ಬೆಂಗಳೂರು: ಆದಿಯಿಂದ ಅಂತ್ಯದವರೆಗಿನ ಮಾನವೀಯ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ವಿಶೇಷತೆ ಹೊಂದಿರುವ ತಾಂತ್ರಿಕ – ಪರಿಸರ ವೇಗವರ್ಧಕ ಸಂಸ್ಥೆಯಾದ ಎಸ್‌ಟಿಎಸ್ ಗ್ಲೋಬಲ್, ಬೆಂಗಳೂರಿನಲ್ಲಿ ತನ್ನ ಕಚೇರಿ ಉದ್ಘಾಟಿಸಿದೆ. ಈ ವಿಸ್ತರಣೆಯು ಸಂಸ್ಥೆಗೆ ಪ್ರಮುಖ ಮೈಲಿಗಲ್ಲಾಗಿದೆ. ಅಲ್ಲದೇ ಅದರ ಕಾರ್ಯಾಚರಣೆ ಮತ್ತು ಹಾಜರಿಯನ್ನು ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಗೆ ವಿಸ್ತರಿಸುತ್ತದೆ.
ಎಸ್‌ಟಿಎಸ್ ಗ್ಲೋಬಲ್‌ನ ಸಹ-ಸ್ಥಾಪಕ ಡಾ. ಅಂಶು ಶರ್ಮಾ ಅವರು ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, “ನಮ್ಮ ಸಾಮರ್ಥ್ಯಗಳನ್ನು ವಿಸ್ತರಿಸು ವಲ್ಲಿ ನಮ್ಮ ಬದ್ಧತೆಯನ್ನು ನಮ್ಮ ಬೆಂಗಳೂರು ಕಚೇರಿಯ ಪ್ರಾರಂಭ ಬಿಂಬಿಸುತ್ತದೆ. ಪರಿಸರದಿಂದ ಚಾಲನೆ ಪಡೆಯುವ ವಿಸ್ತರಿಸಬಹುದಾದ ಮತ್ತು ಬೆಳೆಸಬಹುದಾದ ಹಾಗೂ ತಂತ್ರಜ್ಞಾನ ಮತ್ತು ಸಮುದಾಯ-ಮಾಲೀಕತ್ವದ ಕ್ರಮಗಳಿಂದ ಚಾಲಿತವಾದ ಪರಿಹಾರಗಳನ್ನು ಸಹ-ವಿನ್ಯಾಸಗೊಳಿಸುವತ್ತ ನಮ್ಮ ಗಮನ ಕೇಂದ್ರೀಕೃತವಾಗಿದೆ” ಎಂದರು.
ನೂತನ ಬೆಂಗಳೂರು ಕಚೇರಿಯು ಅದರ ದೆಹಲಿ ಎನ್‌ಸಿಆರ್ ಕಚೇರಿಗಳಿಗೆ ಪೂರಕವಾಗಿರುತ್ತದೆಯಲ್ಲದೇ ಜಗತ್ತಿನ ಎಲ್ಲೆಡೆ ಇರುವ ಎಸ್‌ಟಿಎಸ್ ಗ್ಲೋಬಲ್‌ನ ಯೋಜನಾತ್ಮಕ ಹಾಜರಿಯನ್ನು ಸದೃಢಗೊಳಿಸುತ್ತದೆ. ಹೆಚ್ಚಿನ ಮಾಹಿತಿಗಳಿಗೆ ಸಂದರ್ಶಿಸಿ: www.sts.global