Sunday, 8th September 2024

ಉನ್ನತಿ ಫೌಂಡೇಶನ್ನಿಂದ ಐತಿಹಾಸಿಕ ಸಾಧನೆ: ಭಾರತದ ಎಸ್ಎಸ್ಇಗೆ ಪ್ರವೇಶ ಪಡೆದ ಮುಂಚೂಣಿ ಎನ್ಜಿಒ ಎಂಬ ಗಮನವಾರ್ಹ ದಾಖಲೆ

ಬೆಂಗಳೂರು: ಹಿಂದುಳಿದ ರ‍್ಗಗಳ ಹಿನ್ನೆಲೆಯಿಂದ ಬಂದಿರುವ ವಿದ್ಯರ‍್ಥಿಗಳಿಗೆ ವೃತ್ತಿಪರ ತರಬೇತಿ ಮತ್ತು ಸಾಮಾಜಿಕ ಪರಿರ‍್ತನೆಯ ತರಬೇತಿಯನ್ನು ನೀಡುವ ಲಾಭರಹಿತ ಸಂಸ್ಥೆಯಾದ ಬೆಂಗಳೂರು ಮೂಲದ ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ (ಎಸ್ಯುಎಫ್), ಎನ್ಎಸ್ಇ ಮತ್ತು ಬಿಎಸ್ಇಯ ಸಾಮಾಜಿಕ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾದ ಭಾರತದ ಮೊದಲ ಎನ್ಜಿಒ ಎಂಬ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಗಮನರ‍್ಹ ಸಾಧನೆಯ ಮೂಲಕ ಸಾಮಾಜಿಕ ಪರಿಣಾಮ ವಲಯದಲ್ಲಿ ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಹೂಡಿಕೆಗೆ ದಾರಿ ಮಾಡಿಕೊಟ್ಟಿದೆ.

ಎನ್ಎಸ್ಇ ಮತ್ತು ಬಿಎಸ್ಇಯಲ್ಲಿನ ಸಾಮಾಜಿಕ ಷೇರು ವಿನಿಮಯ ವಿಭಾಗವು ಸಾಮಾಜಿಕ ಉದ್ಯಮಗಳಿಗೆ ವಿಶಿಷ್ಟ ವೇದಿಕೆಯಾಗಿ ಕರ‍್ಯನರ‍್ವಹಿಸುತ್ತದೆ. ಇದು ರ‍್ಹ ಚಟುವಟಿಕೆಗಳಲ್ಲಿ ತೊಡಗಿರುವ ಲಾಭರಹಿತ ಸಂಸ್ಥೆಗಳು (ಎನ್ಜಿಒಗಳು) ಮತ್ತು ಲಾಭರಹಿತ ಉದ್ಯಮಗಳು (ಎಫ್ಪಿಇಗಳು) ಎರಡನ್ನೂ ಒಳಗೊಂಡಿದೆ. ಸಾಮಾಜಿಕ ಉದ್ಯಮಗಳ ರ‍್ಥಿಕ ಅಂತರವನ್ನು ತಗ್ಗಿಸುವುದಕ್ಕೆ ಸಹಾಯ ಮಾಡಲು ಮತ್ತು ಅವರ ಉಪಕ್ರಮಗಳಿಗೆ ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಬೆಂಬಲದ ವ್ಯಾಪ್ತಿಯನ್ನು ಹೆಚ್ಚಿಸುವುದಕ್ಕಾಗಿ ಎಸ್ಎಸ್ಇ ಪರಿಕಲ್ಪನೆಯನ್ನು ಹುಟ್ಟು ಹಾಕಲಾಗಿದೆ. ಇದು ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಉಪಕ್ರಮಗಳತ್ತ ಬಂಡವಾಳವನ್ನು ಕ್ರೊಡೀಕರಿಸಲು ಹಣಕಾಸು ಮಾರುಕಟ್ಟೆಗಳನ್ನು ಬಳಸಿಕೊಳ್ಳುವ ಕಲ್ಪನೆಯ ಮೇಲೆ ನರ‍್ಮಿಸಲಾದ ಶಕ್ತಿಯುತ ಮರ‍್ಗ. ಇದಲ್ಲದೆ, ಇದು ಎನ್ಜಿಒ ವಲಯದ ಮುಖ್ಯ ಆತಂಕವಾಗಿರುವ ಪಾರರ‍್ಶಕತೆ ಮತ್ತು ವಿಶ್ವಾಸರ‍್ಹತೆಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಪಾರರ‍್ಶಕತೆಯ ಕೊರತೆ ದಾನಿಗಳ ಅಪನಂಬಿಕೆಗೆ ಕಾರಣವಾಗಿತ್ತು. ಅದನ್ನು ಈಗ ಎಸ್ಎಸ್ಇ ಮೂಲಕ ಪರಿಹರಿಸಲಾಗಿದೆ.

