Tuesday, 17th September 2024

ಬೆಂಗಳೂರಿನಲ್ಲಿ ಎರಡನೇ ಟಾಯ್ ಟ್ರೇನ್-ಥೀಮ್ಡ್ ರೆಸ್ಟೋರೆಂಟ್ ಅನಾವರಣಗೊಳಿಸಿದ ಪ್ಲಾಟ್‌ಫಾರ್ಮ್ ೬೫

ಬೆಂಗಳೂರು: ಭಾರತದಲ್ಲಿ ಆಟಿಕೆ ರೈಲುಗಳ ಮೂಲಕ ಆಹಾರ ಪದಾರ್ಥಗಳನ್ನು ಸಾದರಪಡಿಸುವ ರೆಸ್ಟೋರೆಂಟ್‌ಗಳ ಅತ್ಯಂತ ದೊಡ್ಡ ಸರಣಿಯಾದ ಪ್ಲಾಟ್‌ ಫಾರ್ಮ್ ೬೫ ದೇಶದಲ್ಲಿ ತನ್ನ ೧೧ನೇ ರೆಸ್ಟೋರೆಂಟ್ ಆರಂಭಿಸುವುದನ್ನು ಹೆಮ್ಮೆಯಿಂದ ಪ್ರಕಟಿಸಿದೆ.

ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ರಾಜರಾಜೇಶ್ವರಿ ನಗರದಲ್ಲಿ ಈ ರೆಸ್ಟೋರೆಂಟ್ ಆರಂಭ ವಾಗಿದೆ.

ಬುಧವಾರ, ಸೆಪ್ಟೆಂಬರ್ ೨೭, ೨೦೨೩ರಂದು ಉದ್ಘಾಟನಾ ಸಮಾರಂಭ ನಡೆದಿದ್ದು, ಈ ಸಂದರ್ಭ ದಲ್ಲಿ ಹಾಜರಿದ್ದ ಗಣ್ಯರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸದಸ್ಯರಾದ ಕುಸುಮ ಹನುಮಂತ ರಾಯಪ್ಪ, ಗೋವಿಂದರಾಜ ನಗರದ ಶಾಸಕರಾದ ಪ್ರಿಯಾ ಕೃಷ್ಣ ಮತ್ತು ವೈಜಿಆರ್ ಕಾರ್ಪ್ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಯೋಗ ಮೂರ್ತಿ ಸೇರಿದ್ದರು.

ಪ್ಲಾಟ್‌ಫಾರ್ಮ್ ೬೫ ತಂಡದ ಪರವಾಗಿ ಸಂಸ್ಥೆಯ ಉಪಾಧ್ಯಕ್ಷ ವೆಂಕಟೇಶ ಗೋಪಿ ಶೆಟ್ಟಿ, ಕಾರ್ಪೋರೇಟ್ ಪ್ರಧಾನ ವ್ಯವಸ್ಥಾಪಕರಾದ ಶ್ರೀಕಾಂತ್ ಭಂಡಾರ್, ಕಾರ್ಯನಿರ್ವಾಹಕ ಶೆಫ್ ಸುರೇಶ್ ವಿಎಚ್ ಮತ್ತು ಆರ್‌ಆರ್ ನಗರದ ಕಾರ್ಯನಿರ್ವಾಹಕ ನಿರ್ದೇಶಕರಾದ ಮಹೇಶ್ ಪ್ರಟ್ಟಿಪತಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

“ಪ್ಲಾಟ್‌ಫಾರ್ಮ್ ೬೫ಗೆ ಇದು ಗಮನಾರ್ಹ ಮೈಲುಗಲ್ಲಾಗಿದೆ’’ ಎಂದು ಹೇಳಿದ ಪ್ಲಾಟ್‌ಫಾರ್ಮ್ ೬೫ರ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಂಸ್ಥಾಪಕರಾದ ಆದ ಸದ್ಗುಣ ಪಥ ಅವರು, “ಈ ಚಟುವಟಿಕೆಯ ನಗರ ವಾದ ಬೆಂಗಳೂರಿಗೆ ಮತ್ತೊಮ್ಮೆ ನಮ್ಮ ಅನನ್ಯ ಭೋಜನ ಅನುಭವವನ್ನು ತರುವಲ್ಲಿ ನಾವು ರೋಮಾಂಚಿತರಾಗಿದ್ದೇವೆ.

