Wednesday, 11th December 2024

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ತ್ರೈಮಾಸಿಕ ಫಲಿತಾಂಶ ಪ್ರಕಟ: ಆದಾಯದ ಪ್ರಗತಿಯತ್ತ ಸಾಗಿದ ಸಂಸ್ಥೆ

ಬೆಂಗಳೂರು: ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ತನ್ನ ತ್ರೈಮಾಸಿಕ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದ್ದು, ಈ ಅವಧಿಯಲ್ಲೂ ಪ್ರಗತಿಯ ಹಾದಿಯಲ್ಲಿ ಸಾಗಿದೆ.

ವರ್ಷದಿಂದ ವರ್ಷಕ್ಕೆ ಶೇ.30ರಷ್ಟು ಆದಾಯದ ಮೊತ್ತ ಹೆಚ್ಚಳವಾಗುತ್ತಿದ್ದು, ಈ ತ್ರೈಮಾಸಿಕದಲ್ಲಿ ಶೇ.5ರಷ್ಟು ಆದಾಯ ಹೆಚ್ಚಳ ಕಂಡಿದೆ. ಒಟ್ಟಾರೆ ನಿವ್ವಳ ಠೇವಣಿಯು 26,660 ಕೋಟಿ ರೂ. ಇದ್ದು, ಈ ತ್ರೈಮಾಸಿಕದಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. ಜೊತೆಗೆ, ರೀಟೇಲ್ ಟಿ.ಡಿ. ಶೇ. 71ರಷ್ಟು ವೃದ್ಧಿಯಾಗಿದ್ದು, ಇದು ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಳದ ಹಾದಿ ಕಾಣುತ್ತಿದೆ.
ಕಾಸಾ ಅನುಪಾತವನ್ನು ಶೇ.24.6, ಪಿಪಿಒಪಿ 458 ಕೋಟಿ ಇದ್ದು, ಈ ತ್ರೈಮಾಸಿಕದಲ್ಲಿ ಶೇ. ಶೇ.52ರಷ್ಟು ಹೆಚ್ಚಳ, ಪಿಎಟಿ 324 ಕೋಟಿ ಇದ್ದು ವರ್ಷದಿಂದ ವರ್ಷಕ್ಕೆ ಶೇ.60 ಹೆಚ್ಚಳವಾಗಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಸಿಇಒ ಇಟ್ಟಿರ ಡೇವಿಸ್ ಮಾತನಾಡಿ, ಈ ಸಾಲಿನ ತ್ರೈಮಾಸಿಕ ಫಲಿತಾಂಶ ನಿರೀಕ್ಷೆಗೂ ಮೀರಿದ ಲಾಭ ಪಡೆದಿದ್ದು ಸಂತಸ ತಂದಿದೆ. ಪ್ರಸ್ತುತ ಸಾಲದ ಪ್ರಮಾಣ 25,000 ಸಾವಿರ ಕೋಟಿ ರೂ. ನೀಡಲಾಗಿದ್ದು, ಆದಾ ಯದ ಪ್ರಮಾಣವೂ ಹೆಚ್ಚಳವಾಗುತ್ತಿದೆ.

ಈ ತ್ರೈಮಾಸಿಕದಲ್ಲಿ ನಮ್ಮನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಕೆಲವು ಲಿಕ್ವಿಡಿಟಿಗಳನ್ನು ಕಡಿಮೆ ಮಾಡಿದ್ದೇವೆ, ಠೇವಣಿ ಪ್ರಮಾಣವೂ ಸಹ ಈವರೆಗೆ ಶೇ.45ರಷ್ಟು ಹೆಚ್ಚಳವಾಗಿದ್ದು, ಈ ತ್ರೈಮಾಸಿಕದಲ್ಲಿ 4ರಷ್ಟು ಪ್ರಗತಿ ಕಂಡಿದೆ. ಇನ್ನು, ಸಾಲದ ರಿಕವರಿ ಕೂಡ ಸಾಮಾನ್ಯ ಮಟ್ಟದಲ್ಲಿ ಸಾಗುತ್ತಿದೆ, ತ್ರೈಮಾಸಿಕದ ಅವಧಿಯಲ್ಲಿ 32 ಹೊಸ ಶಾಖೆಗಳನ್ನು ವಿಸ್ತರಿಸ ಲಾಗಿದ್ದು, ಮುಂದಿನ ಮಾರ್ಚ್‌ ಒಳಗಾಗಿ 70 ಶಾಖೆಗಳನ್ನು ತೆರೆಯುವ ಯೋಜನೆ ಹೊಂದಲಾಗಿದೆ.

ಇನ್ನು, ನಿರೀಕ್ಷಿತ ನಮ್ಮ ಮೊಬೈಲ್‌ ಬ್ಯಾಂಕಿಂಗ್‌ ಆಪ್‌ ಆದ “ಹೆಲೋ ಉಜ್ಜೀವನ್‌” ಈಗಾಗಲೇ 2.7 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡು, ಬಳಕೆ ಮಾಡುತ್ತಿದ್ದಾರೆ. ಈ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದರು. ಕಳೆದ ಆರು ತ್ರೈಮಾಸಿಕದಿಂದ ಉಜ್ಜೀವನ್‌ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ. ಮುಂದಿನ ಹಣಕಾಸು ವರ್ಷದಲ್ಲಿಯೂ ಇದೇ ರೀತಿಯ ಸಾಧನೆ ಮಾಡುವ ನಿರೀಕ್ಷೆ ಎಂದು ಹೇಳಿದರು.