Tuesday, 17th September 2024

ಭಾರತದ ಪ್ರತಿಭಾನ್ವಿತ ಯುವ ತಂತ್ರಜ್ಞರ ಗುರುತಿಸಲು ’ಇಂಡಿಯನ್ ಸಿಲಿಕಾನ್ ವ್ಯಾಲಿ ಚಾಲೆಂಜ್’ ಪ್ರಾರಂಭಿಸಿದ ಸ್ಕೇಲರ್ ಸ್ಕೂಲ್ ಆಫ್ ಟೆಕ್ನಾಲಜಿ

•ಈ ಸವಾಲಿನ ವಿಜೇತರು ಜಾಗತಿಕ ತಂತ್ರಜ್ಞಾನ ಉದ್ಯಮದ ಹೃದಯ ಭಾಗವಾಗಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಉಚಿತವಾಗಿ ಭೇಟಿ ನೀಡುವ ಪ್ರವಾಸ ಸೌಲಭ್ಯ ಪಡೆಯಲಿದ್ದಾರೆ.
• ಆಪಲ್ ಮತ್ತು ಗೂಗಲ್ ಕ್ಯಾಂಪಸ್ಗಳಿಗೆ ಭೇಟಿ ನೀಡಲು ಮತ್ತು ವಿಶ್ವದ ಕೆಲವು ಯಶಸ್ವಿ ತಂತ್ರಜ್ಞಾನ ಉದ್ಯಮಿಗಳು ಮತ್ತು ನವೋದ್ಯಮ ಗಳಿಂದ ಯಶೋಗಾಥೆಯ ಒಳನೋಟಗಳನ್ನು ಪಡೆಯುವ ಅವಕಾಶಗಳೂ ಅವರಿಗೆ ದೊರೆಯಲಿವೆ.

ಬೆಂಗಳೂರು: ಕಂಪ್ಯೂಟರ್ ಸೈನ್ಸ್ನಲ್ಲಿ ಸಂಪೂರ್ಣ ವಸತಿ ಸೌಲಭ್ಯದ ಪದವಿಪೂರ್ವ ಕಾರ್ಯಕ್ರಮವಾಗಿರುವ ಸ್ಕೇಲರ್ನ–ಸ್ಕೇಲರ್ ಸ್ಕೂಲ್ ಆಫ್ ಟೆಕ್ನಾಲಜಿಯು ’ಇಂಡಿಯನ್ ಸಿಲಿಕಾನ್ ವ್ಯಾಲಿ ಚಾಲೆಂಜ್’(Indian Silicon Valley Challenge) ಸ್ಪರ್ಧೆ ಆಯೋಜಿಸುವುದಾಗಿ ಇಲ್ಲಿ ಪ್ರಕಟಿಸಿದೆ.