ನೆನಪಿಸಿಕೊಳ್ಳುವಂತಹ ಭೋಜನ ಅನುಭವಗಳನ್ನು ಸೃಷ್ಟಿಸುವಲ್ಲಿ ನಮ್ಮ ಬದ್ಧತೆ ಬೆಳೆಯುವುದನ್ನು ಮುಂದುವರಿಸಿದ್ದು, ನಮ್ಮ ಪೋಷಕರೊಂದಿಗೆ ಈ ವಿಶೇಷ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಉತ್ಸಾಹಿತರಾಗಿದ್ದೇವೆ. ಭಾರತದಲ್ಲಿ ೧೧ ರೆಸ್ಟೋರೆಂಟ್‌ಗಳೊ೦ದಿಗೆ ಈ ಶಾಖೆ ಬೆಂಗಳೂರು ನಗರದಲ್ಲಿ ನಮ್ಮ ಎರಡನೇಯದಾಗಿದ್ದು, ನಮ್ಮಲ್ಲಿ ಭೋಜನ ಸವಿಯುವವರಿಗೆ ಮತ್ತಷ್ಟು ಹೆಚ್ಚಿನ ಅಸಾಧಾರಣ ಅನುಭವಗಳನ್ನು ಪೂರೈಸುವುದನ್ನು ನಾವು ಎದುರು ನೋಡು ತ್ತಿದ್ದೇವೆ’’ ಎಂದರು.

ಇ೦ಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಸದಸ್ಯರಾದ ಕುಸುಮ ಹನುಮಂತರಾಯಪ್ಪ ಅವರು ಮಾತನಾಡಿ, “ಬೆಂಗಳೂರಿನಲ್ಲಿ ಪ್ಲಾಟ್‌ಫಾರ್ಮ್ ೬೫ರ ನೂತನ ರೆಸ್ಟೋರೆಂಟ್ ಉದ್ಘಾಟಿಸುವಲ್ಲಿ ನಾನು ಹರ್ಷಗೊಂಡಿದ್ದೇನೆ. ಆನಂದಪೂರ್ಣ ಪಾಕಶೈಲಿಯ ಅನುಭವವನ್ನು ಇದು ಸಾದರಪಡಿಸುವುದಲ್ಲದೆ, ನಮ್ಮ ನೆರೆಹೊರೆಯ ಪ್ರದೇಶವನ್ನು ಉತ್ತಮಗೊಳಿಸುವಲ್ಲಿ ಕೊಡುಗೆ ನೀಡುತ್ತದೆ. ಈ ರೆಸ್ಟೋರೆಂಟ್ ಕೇವಲ ಪ್ರತ್ಯೇಕವಾದ ಭೋಜನಗಳನ್ನು ನೀಡುವುದಲ್ಲದೆ, ನಮ್ಮ ನೆಚ್ಚಿನ ರಾಜರಾಜೇಶ್ವರಿ ನಗರದಲ್ಲಿ ಸಮುದಾಯ ತೊಡಗಿಸಿಕೊಳ್ಳಲು, ಒಗ್ಗಟ್ಟಿನ ಪ್ರಜ್ಞೆ ಪೋಷಿಸಲು ಮತ್ತು ಒಟ್ಟಾರೆಯಾಗಿ ಜೀವನದ ಗುಣಮಟ್ಟವನ್ನು ವಿಸ್ತರಿಸಲು ನೆರವಾಗಲಿದೆ’’ ಎಂದರು.

ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಅವರು ನೂತನ ರೆಸ್ಟೋರೆಂಟ್ ಕುರಿತು ತಮ್ಮ ಉತ್ಸಾಹ ವ್ಯಕ್ತಪಡಿಸಿ ಮಾತನಾಡಿ, “ರಾಜರಾಜೇಶ್ವರಿ ನಗರದಲ್ಲಿನ ಸಂಪೂರ್ಣ ನೂತನವಾದ ಪ್ಲಾಟ್‌ಫಾರ್ಮ್ ೬೫ ರೆಸ್ಟೋರೆಂಟ್‌ನ ಆರಂಭವು ನಮ್ಮ ಸಮುದಾಯಕ್ಕೆ ಮಹತ್ವದ ಸಂದರ್ಭವಾಗಿದೆ. ನಮ್ಮಲ್ಲಿನ ವಿವಿಧ ಪಾಕಶೈಲಿಯ ಭೋಜನಗೃಹಗಳ ಕ್ಷೇತ್ರಕ್ಕೆ ಅನನ್ಯವಾದ ಸ್ವಾದವನ್ನು ಇದು ನೀಡುತ್ತದೆ. ಜೊತೆಗೆ ರಾಜರಾಜೇಶ್ವರಿ ನಗರದ ಸಮೃದ್ಧ ಇತಿಹಾಸ ಮತ್ತು ರೈಲುಗಳ ಆಕರ್ಷಣೆಯೊಂದಿಗೆ ಹಳೆಯ ಕಾಲದ ಅನುಭವದ ಪ್ರಯಾಣವನ್ನು ಸಾದರಪಡಿಸುತ್ತದೆ’’ ಎಂದರು.

