Monday, 9th December 2024

Steelcase: ಬೆಂಗಳೂರಿನಲ್ಲಿ ಹೊಸ ಡೀಲರ್ ಶೋರೂಮ್ ಉದ್ಘಾಟಿಸಿದ ಸ್ಟೀಲ್ ಕೇಸ್

Steelcase

ಬೆಂಗಳೂರು: ಕಾರ್ಯಸ್ಥಳ ವಿನ್ಯಾಸ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ಟೀಲ್ ಕೇಸ್ ಕಂಪನಿಯು (Steelcase) ಬೆಂಗಳೂರಿನಲ್ಲಿ ತನ್ನ ಹೊಸ ಡೀಲರ್ ಶೋರೂಮ್ ವೀಸ್ಪೇಸ್‌ಝಿ ವರ್ಕ್‌ಪ್ಲೇಸ್ ಸೊಲ್ಯೂಷನ್ಸ್ ಅನ್ನು ಉದ್ಘಾಟಿಸಿದೆ.

ದಕ್ಷಿಣ ಏಷ್ಯಾದಾದ್ಯಂತ ತನ್ನ ವ್ಯಾಪ್ತಿಯನ್ನು ಹೆಚ್ಚಿಸುವ ಸ್ಟೀಲ್‌ಕೇಸ್‌ನ ಉದ್ದೇಶದ ಭಾಗವಾಗಿ ದಿ ಜಾವರ್ ಗ್ರೂಪ್‌ನ ಸಹಭಾಗಿತ್ವದಲ್ಲಿ ಈ ಹೊಸ ಡೀಲರ್ ಶೋರೂಮ್ ಅನ್ನು ಸ್ಥಾಪಿಸಲಾಗಿದೆ. ವಿಸ್ಪೇಸ್ ಝಡ್ ಸ್ಟೀಲ್ ಕೇಸ್ – 4032, ಎರಡನೇ ಮಹಡಿ, 100 ಅಡಿ ರಸ್ತೆ, ಇಂದಿರಾ ನಗರ, ಬೆಂಗಳೂರು 560038- ಈ ವಿಳಾಸದಲ್ಲಿ ಆರಂಭವಾಗಿರುವ ಅತ್ಯಾಧುನಿಕ ಡೀಲರ್ ಶೋರೂಮ್ ಕಾರ್ಯ ಸ್ಥಳ ಉತ್ಪನ್ನಗಳನ್ನು ಬಯಸುವ ಬಿಸಿನೆಸ್‌ಗಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಈ ಸುದ್ದಿಯನ್ನೂ ಓದಿ | Pralhad Joshi: ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ; ಸೌರ ವಿದ್ಯುತ್ ಸ್ಥಾವರಗಳಿಗೆ ಶೇ.76ರಷ್ಟು ಸುಂಕ ಇಳಿಕೆ

ಸ್ಟೀಲ್ ಕೇಸ್ ಡೀಲರ್‌ಗಳು ಜಾಗತಿಕ ತಜ್ಞರ ಸಮುದಾಯದ ಭಾಗವಾಗಿದ್ದು, ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಒದಗಿಸುವ ಕಾರ್ಯ ಸ್ಥಳಗಳನ್ನು ರೂಪಿಸಲು ಸ್ಥಳೀಯ ಸಂಸ್ಥೆಗಳಿಗೆ ನೆರವಾಗುತ್ತಾರೆ. ಪ್ರತೀ ಉತ್ಪನ್ನದ ಹಿಂದೆ ಇರುವ ಸ್ಟೀಲ್‌ಕೇಸ್‌ನ ಜಾಗತಿಕ ಶಕ್ತಿ ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಾರೆ. ಇಂತಹ ಸಹಯೋಗಗಳು ಭಾರತದಲ್ಲಿ ಹೂಡಿಕೆ ಮಾಡುವ ಸ್ಟೀಲ್‌ಕೇಸ್‌ನ ಕಾರ್ಯಯೋಜನೆಯ ಭಾಗವಾಗಿದ್ದು, ಕಂಪನಿಯು ಇಲ್ಲಿ ಪ್ರಸ್ತುತ ನಾಲ್ಕು ವರ್ಕ್‌ಲೈಫ್ ಸೆಂಟರ್‌ಗಳನ್ನು ಮತ್ತು 10ಕ್ಕೂ ಹೆಚ್ಚು ಡೀಲರ್ ಶೋರೂಮ್‌ಗಳನ್ನು ಹೊಂದಿದೆ.