ಎಸ್ಎಸ್ಇ ಸಾಮಾಜಿಕ ಉದ್ಯಮಗಳು ಮತ್ತು ಹೂಡಿಕೆದಾರರಿಗೆ ಹಲವಾರು ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ. ಮೊದಲಾಗಿ ಇದು ಸುಧಾರಿತ ಮಾರುಕಟ್ಟೆ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತದೆ. ಸಾಮಾಜಿಕ ಪರಿಣಾಮಕ್ಕಾಗಿಯೇ ಮೀಸಲಾಗಿರುವ ಸಂಸ್ಥೆಗಳ ಕಡೆಗೆ ಬಂಡವಾಳದ ಹರಿವನ್ನು ಸುಗಮಗೊಳಿಸುತ್ತದೆ. ಇದು, ತಮ್ಮ ಹಂಚಿಕೆಯ ಸಾಮಾಜಿಕ ಗುರಿಗಳನ್ನು ಸಾಧಿಸುವಲ್ಲಿ ಹೂಡಿಕೆದಾರರು/ ದಾನಿಗಳ ನಡುವೆ ಉತ್ತಮ ಸಂಬಂಧವನ್ನು ಸೃಜಿಸುತ್ತದೆ. ಹೆಚ್ಚುವರಿಯಾಗಿ, ಎಸ್ಎಸ್ಇ ಸಾಮಾಜಿಕ ಉದ್ಯಮಗಳಿಗೆ ಹಣವನ್ನು ಸಂಗ್ರಹಿಸಲು ಮತ್ತು ಪಾರರ‍್ಶಕತೆಯನ್ನು ಒದಗಿಸಲು ಒಂದು ಮರ‍್ಗವಾಗಿ ಕರ‍್ಯನರ‍್ವಹಿಸುತ್ತದೆ. ಅಂತಿಮವಾಗಿ ಅವರ ಪರಿಣಾಮಕಾರಿ ಉಪಕ್ರಮಗಳ ಬೆಳವಣಿಗೆ ಮತ್ತು ಸುಸ್ಥಿರತೆಗೆ ದೊಡ್ಡ ಕೊಡುಗೆ ನೀಡುತ್ತದೆ.

ಈ ಪಟ್ಟಿಯ ಮೂಲಕ, ಉನ್ನತಿ ಫೌಂಡೇಶನ್ ೨ ಕೋಟಿ ಸಂಗ್ರಹಿಸಲು ಉದ್ದೇಶಿದೆ. ಇದು ರ‍್ಕಾರಿ ಕಾಲೇಜುಗಳಲ್ಲಿ ಅಂತಿಮ ರ‍್ಷದ ಪದವಿ ಪಡೆಯುತ್ತಿರುವ ೧೦,೦೦೦ ವಿದ್ಯರ‍್ಥಿಗಳ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಈ ಒಂದು ಉಪಕ್ರಮವು ಪ್ರಾಥಮಿಕವಾಗಿ ಮೂರು ಪ್ರಮುಖ ಕ್ಷೇತ್ರಗಳಿಗೆ ನೆರವು ನೀಡಲಿದೆ. ಅವುಗಳೆಂದರೆ ಉದ್ಯೋಗ ಸೃಷ್ಟಿ, ಸ್ವಯಂ ಉದ್ಯೋಗ ಮತ್ತು ಉನ್ನತ ಶಿಕ್ಷಣ. ಅಂದಾಜು ೬೦% ಯುವಕರು ಇದರಿಂದ ಗಮನರ‍್ಹವಾಗಿ ಪ್ರಯೋಜನ ಪಡೆಯಲಿದ್ದಾರೆ.

ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ನ ನರ‍್ದೇಶಕ ರಮೇಶ್ ಸ್ವಾಮಿ ಮಾತನಾಡಿ “ಎನ್ಎಸ್ಇ ಮತ್ತು ಬಿಎಸ್ಇಯ ಸಾಮಾಜಿಕ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಿದ ಮೊದಲ ಎನ್ಜಿಒ ಆಗಿರುವುದು ನಮ್ಮ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ. ಇದು ಪಾರರ‍್ಶಕತೆ ಮತ್ತು ಉತ್ತರದಾಯಿತ್ವಕ್ಕೆ ನಮ್ಮ ಸರ‍್ಪಣೆಯನ್ನು ಪ್ರರ‍್ಶಿಸುತ್ತದೆ. ಜತೆಗೆ ಎನ್ಜಿಒ ವಲಯದಲ್ಲಿ ದಾನಿಗಳಗಿರುವ ಅಪನಂಬಿಕೆಯನ್ನು ಪರಿಹರಿಸುತ್ತದೆ. ಎಸ್ಎಸ್ಇ ಪಟ್ಟಿಯ ಸರ‍್ಪಡೆಯಿಂದಾಗಿ ನಮ್ಮ ಕರ‍್ಯಕ್ರಮಗಳ ಪರಿಣಾಮವನ್ನು ಪರಿಣಾಮಕಾರಿಯಾಗಿ ತೋರಿಸಲು ಕಠಿಣ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸ ಲಾಗುತ್ತದೆ ಸಾಮಾಜಿಕ ಪರಿರ‍್ತನೆಗಾಗಿ ನಮ್ಮ ಧ್ಯೇಯವನ್ನು ಹೆಚ್ಚಿಸುತ್ತದೆ.

“ಕಾನೂನು ಪರಿಣತಿಗಾಗಿ ಟ್ರೈಲೀಗಲ್, ನಮ್ಮ ವಿತರಣಾ ಸಲಹೆಗಾರರಾಗಿ ಯುನಿಟಸ್ ಮತ್ತು ನಮ್ಮ ರ‍್ಟಿಎ ಆಗಿ ಬಿಗ್ಶೇರ್ ಸೇರಿದಂತೆ ಈ ಯಶಸ್ಸನ್ನು ಸಾಧ್ಯವಾಗಿಸಿದ ಪ್ರೊ ಬೊನೊ ತಂಡಕ್ಕೆ ನಾವು ಹೃತ್ಪರ‍್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ” ಎಂದು ರಮೇಶ್ ಸ್ವಾಮಿ ಹೇಳಿದರು.

ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ನ ನರ‍್ದೇಶಕ ನಾರಾಯಣನ್ ಎ.ಎಸ್ ಮಾತನಾಡಿ, “ಕರ‍್ಪೊರೇಟ್ ಸಿಎಸ್ಆರ್ ಉಪಕ್ರಮಗಳ ಬೆಂಬಲದೊಂದಿಗೆ ಉನ್ನತಿಯ ಉಚಿತ Uಓಘಿಖಿ ಕರ‍್ಯಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ೨,೦೦೦ ರೂ.ಗಳಿಗೆ ೧೬೫ ಗಂಟೆಗಳ ತರಬೇತಿಯನ್ನು ನೀಡುತ್ತದೆ, ಇದು ನಮ್ಮ ವಿಶಿಷ್ಟ ವೆಚ್ಚ-ಪರಿಣಾಮಕಾರಿ ಮಾದರಿ ಮತ್ತು ಯುವಕರ ಮೇಲಿನ ಪ್ರಭಾವಕ್ಕೆ ಅಚಲ ಬದ್ಧತೆಯನ್ನು ಪ್ರರ‍್ಶಿಸುತ್ತದೆ” ಎಂದು ಹೇಳಿದರು.