ಭಾರತದ ಪ್ರತಿಭಾನ್ವಿತ ಯುವ ತಂತ್ರಜ್ಞರನ್ನು ಗುರುತಿಸಲು ಮತ್ತು ಪೋಷಿಸಲು ದೇಶದಾದ್ಯಂತ ಈ ಸ್ಪರ್ಧೆಯನ್ನು ನಡೆಸಲಾಗುವುದು. ತಂತ್ರಜ್ಞಾನ ಬಗ್ಗೆ ಮತ್ತು ಸಮಸ್ಯೆ-ಪರಿಹರಿಸುವ ಬಗ್ಗೆ ಆಸಕ್ತಿ ಹೊಂದಿರುವ ಹನ್ನೊಂದು ಹಾಗೂ ಹನ್ನೆರಡನೇಯ (XI ಮತ್ತು XII) ತರಗತಿಗಳ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯು ಮುಕ್ತವಾಗಿರಲಿದೆ. ಈ ಸ್ಪರ್ಧೆಯನ್ನು ಸ್ಕೇಲರ್ನ ಸಂಸ್ಥಾಪಕರು ನವೋದ್ಯಮಗಳ ಚೀಫ್ ಎಕ್ಸ್ಪೀರಿಯನ್ಸ್ ಆಫೀಸರ್ (CXOs) ನೆರವಿ ನೊಂದಿಗೆ ಆಯೋಜಿಸಲಿದ್ದಾರೆ. ಅವರು ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಶಿಕ್ಷಣ, ಆರೋಗ್ಯ, ಕೃಷಿ, ಪರಿಸರ ಮತ್ತು ಸಮುದಾಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ವಾಸ್ತವ-ಪ್ರಪಂಚದ ಸಮಸ್ಯೆಗಳನ್ನು ನಿಭಾಯಿಸಲು ತಂತ್ರ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸುವುದರ ಮೇಲೆ ಈ ಸವಾಲು ಕೇಂದ್ರೀಕೃತವಾಗಿರ ಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರರ ಸಮಸ್ಯೆ-ಪರಿಹರಿಸುವ ಕೌಶಲಗಳು, ಸೃಜನಶೀಲತೆ ಮತ್ತು ಅವರ ಉದ್ದೇಶಿತ ಪರಿಹಾರಗಳು ಬೀರಬಹುದಾದ ಪ್ರಭಾವ ಆಧರಿಸಿ ಅವರ ಸಾಮರ್ಥ್ಯವನ್ನು ನಿರ್ಣಯಿಸಲಾಗುವುದು.

ಭಾರತದ ಕೆಲವು ಯಶಸ್ವಿ ತಂತ್ರಜ್ಞಾನ ಕಂಪನಿಗಳ ಹಿಂದಿರುವ ಪ್ರತಿಭಾನ್ವಿತ ತಂತ್ರಜ್ಞರ ಜೊತೆ ಸಂಪರ್ಕ ಸಾಧಿಸಲು ಮತ್ತು ಅವರ ಅನುಭವಗಳಿಂದ ಒಳನೋಟಗಳನ್ನು ಪಡೆಯಲು ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಿದೆ. ಉದ್ಯಮದ ನಾಯಕರ ಸಮ್ಮುಖದಲ್ಲಿ ನೇರವಾಗಿ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸುವ ಮೂಲಕ, ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೊಸ ಪರಿಹಾರಗಳನ್ನು ಪ್ರದರ್ಶಿಸುವ ಅವಕಾಶ ಹೊಂದಿರಲಿದ್ದಾರೆ. ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯ ಸಂಪನ್ಮೂಲಗಳು ಮತ್ತು ಬೆಂಬಲವು ಅವರಿಗೆ ಸಹಾಯ ಮಾಡ ಬಹುದು.

’ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ಬಳಕೆ ಮಾಡದ ಪ್ರತಿಭೆಯ ಅಗಾಧ ಸಂಪತ್ತನ್ನು ಹೊಂದಿದೆ ಎನ್ನುವುದು ನಮ್ಮ ನಂಬಿಕೆಯಾಗಿದೆ’ ಎಂದು ಸ್ಕೇಲರ್ ಸ್ಕೂಲ್ ಆಫ್ ಟೆಕ್ನಾಲಜಿಯ ಮುಖ್ಯಸ್ಥ ಭಾವಿಕ್ ರಾಥೋಡ್ ಅವರು ಹೇಳಿದ್ದಾರೆ. ’ಇಂಡಿಯನ್ ಸಿಲಿಕಾನ್ ವ್ಯಾಲಿ ಚಾಲೆಂಜ್’- ಯುವ ನವೋದ್ಯಮಿಗಳನ್ನು ಸಬಲೀಕರಣಗೊಳಿಸುವ ಮತ್ತು ಅವರ ಆಲೋಚನೆಗಳು ಮತ್ತು ಪರಿಹಾರಗಳನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆ ಒದಗಿಸುವ ನಮ್ಮ ಹೆಬ್ಬಾಗಿಲು ಆಗಿದೆ. ತಂತ್ರಜ್ಞಾನದ ಬಗ್ಗೆ ಉತ್ಸುಕರಾಗಿರುವುದರ ಜೊತೆಗೆ ಭಾರತ ಎದುರಿಸುತ್ತಿರುವ ಸಾಮಾಜಿಕ ಮತ್ತು ಪರಿಸರ ಸವಾಲುಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿರುವ ವಿದ್ಯಾರ್ಥಿಗಳನ್ನು ನಾವು ಹುಡುಕುತ್ತಿದ್ದೇವೆ. ಇತರರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ತಂತ್ರಜ್ಞಾನವನ್ನು ಬಳಸುವ ವಿದ್ಯಾರ್ಥಿಗಳನ್ನು ಹುಡುಕುವುದೂ ನಮ್ಮ ಉದ್ದೇಶವಾಗಿದೆ’ ಎಂದೂ ರಾಥೋಡ್ ಅವರು ಹೇಳಿದ್ದಾರೆ.

