Wednesday, 11th December 2024

ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ

ಬೆಂಗಳೂರು: ಮಣಿಯಾಚಿ ರೈಲು ನಿಲ್ದಾಣದ ಬಳಿ ಚೆನ್ನೈನಿಂದ ತಿರುನೆಲ್ವೇಲಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ಮೇಲೆ ಸೋಮವಾರ ಕಲ್ಲು ತೂರಾಟ ನಡೆದಿದ್ದು, ರೈಲಿನ ಕೋಚ್‌ನ ಗಾಜುಗಳು ಒಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ 9 ಬೋಗಿಗಳಿಗೆ ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚೆನ್ನೈನಿಂದ ಎಂದಿನಂತೆ ಹೊರಡುತ್ತಿದ್ದ ವಂದೇ ಭಾರತ್ ರೈಲು ಮಣಿಯಾಚಿ ನಿಲ್ದಾಣವನ್ನು ದಾಟುತ್ತಿದ್ದಾಗ ಕೆಲ ದುಷ್ಕರ್ಮಿ ಗಳು ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ನ ಕಿಟಕಿ ಮತ್ತು ಕಿಟಕಿಯ ಗಾಜು ಎಕ್ಸಿಕ್ಯೂಟಿವ್ ಚೇರ್ ಒಡೆದಿವೆ. ಮಾಹಿತಿ ಪಡೆದ ರೈಲ್ವೆ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.