ ಅರಿವಾಗುತ್ತಿದೆ. ಮತ್ತು ವಿಶೇಷವಾಗಿ ಉದಯೋನ್ಮುಖ ಪ್ರವೃತ್ತಿಗಳೊಂದಿಗೆ, ಈ ಕ್ಷೇತ್ರವು ಮತ್ತಷ್ಟು ಬೆಳೆಯಲು ಬದ್ಧವಾಗಿದೆ ಎಂದು ಸ್ಕೇಲರ್ ಡಿಎಸ್‍ಎಂಎಲ್ ಹಳೆಯ ವಿದ್ಯಾರ್ಥಿ ಪ್ರಸ್ತುತ ಟಾಟಾ ಮೋಟಾರ್ಸ್‍ನಲ್ಲಿ ಕೆಲಸ ಮಾಡುತ್ತಿರುವ ಸುಧೇಂದು ಕುಮಾರ್ ಹೇಳಿದರು.

ಸ್ಕೇಲರ್ ತನ್ನ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ವಿಸ್ತರಿಸುವುದನ್ನು ಮುಂದುವರೆಸುತ್ತಿರುವುದರಿಂದ, ಕಂಪನಿಯು ಭಾರತದಲ್ಲಿ ಮತ್ತು ಅದರಾ ಚೆಗಿನ ಟೆಕ್ ಶಿಕ್ಷಣದ ಭೂದೃಶ್ಯವನ್ನು ಪರಿವರ್ತಿಸಲು ಸಮರ್ಪಿತವಾಗಿದೆ, ಡೈನಾಮಿಕ್ ಟೆಕ್ ಉದ್ಯಮದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಕಲಿಯುವವರನ್ನು ಸಜ್ಜುಗೊಳಿಸುತ್ತದೆ. ಟೈಮ್ ನಿಯತಕಾಲಿಕವು ಟೆಕ್ ಪ್ರತಿಭೆಯನ್ನು ಹೆಚ್ಚಿಸಲು ಮತ್ತು ಉದ್ಯಮದ ಕೌಶಲ್ಯಗಳ ಅಂತರವನ್ನು ಪರಿಹರಿಸಲು ಕಂಪನಿಯ ಸಮರ್ಪಣೆಯನ್ನು ಗುರುತಿಸಿದೆ, ಇದು 2024ರ ವಿಶ್ವದ ಟಾಪ್ ಎಡ್‍ಟೆಕ್ ರೈಸಿಂಗ್ ಸ್ಟಾರ್‍ಗಳಲ್ಲಿ #1 ಸ್ಥಾನವನ್ನು ನೀಡಿದೆ.