Saturday, 14th December 2024

Traffic Restrictions: ಗಣೇಶ ವಿಸರ್ಜನಾ ಮೆರವಣಿಗೆ; ಸೆ.14, 15ರಂದು ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

Traffic restrictions

ಬೆಂಗಳೂರು: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಸೆ. 14ರಂದು ಆರ್.ಟಿ. ನಗರ ಮತ್ತು ಸೆ. 15 ರಂದು ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯ ಪ್ರಮುಖ ಮಾರ್ಗಗಳಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡಿದ್ದು, ಸಂಚಾರ ನಿರ್ಬಂಧವಿರುವ ಹಾಗೂ ಪರ್ಯಾಯ ಮಾರ್ಗಗಳ (Traffic Restrictions) ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸೆ.14ರಂದು ಆರ್.ಟಿ. ನಗರ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ

ಬೆಂಗಳೂರು ನಗರ ಸಂಚಾರ ಉತ್ತರ ವಿಭಾಗದ ವ್ಯಾಪ್ತಿಯ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ.14ರಂದು ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಜರುಗಲಿದ್ದು, ಈ ಮೆರವಣಿಗೆಯಲ್ಲಿ ಡಿ.ಜೆ, ಟ್ಯಬ್ಲೋಗಳು, ಸಂಗೀತ, ಡೊಳ್ಳುಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಮಾರು 55 ರಿಂದ 60 ಗಣೇಶ ಮೂರ್ತಿಗಳು ಮೆರವಣಿಗೆಯ ಮೂಲಕ ಸಾಗುವುದರಿಂದ ಸುಗಮ ಸಂಚಾರ ಹಿತದೃಷ್ಟಿಯಿಂದ ಸೆ.14ರಂದು ಸಂಜೆ 6ಗಂಟೆಯಿಂದ ಸೆ.15ರ ಬೆಳಗ್ಗೆ 4ಗಂಟೆವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಮಾರ್ಗ ಬದಲಾವಣೆ ವಿವರಗಳು

1.ಸುಲ್ತಾನ್‌ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

ದಿಣ್ಣೂರು ಮುಖ್ಯ ರಸ್ತೆ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು-ಆರ್.ಟಿ.ನಗರ ಮುಖ್ಯರಸ್ತೆ – ಗುಂಡುರಾವ್‌ ಜಂಕ್ಷನ್ ಬಲತಿರುವು- ಬೆಂಗಳೂರು-ಬಳ್ಳಾರಿ ರಸ್ತೆ-ಎಡತಿರುವು- (ಮೇಕ್ರಿ ಸರ್ಕಲ್ ಅಂಡರ್‌ಪಾಸ್ ಮೂಲಕ ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದು) ಹಾಗೂ ಮೇಟ್ರಿ ಸರ್ಕಲ್ ಸರ್ವಿಸ್ ರಸ್ತೆ ಎಡತಿರುವು -ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

2.ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು.
ಜಯಮಹಲ್ ರಸ್ತೆ- ಮೇಕ್ರಿ ಸರ್ಕಲ್ – ಬಲತಿರುವು ಬೆಂಗಳೂರು ಬಳ್ಳಾರಿ ರಸ್ತೆ – ಸಿ.ಬಿ.ಐ ಅಂಡರ್
ಪಾಸ್ ಬಲತಿರುವು ಸಿ.ಬಿ.ಐ ರಸ್ತೆ- ಬಲತಿರುವು- ಆರ್.ಟಿ.ನಗರ ಮುಖ್ಯ ರಸ್ತೆ-ಆ‌ರ್.ಟಿ.ನಗರ
ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.

3. ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

ಮೇಕ್ರಿಸರ್ಕಲ್-ಎಡತಿರುವು- ಬೆಂಗಳೂರು- ಬಳ್ಳಾರಿ ರಸ್ತೆ-ಸಿ.ಬಿ.ಐ ಅಂಡರ್ ಪಾಸ್-ಬಲತಿರುವು ಸಿ.ಬಿ.ಐ ರಸ್ತೆ -ಬಲತಿರುವು ಆರ್.ಟಿ ನಗರ ಮುಖ್ಯ ರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.

4. ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:
ಮೇಕ್ರಿ ಸರ್ಕಲ್ ಅಂಡರ್‌ಪಾಸ್-ಬೆಂಗಳೂರು ಬಳ್ಳಾರಿ ರಸ್ತೆ- ಸಿ.ಬಿ.ಐ. ಜಂಕ್ಷನ್ – ಕರ್ನಾಟಕ ಸ್ಪಿರಿಟ್ -ಬಲ ತಿರುವು ಬಿಬಿ ಸರ್ವೀಸ್ ರಸ್ತೆ-ಎಡತಿರುವು-ಸಿ.ಬಿ.ಐ ರಸ್ತೆ -ಬಲತಿರುವು ಆರ್.ಟಿ.ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.

ಈ ಮೇಲ್ಕಂಡ ಮುಖ್ಯರಸ್ತೆಗಳಲ್ಲಿ ಸೆ.14ರ ಸಂಜೆ 6ಗಂಟೆಯಿಂದ ಪ್ರಾರಂಭಗೊಂಡು ಸೆ.15ರ ಬೆಳಗ್ಗೆ 4 ಗಂಟೆಯವರೆಗೆ ಈ ಸಂಚಾರ ಮಾರ್ಗದ ಮಾರ್ಪಾಡು ಜಾರಿಯಲ್ಲಿರುತ್ತದೆ.

ಸೆ.15ರಂದು ಯಲಹಂಕ ವ್ಯಾಪ್ತಿಯ ಸಂಚಾರ ನಿರ್ಬಂಧ ವಿವರ

ಬೆಂಗಳೂರು ನಗರ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.15 ರಂದು ಯಲಹಂಕ ಉಪನಗರ, ಸಿಂಗಪುರ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ ವಿದ್ಯಾರಣ್ಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿರುವ ಅಂದಾಜು 100 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ನಡೆಯಲಿದ್ದು, ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯು ಎರಡು ಮಾರ್ಗದಲ್ಲಿ ಪ್ರತ್ಯೇಕವಾಗಿ ನಡೆಯಲಿದ್ದು, ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಮೇಲ್ಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾದೆ.

ಮೆರವಣಿಗೆ- 1: ಸಂಭ್ರಮ್ ಕಾಲೇಜ್ ಜಂಕ್ಷನ್‌ನಿಂದ ಪ್ರಾರಂಭವಾಗಿ ಅಲ್ಲಾಳಸಂದ್ರ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಅಂತ್ಯಗೊಳ್ಳಲಿದೆ.
ಮೆರವಣಿಗೆ- 2: ಸಿಂಗಪುರ ಲೇಔಟ್‌ನಿಂದ ಪ್ರಾರಂಭವಾಗಿ ದೊಡ್ಡಬೊಮ್ಮಸಂದ್ರ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಅಂತ್ಯಗೊಳ್ಳಲಿದೆ.

ಆದ್ದರಿಂದ ಎರಡು ಮೆರವಣಿಗೆಯ ಸಂದರ್ಭದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಡುಗಳನ್ನು ಮಾಡಲಾಗಿದೆ.

ಸಂಚಾರ ನಿರ್ಬಂಧ:

ಬಿಇಎಲ್ ಸರ್ಕಲ್- ಗಂಗಮ್ಮ ಸರ್ಕಲ್ ಕಡೆಯಿಂದ ಯಲಹಂಕ ಮಾರ್ಗಕ್ಕೆ ಎಂಎಸ್ ಪಾಳ್ಯ ಮುಖಾಂತರ ಉನ್ನಿಕೃಷ್ಣನ್ ರಸ್ತೆ – ಜೆಲ್ಲಿ ಮಿಷನ್ ಅಟ್ಟೂರು ಜಂಕ್ಷನ್ ಮದರ್ ಡೇರಿ ಸರ್ಕಲ್ ಜಿಕೆವಿಕೆ ಬ್ಯಾಕ್ ಗೇಟ್ ತಿರುಮಲ ಡಾಬಾ ಮುಖಾಂತರ ಯಲಹಂಕ ಕಡೆಗೆ ಬರುವ ಬಿಎಂಟಿಸಿ ಬಸ್, ಭಾರಿ ವಾಹನಗಳನ್ನು ಮೆರವಣಿಗೆಯ ಸಂಚರಿಸುವ ಮಾರ್ಗದಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧಿಸಲಾಗಿದೆ.

ನಿರ್ಬಂಧಿಸಿದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:

  1. ಜಾಲಹಳ್ಳಿ, ಪೀಣ್ಯ ಕಡೆಯಿಂದ ಯಲಹಂಕ ಕಡೆಗೆ ಬರುವ ಬಿಎಂಟಿಸಿ ಬಸ್‌ಗಳು ಹಾಗೂ ಸಾರ್ವಜನಿಕರ ವಾಹನಗಳು ಗಂಗಮ್ಮ ಸರ್ಕಲ್‌ನಲ್ಲಿ ಬಲ ತಿರುವು ಪಡೆದು, ಬಿಇಎಲ್ ಸರ್ಕಲ್ ಜಂಕ್ಷನ್ ಮೂಲಕ ಸಂಚರಿಸಿ ಎಡ ತಿರುವು ಪಡೆದು ದೊಡ್ಡಬೊಮ್ಮಸಂದ್ರ ಆರ್ಚ್- ನಂಜಪ್ಪ ಸರ್ಕಲ್- ತಿಂಡ್ಲು ಗ್ರಾಮದ ರಸ್ತೆ- ಜಿಕೆವಿಕೆ ಡಬಲ್ ರಸ್ತೆ ಕ್ರಾಸ್ – ಎಡ ತಿರುವು ಜಿಕೆವಿಕೆ ಬ್ಯಾಕ್ ಗೇಟ್- ಬಲ ತಿರುವು- ಹೋಗಬಹುದಾಗಿರುತ್ತದೆ. ಉನ್ನಿಕೃಷ್ಣನ್ ಮುಖ್ಯ ರಸ್ತೆ ಮಾರ್ಗವಾಗಿ ಯಲಹಂಕ ಕಡೆಗೆ
  1. ಯಶವಂತಪುರ, ವಿಜಯನಗರ, ಕೆಂಗೇರಿ ಕಡೆಯಿಂದ ಯಲಹಂಕ ಕಡೆಗೆ ಬರುವ ಬಿಎಂಟಿಸಿ ಬಸ್‌ಗಳು ಹಾಗೂ ಸಾರ್ವಜನಿಕರ ವಾಹನಗಳು ಬಿಇಎಲ್ ಸರ್ಕಲ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು – ದೊಡ್ಡಬೊಮ್ಮಸಂದ್ರ – ನಂಜಪ್ಪ ಸರ್ಕಲ್ ತಿಂಡ್ಲು ಗ್ರಾಮದ ರಸ್ತೆ – ಜಿಕೆವಿಕೆ ಡಬಲ್ ರಸ್ತೆ ಕ್ರಾಸ್‌ನಲ್ಲಿ ಎಡ ತಿರುವು – ಜಿಕೆವಿಕೆ ಬ್ಯಾಕ್ ಗೇಟ್ ಬಳಿ ಬಲ ತಿರುವು ಪಡೆದು ಉನ್ನಿಕೃಷ್ಣನ್ ಮುಖ್ಯ ರಸ್ತೆ ಮಾರ್ಗವಾಗಿ ಯಲಹಂಕ ಕಡೆಗೆ ಹೋಗಬಹುದಾಗಿರುತ್ತದೆ.
  2. ಯಲಹಂಕ ಕಡೆಯಿಂದ ಯಶವಂತಪುರ, ಕೆಂಗೇರಿ, ವಿಜಯನಗರ, ಪೀಣ್ಯ, ಜಾಲಹಳ್ಳಿ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ಹಾಗೂ ಸಾರ್ವಜನಿಕರ ವಾಹನಗಳು ಉನ್ನಿಕೃಷ್ಣನ್ ರಸ್ತೆಯ ಮೂಲಕ ಜಿಕೆವಿಕೆ ಬ್ಯಾಕ್ ಗೇಟ್ ಬಳಿ ಎಡ ತಿರುವು ಪಡೆದು ತಿಂಡ್ಲ ಕ್ರಾಸ್ ರಸ್ತೆ (ಜಿಕೆವಿಕೆ ಡಬಲ್ ರಸ್ತೆ) ಬಳಿ ಬಲ ತಿರುವು ಪಡೆದು- ನಂಜಪ್ಪ ಸರ್ಕಲ್ ರಸ್ತೆ ಮುಖಾಂತರ- ದೊಡ್ಡಬೊಮ್ಮಸಂದ್ರ ಆರ್ಚ್ ತಲುಪಿ- ಬಿಇಎಲ್ ಸರ್ಕಲ್ ಕಡೆಗೆ ಹೋಗಬಹುದಾಗಿದೆ.