’ಇಂಡಿಯನ್ ಸಿಲಿಕಾನ್ ವ್ಯಾಲಿ ಚಾಲೆಂಜ್”ನ ವಿಜೇತರಿಗೆ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲು ಉಚಿತ ಪ್ರವಾಸ ಸೌಲಭ್ಯ ನೀಡ ಲಾಗುವುದು. ಈ ಭೇಟಿಯ ಸಮಯದಲ್ಲಿ, ವಿದ್ಯಾರ್ಥಿಗಳು ಆಪಲ್ ಮತ್ತು ಗೂಗಲ್ನ ಕ್ಯಾಂಪಸ್ಗಳಿಗೆ ಭೇಟಿ ನೀಡುವ ಅವಕಾಶ ಹೊಂದಿರುತ್ತಾರೆ. ಪ್ರಪಂಚದ ಕೆಲವು ನಿಪುಣ ತಂತ್ರಜ್ಞಾನ ಉದ್ಯಮಿಗಳು ಮತ್ತು ನವೋದ್ಯಮಿಗಳಿಂದ ಒಳನೋಟಗಳನ್ನು ಪಡೆಯಲಿದ್ದಾರೆ. ವಿಜೇತರು ಪ್ರತಿನಿಧಿಸುವ ಶಾಲೆಯು ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿ ಗುರುತಿಸಲ್ಪಡುತ್ತದೆ. ಇಷ್ಟೇ ಅಲ್ಲದೆ, ಮೊದಲ ಮೂರು ವಿಜೇತ ಶಾಲೆಗಳಿಗೆ ಟ್ರೋಫಿಗಳನ್ನು ನೀಡಲಾಗುವುದು. ಪ್ರಮುಖ ಉದ್ಯಮಿಗಳಿಂದ ಸಹಿ ಮಾಡಿದ ಪತ್ರಗಳನ್ನು ನೀಡಲಾಗುವುದು.

ಇದರ ಜೊತೆಗೆ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರೂ ಸಿಎಸ್ ಮತ್ತು ಮಷಿನ್ ಲರ್ನಿಂಗ್ ಎಸೆನ್ಶಿಯಲ್ಸ್ ಕೋರ್ಸ್ಗೆ ಪ್ರವೇಶ ಪಡೆಯುತ್ತಾರೆ. ಸ್ಕೇಲ ರ್ನಿಂದ ಮಾಜಿ ಗೂಗಲ್ ಬೋಧಕರು ಈ ಕೋರ್ಸ್ನಲ್ಲಿ ಪಾಠ ಮಾಡಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಇತರ ಪ್ರಶಸ್ತಿಗಳು ಮತ್ತು ಸಾಧನೆ ಗುರುತಿಸುವಿಕೆಯ ಅವಕಾಶಗಳನ್ನು ಪಡೆಯಲಿದ್ದಾರೆ.

Leave a Reply

Your email address will not be published. Required fields are marked *