ಉನ್ನತಿಯ Uಓಘಿಖಿ ಕರ‍್ಯಕ್ರಮ – ಯುವಕರಿಗೆ ಕಲಿಯಲು, ಸಂಪಾದಿಸಲು ಮತ್ತು ಸ್ವತಂತ್ರವಾಗಿರಲು ಎಲ್ಲರನ್ನೊಳಗೊಂಡ ಕರ‍್ಯಕ್ರಮಗಳು

ವಿಶ್ವ ರ‍್ಥಿಕ ವೇದಿಕೆಯ ಪ್ರಕಾರ, ವರ‍್ಷಿಕವಾಗಿ ಭಾರತದ ಕರ‍್ಯಪಡೆಯನ್ನು ಪ್ರವೇಶಿಸುವ ೧೩ ಮಿಲಿಯನ್ ವ್ಯಕ್ತಿಗಳಲ್ಲಿ, ನಾಲ್ಕು ನರ‍್ವಹಣಾ ವೃತ್ತಿಪರರಲ್ಲಿ ಒಬ್ಬರು, ಐದು ಎಂಜಿನಿರ‍್ಗಳಲ್ಲಿ ಒಬ್ಬರು ಮತ್ತು ಹತ್ತು ಪದವೀಧರರಲ್ಲಿ ಒಬ್ಬರು ಮಾತ್ರ ಅಗತ್ಯವಾದ ಉದ್ಯೋಗ ಕೌಶಲಗಳನ್ನು ಹೊಂದಿದ್ದಾರೆ. ಇದು ಕರ‍್ಯಪಡೆಯ ಗಮನರ‍್ಹ ಭಾಗದಲ್ಲಿ ಅಗತ್ಯವಾದ ಉದ್ಯೋಗ ಕೌಶಲ್ಯಗಳ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಉನ್ನತಿ ಫೌಂಡೇಶನ್ Uಓಘಿಖಿ ಕರ‍್ಯಕ್ರಮವು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ.