ನೂತನವಾಗಿ ತೆರೆಯಲಾಗಿರುವ ರೆಸ್ಟೋರೆಂಟ್ ರಾಜರಾಜೇಶ್ವರಿ ನಗರದ ಸಮೃದ್ಧ ಇತಿಹಾಸಕ್ಕೆ ಗೌರವ ಸಲ್ಲಿಸುವ ಮತ್ತು ಜನರನ್ನು ಹಿಡಿದಿಡುವಂತಹ ಒಳಾಂಗಣದಿ೦ದ ಕೂಡಿದೆ. ಹಳೆಯ ಶೈಲಿಯ ಸೌಂದರ್ಯ ಬಿಂಬಿಸುವ ಕಲ್ಲಿನ

ಗೋಡೆಗಳು ಮತ್ತು ವಿಶೇಷವಾಗಿ ಆರಿಸಲಾದ ಕಲಾವಸ್ತುಗಳು, ಭೋಜನ ಸೇವಿಸುವವರನ್ನು ಕಳೆದುಹೋದ ಹಳೆಯ ಯುಗಕ್ಕೆ ಒಯ್ಯುತ್ತದೆ. ಅಲ್ಲದೆ, ಆತ್ಮೀಯ ವಾದ ಮತ್ತು ಆಹ್ವಾನಿಸುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ. ಪ್ಲಾಟ್‌ಫಾರ್ಮ್೬೫ನ ಎರಡನೇ ರೆಸ್ಟೋರೆಂಟ್ ನಗರದ ಭೋಜನ ಕ್ಷೇತ್ರಕ್ಕೆ ಅಚ್ಚುಮೆಚ್ಚಿನ ಸೇರ್ಪಡೆಯಾಗುವ ಭರವಸೆ ನೀಡುತ್ತಿದೆ. ಹಳೆಯ ಕಾಲದ ಸ್ಪರ್ಶದೊಂದಿಗೆ ರುಚಿಕರ ಪಾಕಶೈಲಿಯನ್ನು ಮಿಶ್ರಣಗೊಳಿಸುವ ಮರೆಯಲಾಗ ದಂತಹ ಅನುಭವ ವನ್ನು ಪೋಷಕರಿಗೆ ಸಾದರಪಡಿಸುತ್ತದೆ.

ಪ್ಲಾಟ್‌ಫಾರಂ೬೫ ಕುರಿತು: ೨೦೧೯ರಲ್ಲಿ ಭಾರತದ ಅತ್ಯಂತ ದೊಡ್ಡ ರೈಲು ರೆಸ್ಟೋರೆಂಟ್‌ನ ಚಮತ್ಕಾರಿಕ ತಿರುಳಿನೊಂದಿಗೆ ಆರಂಭವಾದ ಪ್ಲಾಟ್‌ಫಾರಂ೬೫ ರಲ್ಲಿ ನಿಮ್ಮ ಟೇಬಲ್‌ಗೆ ಆಹಾರವನ್ನು ಆಟಿಕೆ ರೈಲು ತರುವುದನ್ನು ನೋಡಿದಾಗ ನಿಮ್ಮ ಹೃದಯದ ಬಡಿತ ಚುಕುಬುಕು ರೈಲಿನಂತೆ ಆಗುತ್ತದೆ. ಇದು ರೈಲು ತಿರುಳಿನ ರೆಸ್ಟೋರೆಂಟ್ ಆಗಿದ್ದು, ಅನುಭವ ಆಧಾರಿತ ಭೋಜನ ಪೂರೈಸುವುದಲ್ಲದೆ, ಇಲ್ಲಿ ಮಿನಿ ಟಾಯ್ ಟ್ರೇನ್ ಮೂಲಕ ಆಹಾರ ಪದಾರ್ಥಗಳನ್ನು ಸಾದರ ಪಡಿಸಲಾಗುತ್ತದೆ.