ಡೀಲರ್ ಶೋರೂಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಪನಿಯ ಭಾರತ ಮತ್ತು ಸಾರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ತೀರ್ಥಂಕರ ಬಸು ಮಾತನಾಡಿ, “ಸ್ಟೀಲ್ ಕೇಸ್‌ನ ವೀಸ್ಪೇಸ್‌ಝಿ ಡೀಲರ್ ಶೋರೂಮ್ ಉದ್ಘಾಟನೆ ಆಗಿರುವುದು ಭಾರತದಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಅಭಿವೃದ್ಧಿ ಪ್ರಯಾಣದಲ್ಲಿ ಮಹತ್ವದ ಕ್ಷಣವಾಗಿದೆ.

ಈ ಸುದ್ದಿಯನ್ನೂ ಓದಿ | BESCOM Cash Counter: ವಿದ್ಯುತ್‌ ಗ್ರಾಹಕರಿಗೆ ಗುಡ್‌ ನ್ಯೂಸ್‌, ಸೆ. 8, 15ರ ಭಾನುವಾರವೂ ತೆರೆದಿರಲಿವೆ ಬೆಸ್ಕಾಂ ಕ್ಯಾಶ್‌ ಕೌಂಟರ್‌

ನಾವು ವೀಸ್ಪೇಸ್‌ಝಿ ಜತೆಗೆ ಸಹಭಾಗಿತ್ವ ಮಾಡಿಕೊಂಡಿದ್ದು, ಅವರು ಗ್ರಾಹಕರ ಅನುಭವ ಹೆಚ್ಚಿಸುವ ಮತ್ತು ಗ್ರಾಹಕರು ಮತ್ತು ಬಳಕೆದಾರರಿಗೆ ಮೊದಲ ಆದ್ಯತೆ ನೀಡುವ ಸ್ಟೀಲ್ ಕೇಸ್ ಮೌಲ್ಯಗಳನ್ನು ಪಾಲಿಸಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ. ಭಾರತವು ನಮಗೆ ಬಹಳ ಮಹತ್ವದ ಮಾರುಕಟ್ಟೆಯಾಗಿದೆ ಮತ್ತು ಬೆಂಗಳೂರು ಒಂದು ಕ್ರಿಯಾಶೀಲ ಪರಿಸರ ವ್ಯವಸ್ಥೆಯಾಗಿದ್ದು, ಇಲ್ಲಿ ಹೊಸ ಹೊಸ ಸ್ಟಾರ್ಟ್-ಅಪ್‌ಗಳು ಕಾರ್ಯ ನಿರ್ವಹಿಸುವ ಮೂಲಕ ಮತ್ತು ಜಾಗತಿಕ ಸಂಸ್ಥೆಗಳು ವ್ಯಾಪ್ತಿ ವಿಸ್ತರಣೆ ಮಾಡುವ ಮೂಲಕ ಅದ್ಭುತ ಬೆಳವಣಿಗೆ ಸಾಧ್ಯವಾಗುತ್ತಿದೆ. ಹೆಚ್ಚುತ್ತಲೇ ಇರುವ ನಮ್ಮ ವಿತರಕರು ಮತ್ತು ವರ್ಕ್‌ಲೈಫ್‌ ಸಮುದಾಯದ ಜತೆ ಸೇರಿಕೊಂಡು ನವೀನ ಉತ್ಪನ್ನಗಳು ಮತ್ತು ಉತ್ತಮ ಗ್ರಾಹಕ ಸೇವೆ ಒದಗಿಸಿ ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುವ ವಿಚಾರದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದರು.

ಹೊಸ ಸ್ಟೀಲ್ ಕೇಸ್ ವರ್ಕ್‌ಪ್ಲೇಸ್ ಸೊಲ್ಯೂಷನ್ಸ್ ಶೋರೂಮ್‌ನಲ್ಲಿ ಆಧುನಿಕ ಕಾರ್ಯಸ್ಥಳಗಳ ಉತ್ಪಾದಕತೆ, ಅನುಕೂಲತೆ ಮತ್ತು ಸೊಗಸನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿರುವ ಸ್ಟೀಲ್‌ಕೇಸ್‌ನ ವಿಶ್ವ ದರ್ಜೆಯ ಕಚೇರಿ ಪೀಠೋಪಕರಣಗಳು ಮತ್ತು ಪರಿಕರಗಳ ವಿಸ್ತಾರವಾದ ಪೋರ್ಟ್‌ಫೋಲಿಯೋ ಲಭ್ಯವಿರುತ್ತದೆ.