Uಓಘಿಖಿ ಕರ‍್ಯಕ್ರಮವು ಕೌಶಲ್ಯ ಅಭಿವೃದ್ಧಿಗೆ ನರ‍್ದಿಷ್ಟ ಗಮನ ನೀಡುವುದರೊಂದಿಗೆ ಯುವ ಸಬಲೀಕರಣಕ್ಕೆ ಸಮಗ್ರ ವಿಧಾನವನ್ನು ಅಳವಡಿಸುತ್ತದೆ. ಈ ಕರ‍್ಯಕ್ರಮವು ೧೬೫ ಗಂಟೆಗಳ ತರಬೇತಿಯನ್ನು ಒಳಗೊಂಡಿದೆ, ೯೦ ಗಂಟೆಗಳ ತರಗತಿಯ ಕಲಿಕೆಗೆ ಮೀಸಲಾಗಿದೆ, ಮೌಲ್ಯಗಳು, ಇಂಗ್ಲಿಷ್ ಸಂವಹನ ಮತ್ತು ಜೀವನ ಕೌಶಲ್ಯಗಳಂತಹ ಅಗತ್ಯ ವಿಷಯಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಭಾಗವಹಿಸುವವರು ಮೊಬೈಲ್ ಅಪ್ಲಿಕೇಶನ್ ಮೂಲಕ ೭೫ ಗಂಟೆಗಳ ಸ್ವಯಂ ನರ‍್ದೇಶಿತ ಕಲಿಕೆಯಲ್ಲಿ ತೊಡಗುತ್ತಾರೆ, ಇದು ಜೀವನರ‍್ಯಂತ ಕಲಿಕೆಯ ಅಭ್ಯಾಸವನ್ನು ಉತ್ತೇಜಿಸುತ್ತದೆ. ೩೫-೪೦ ವಿದ್ಯರ‍್ಥಿಗಳ ಸಣ್ಣ ಬ್ಯಾಚ್ಗಳಲ್ಲಿ ನಡೆಸಲಾಗುವ ಪ್ರತಿ ಸೆಷನ್ ೩ ಗಂಟೆಗಳ ಕಾಲ ನಡೆಯುತ್ತದೆ. ರ‍್ಷದುದ್ದಕ್ಕೂ, ನಿಯಮಿತ ಕಾಲೇಜು ಸಮಯದ ನಂತರ, ರ‍್ಕಾರಿ ಕಾಲೇಜು ಆವರಣದಲ್ಲಿ ನಡೆಯುತ್ತದೆ. ಇದನ್ನು ಸಂಪರ‍್ಣ ಉಚಿತವಾಗಿ ನೀಡಲಾಗುತ್ತದೆ . ಪ್ರಮಾಣ ಪತ್ರ ಪಡೆಯಲು ಮತ್ತು ಖಾತರಿಪಡಿಸಿದ ಉದ್ಯೋಗ ನೆರವು ಪಡೆಯಲು, ಭಾಗವಹಿಸುವವರು ಕನಿಷ್ಠ ೯೦% ಹಾಜರಾತಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

Uಓಘಿಖಿ ೩೦ ದಿನಗಳ ತರಬೇತಿ ಮುಗಿದ ತಕ್ಷಣ ಗುಣಮಟ್ಟದ ಫಲಿತಾಂಶಗಳನ್ನು ನೀಡುವ ಕಡೆಗೆ ಕೇಂದ್ರೀಕರಿಸುತ್ತದೆ. ಈ ಯೋಜನೆಯನ್ನು ೧೨ ತಿಂಗಳ ಅವಧಿಯಲ್ಲಿ ನಿಗದಿಪಡಿಸಲಾಗಿದೆ. ೧೦,೦೦೦ ಯುವಕರ ತರಬೇತಿಯನ್ನು ೩-೪ ತಿಂಗಳ ಅಲ್ಪಾವಧಿಯಲ್ಲಿ ಪರ‍್ಣಗೊಳಿಸುವ ನಿರೀಕ್ಷೆಯಿದೆ. ಆರಂಭಿಕ ತರಬೇತಿ ಹಂತದ ನಂತರ ಭಾಗವಹಿಸುವವರು ತಮ್ಮ ಶಿಕ್ಷಣವನ್ನು ಮುಂದುವರಿಸಿದರೆ ಅಥವಾ ಸ್ವಯಂ ಉದ್ಯೋಗಾವಕಾಶಗಳನ್ನು ಅನ್ವೇಷಿಸುವಾಗ ಅಥವಾ ಉದ್ಯೋಗವನ್ನು ಹುಡುಕುವಾಗ ಅವರ ಪ್ರಗತಿಗೆ ಅನುಗುಣವಾಗಿ ಸಮಯವನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿ ಸಮಯವು ಭಾಗವಹಿಸುವವರೊಂದಿಗೆ ನಿರಂತರ ತೊಡಗಿಸಿಕೊಳ್ಳುವಿಕೆಗೆ ಅನುವು ಮಾಡಿಕೊಡುತ್ತದೆ, ಇದು ಪರಿಮಾಣಾತ್ಮಕ ಅಧ್ಯಯನದ ಅವಿಭಾಜ್ಯ ಅಂಗವಾಗಿರುವ ಭಾಗವಹಿಸುವವರ ಸ್ನಾತಕೋತ್ತರ ಆಯ್ಕೆಗಳು ಮತ್ತು ಕ್ರಿಯೆಗಳ ಮೇಲೆ ನಿಗಾ ಇಡಲು ಉನ್ನತಿಗೆ ಅನುವು ಮಾಡಿ ಕೊಡುತ್ತದೆ.