ಪ್ಲಾಟ್‌ಫಾರಂ೬೫ ಬಹುಪಾಕ ಶೈಲಿಯ ರೆಸ್ಟೋರೆಂಟ್ ಆಗಿದ್ದು, ಬಾಯಿ ಚಪ್ಪರಿಸುವಂತಹ ಆಹಾರ ಪದಾರ್ಥಗಳನ್ನು ಚೈನೀಸ್, ಉತ್ತರ ಭಾರತೀಯ, ಆಂಧ್ರ ಮತ್ತು ತೆಲಂಗಾಣ ಪಾಕಶೈಲಿಗಳಲ್ಲಿ ಸಾದರಪಡಿಸುತ್ತದೆ. ರೆಸ್ಟೋರೆಂಟ್ ೬೦೦೦ ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿದ್ದು, ಒಂದು ಬಾರಿಗೆ ೨೦೦ ಅತಿಥಿಗಳವರೆಗೆ ಆಸನಾವಕಾಶ ನೀಡುತ್ತದೆ. ಪ್ಲಾಟ್‌ಫಾರಂ೬೫ ಹೈದ್ರಾಬಾದ್(ಕುಕಟ್‌ಪಲ್ಲಿ, ಕೋಂಪಲ್ಲಿ, ಕೊಂಡಾಪುರ್ ಮತ್ತು ದಿಲ್‌ಸುಖ್‌ನಗರ್), ವಿಜಯ ವಾಡ ಮತ್ತು ವೈಜಾಕ್‌ಗಳಲ್ಲಿ ಶಾಖೆಗಳನ್ನು ಹೊಂದಿದೆ. ಆಕರ್ಷಕ ಚೇರ್-ಕಾರ್ ಸೀಟ್‌ಗಳು, ರೈಲಿನಲ್ಲಿರುವಂತಹ ಗೋಡೆ ವಿನ್ಯಾಸಗಳು, ಸುತ್ತಲೂ ಇದ್ದು ಗ್ರಾಹಕರಿಗೆ ಹೆಚ್ಚಿನ ವಿಶೇಷ ಭಾವನೆಯನ್ನು ನೀಡುತ್ತವೆ. ಟೇಬಲ್‌ಗಳಲ್ಲಿ ಮಿನಿ ರೈಲ್ವೆ ಟ್ರಾö್ಯಕ್‌ಗಳಿದ್ದು, ಈ ವಾತಾವರಣವನ್ನು ಪ್ರತಿ ಟೇಬಲ್‌ನಲ್ಲಿ ಒಂದು ನಿಲ್ದಾಣದ ಹೆಸರು ಇರುವಂತೆ ನಿರ್ಮಿಸಲಾಗಿದೆ.

ಉದಾಹರಣೆಗೆ ಅಹ್ಮದಾಬಾದ್, ತ್ರಿವೇಂಡ್ರಮ್, ಕಾನ್‌ಪುರ್ ಮುಂತಾದವುಗಳು ಇದರಲ್ಲಿ ಸೇರಿವೆ. ರೆಸ್ಟೋರೆಂಟ್‌ನ ಅಡುಗೆ ಮನೆಯಿಂದ ಆಟಿಕೆಯ ರೈಲುಗಳು ನಿಮ್ಮ ಟೇಬಲ್‌ಗೆ ಚುಕುಬುಕು ಎಂದು ಬರುವುದಲ್ಲದೆ, ನಿಮ್ಮ ನೆಚ್ಚಿನ ಆಹಾರ ಪದಾರ್ಥಗಳನ್ನು ಯಾವ ರೀತಿಯಲ್ಲಿ ಸಾದರಪಡಿಸಲಾಗುತ್ತದೆ ಎನ್ನುವುದು ಇಲ್ಲಿನ ಅತ್ಯುತ್ತಮ ಭಾಗವಾಗಿದೆ. ಪ್ಲಾಟ್‌ಫಾರಂ೬೫ ವೈವಿಧ್ಯಪೂರ್ಣ ಆಹಾರ ಪದಾರ್ಥಗಳ ಪಟ್ಟಿಯನ್ನು ಸಾದರಪಡಿಸುತ್ತದೆ.

ಇದರಲ್ಲಿ ಹಲವು ಪಾಕಶೈಲಿಗಳ ಸೇವಸಲೇ ಬೇಕಾದಂತಹ ಪದಾರ್ಥಗಳು ಸೇರಿರುತ್ತವೆ. ಆಹಾರಪ್ರಿಯರಿಗೆ ಈ ವಿಸ್ತಾರವಾದ ಆಹಾರ ಪಟ್ಟಿಯಿಂದ ಆಯ್ಕೆ ಮಾಡುವುದು ಕಷ್ಟವಾಗಲಿದೆ. ಜೊತೆಗೆ ಅವರು ಉತ್ತರ ಭಾರತ, ದಕ್ಷಿಣ ಭಾರತ, ಚೈನೀಸ್ ಮತ್ತು ತಂದೂರಿ ಪಾಕಶೈಲಿಗಳ ರುಚಿಯನ್ನು ಅನುಭವಿಸಬಹು ದಾಗಿದೆ. ಪ್ಲಾಟ್‌ಫಾರಂ೬೫ ನವೀನ ಟಾಯ್ ಟ್ರೇನ್ ತಿರುಳು ಮಾತ್ರವಲ್ಲದೆ ಬಾಯಲ್ಲಿ ನೀರೂರಿಸುವ ಆಹಾರವನ್ನು ಕೂಡ ಒಳಗೊಂಡಿರುತ್ತದೆ.

Leave a Reply

Your email address will not be published. Required fields are marked *