ವಿವಿಧ ರೀತಿಯ ಕಾರ್ಯ ಸ್ಥಳಗಳಿಗೆ ಸೂಕ್ತವಾಗುವ ಪ್ರಶಸ್ತಿ ವಿಜೇತ ಆಸನಗಳಾದ ಥಿಂಕ್®, ಗೆಸ್ಚರ್™ ಮತ್ತು ಸ್ಟೀಲ್ ಕೇಸ್ ಕರ್ಮನ್™ ಟಾಸ್ಕ್ ಚೇರ್‌ಗಳಿಂದ ಹಿಡಿದು ಸಹಯೊಗದ ರಚನೆಗಳಾದ ಲೆಕ್ಸ್‌ ಕೋ, ಮೈಗ್ರೇಷನ್ ಎಸ್‌ಇ ಪ್ರೊ, ಫ್ಲೆಕ್ಸ್ ಕಲೆಕ್ಷನ್ ಮತ್ತು ವರ್ಕ್‌ವ್ಯಾಲೆಟ್‌ನಂತಹ ಪೀಠೋಪಕರಣಗಳವರೆಗೆ ಸ್ಟೀಲ್‌ಕೇಸ್‌ನ ಎಲ್ಲಾ ಹೊಸ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ಸ್ಟೀಲ್ ಕೇಸ್ ಪೋರ್ಟ್‌ಫೋಲಿಯೊ ಜತೆಗೆ ಗ್ರಾಹಕರು ಸ್ಟೀಲ್‌ಕೇಸ್‌ನ ಪಾಲುದಾರರ ಉತ್ಪನ್ನಗಳನ್ನು ಸಹ ನೋಡಬಹುದು. ಈ ವಿಭಾಗದಲ್ಲಿ ಆರೆಂಜ್‌ಬಾಕ್ಸ್, ವಿಕ್ಕಾರ್ಬ್ ಮತ್ತು ಸೆಗಿಸ್‌ನಂತಹ ಹೆಸರಾಂತ ಜಾಗತಿಕ ವಿನ್ಯಾಸಕರು ಮತ್ತು ಉದ್ಯಮ- ಪ್ರಮುಖ ಬ್ರ್ಯಾಂಡ್‌ಗಳ ಉತ್ಪನ್ನಗಳು ಕೂಡ ಸೇರಿವೆ.

ಈ ಸುದ್ದಿಯನ್ನೂ ಓದಿ | Ganesh Chaturthi 2024: ಫೆಸ್ಟಿವ್‌ ಸೀಸನ್‌‌‌ನಲ್ಲಿ ಮಕ್ಕಳಿಗಾಗಿ ಬಂತು ಆಕರ್ಷಕ ಎಥ್ನಿಕ್‌ ವೇರ್ಸ್

ಜಾವರ್ ಗ್ರೂಪ್‌ನ ಏರಿಯಾ ಇನ್ವೆಸ್ಟ್ಮೆಂಟ್ಸ್/ ವೀಸ್ಪೇಸ್‌ಝಿ ವಿಭಾಗದ ನಿರ್ದೇಶಕರಾದ ರಿತು ಜಾವರ್ ಮತ್ತು ವಿಘ್ನೇಶ್ ರಘುನಾಥನ್, ಸಹಭಾಗಿತ್ವದ ಕುರಿತು ಮಾತನಾಡಿ, “ಸ್ಟೀಲ್‌ಕೇಸ್‌ ಜತೆಗಿನ ನಮ್ಮ ಸಹಭಾಗಿತ್ವ ಮತ್ತು ದಶಕಗಳ ನಾವು ಈ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯ ಜತೆಗೆ ಕಚೇರಿ ಸ್ಥಳಗಳನ್ನು ಮರುರೂಪಿಸಲು ನಾವು ಸಿದ್ಧರಾಗಿದ್ದೇವೆ. ನಮ್ಮ ವಿಶ್ವ-ದರ್ಜೆಯ ಉತ್ಪನ್ನಗಳು ಕೇವಲ ಚಂದ ಕಾಣಿಸುವುದು ಮಾತ್ರವೇ ಅಲ್ಲ, ಅಭಿವೃದ್ಧಿ ಸಾಧಿಸುವ ಗುರಿಯನ್ನು ಹೊಂದಿರುವ ಬಿಸಿನೆಸ್‌ಗಳಿಗೆ ಅತ್ಯಗತ್ಯವಾಗಿದೆ. ಉತ್ಪಾದಕತೆ ಹೆಚ್ಚಿಸುವ ಮತ್ತು ಬೆಳವಣಿಗೆ ಹೊಂದುವ ವಾತಾವರಣ ರೂಪಿಸುವುದು ಪ್ರತಿ ಬಿಸಿನೆಸ್‌ಗೂ ಅವಶ್ಯವಾಗಿದೆ ಮತ್ತು ಅದನ್ನು ಸಾಧ್ಯವಾಗಿಸಲು ನಾವು ನೆರವಾಗಲಿದ್ದೇವೆ ಎಂದು ಹೇಳಿದರು.