ಕಳೆದ ಹತ್ತು ತಿಂಗಳಲ್ಲಿ ಉನ್ನತಿ ಫೌಂಡೇಶನ್ ರ‍್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ನಾಗಾಲ್ಯಾಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ಸೇರಿದಂತೆ ಸುಮಾರು ಹತ್ತು ರಾಜ್ಯಗಳೊಂದಿಗೆ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಈ ಕರ‍್ಯಕ್ರಮವು ರ‍್ಕಾರಿ ಕಾಲೇಜುಗಳಲ್ಲಿ ಕರ‍್ಯನರ‍್ವಹಿಸುತ್ತದೆ ಮತ್ತು “ಉದ್ಯೋಗಂ” ಎಂಬ ಹೊಸ ಪರ‍್ಟಲ್ ಅನ್ನು ಪರಿಚಯಿಸಲು ಸಜ್ಜಾಗಿದೆ, ಇದು ಯುವಕ ರಿಗೆ ತಮ್ಮ ವಿವರಗಳು, ರೆಸ್ಯೂಮ್ಗಳನ್ನು ಮತ್ತು ವೀಡಿಯೊ ರೆಸ್ಯೂಮ್ಗಳನ್ನು ಪ್ರರ‍್ಶಿಸಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮದ ಪ್ರಾಥಮಿಕ ಗುರಿ ಗ್ರಾಮೀಣ ಯುವಕರು ಮತ್ತು ಉದ್ಯೋಗಾವಕಾಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಉನ್ನತಿ ಫೌಂಡೇಶನ್ ಸ್ನಾತಕೋತ್ತರ ಪದವಿಯ ಬಳಿಕವೂ ಉದ್ಯೋಗವನ್ನು ಖಾತರಿಪಡಿಸುತ್ತದೆ.

ಉನ್ನತಿ ಫೌಂಡೇಶನ್ ಬಗ್ಗೆ

ಸಮಾಜದ ವಿವಿಧ ರ‍್ಗಗಳಿಗೆ ಸೇವೆ ಸಲ್ಲಿಸುವ ಮತ್ತು ಕೇಂದ್ರೀಕೃತ ಕರ‍್ಯಕ್ರಮಗಳ ಮೂಲಕ ಸಾಮರಸ್ಯವನ್ನು ತರುವ ಧ್ಯೇಯದೊಂದಿಗೆ, ಉನ್ನತಿ ಫೌಂಡೇಶನ್ ೧೮-೨೫ ರ‍್ಷದೊಳಗಿನ ಯುವಕರಿಗೆ ತರಬೇತಿ ಕರ‍್ಯಕ್ರಮಗಳನ್ನು ನಡೆಸುತ್ತದೆ. ಸಂಸ್ಥೆಯು ಇಎಸ್ಐ, ಪಿಎಫ್ ಮತ್ತು ಗ್ರಾಚ್ಯುಟಿಯಂತಹ ಸಾಮಾಜಿಕ ಭದ್ರತೆಯೊಂದಿಗೆ ಉದ್ಯೋಗ ಪಡೆಯುವುದನ್ನು ಖಾತರಿಪಡಿಸುತ್ತದೆ. ಉನ್ನತಿಯನ್ನು ೩ ಮೂಲಭೂತ ತತ್ವಗಳನ್ನು ಮನಸ್ಸಿ ನಲ್ಲಿಟ್ಟುಕೊಂಡು ರಚಿಸಲಾಯಿತು; ತರಬೇತಿಯು ಉದ್ಯೋಗಕ್ಕೆ ಕಾರಣವಾಗಬೇಕು ಇದರಿಂದ ವ್ಯಕ್ತಿಯು ಎಲ್ಲರನ್ನು ಒಳಗೊಂಡ ಸಮಾಜದ ಭಾಗವಾಗುತ್ತಾನೆ ಮತ್ತು ಅವನು / ಅವಳು ಸಮಾಜದಲ್ಲಿ ರ‍್ಥಪರ‍್ಣ ಬದಲಾವಣೆಯನ್ನು ತರುತ್ತಾರೆ.

ಅವರ ಪ್ರಮುಖ ಕರ‍್ಯಕ್ರಮಗಳಲ್ಲಿ ಉನ್ನತಿ (ವಿಟಿಪಿ) ಒಂದಾಗಿದೆ. ಇದು ೧೮ ರಿಂದ ೨೫ ರ‍್ಷ ವಯಸ್ಸಿನ ಹಿಂದುಳಿದ ರ‍್ಗಗಳ ಯುವಕರಿಗೆ ೩೫ ದಿನಗಳ ವೃತ್ತಿಪರ ತರಬೇತಿ ಮತ್ತು ಸಾಮಾಜಿಕ ಪರಿರ‍್ತನೆ ಕರ‍್ಯಕ್ರಮವಾಗಿದೆ. ಇದು ೩೦೦ ಗಂಟೆಗಳ ತರಬೇತಿಯನ್ನು ನೀಡುತ್ತದೆ ಮತ್ತು ಸ್ಪೋಕನ್ ಇಂಗ್ಲಿಷ್, ಜೀವನ ಕೌಶಲ್ಯಗಳು, ಮೌಲ್ಯಗಳು, ಮೂಲಭೂತ ಕಂಪ್ಯೂಟರ್ ಕೌಶಲ್ಯಗಳು ಮತ್ತು ಅವರ ಶೈಕ್ಷಣಿಕ ರ‍್ಹತೆಗೆ ಅನುಗುಣವಾಗಿ ವೃತ್ತಿಯನ್ನು ಒದಗಿಸುತ್ತದೆ.

ಇದು ತರಬೇತಿಯ ಕೊನೆಯಲ್ಲಿ ಖಾತರಿಯ ಉದ್ಯೋಗಗಳನ್ನು ಕಲ್ಪಿಸುತ್ತದೆ. ಮೊದಲ ಬ್ಯಾಚ್ ಅನ್ನು ಎರಡು ವೃತ್ತಿಗಳೊಂದಿಗೆ ಸಣ್ಣ ಬಾಡಿಗೆ ಒಡೆದ ಆವರಣದಲ್ಲಿ ಪ್ರಾರಂಭಿಸಲಾಯಿತು. ೧ ರ‍್ಷದ ಅವಧಿಯಲ್ಲಿ ೭೦ ಅಭ್ರ‍್ಥಿಗಳು ಉತ್ತರ‍್ಣರಾದರು. “ಪ್ರಾರಂಭದಿಂದ ಇದುವರೆಗೆ ನಾವು ೮೦,೦೦೦ ಯುವಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದ್ದೇವೆ ಮತ್ತು ೨೦೨೨-೨೩ ರಲ್ಲಿ ೨೫,೦೦೦ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಸಾಧಿಸಿದ್ದೇವೆ” ಎಂದು ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ ನರ‍್ದೇಶಕ ನಾರಾಯಣನ್ ಎಎಸ್ ಹೇಳುತ್ತಾರೆ. ಪ್ರಸ್ತುತ, ಎಸ್ ಯುಎಫ್ ದೇಶಾದ್ಯಂತ ಒಟ್ಟು ೩೭+ ಕೇಂದ್ರಗಳನ್ನು ಹೊಂದಿದೆ.

Leave a Reply

Your email address will not be published. Required fields are marked *

error: Content is protected !!