ಬೆಂಗಳೂರು: ಆಟೊಮೊಬೈಲ್ ರಿಟೇಲ್ ವಲಯದಲ್ಲಿ ಕೌಶಲ್ಯವನ್ನು ಒದಗಿಸಲು ಸೂಕ್ತ ಔದ್ಯಮಿಕ ತರಬೇತಿಯನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ) ಜೊತೆಗೆ ಇಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಪಾಲುದಾರಿಕೆಯನ್ನು ಮಾಡಿಕೊಂಡಿದೆ.
ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಮೂರು ವರ್ಷದ ವಿಸ್ತೃತ ಬಿಬಿಎ ಕೋರ್ಸ್ ಅನ್ನು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ ಮತ್ತು ಮಾರುತಿ ಸುಜುಕಿ ಮತ್ತು ಕ್ರಿಸತು ಜಯಂತಿ ಕಾಲೇಜು ಜಂಟಿಯಾಗಿ ರೂಪಿಸಿದೆ. ಕೋರ್ಸ್ ಪಠ್ಯಕ್ರಮವು ಯುಜಿಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ ಮತ್ತು ವಾಹನೋದ್ಯಮ ಚಿಲ್ಲರೆ ವ್ಯಾಪಾರದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲವನ್ನು ಒದಗಿಸಲಿದೆ.
ಮೂರುವ ರ್ಷದ ಥಿಯರಿ ತರಬೇತಿ ಹಾಗೂ ನಂತರದಲ್ಲಿ ಎರಡು ವರ್ಷದ ಕೆಲಸದ ತರಬೇತಿ (ಒಜೆಟಿ) ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಥಿಯರಿ ತರಬೇತಿ ಸಿಗಲಿದೆ ಮತ್ತು ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಡೀಲರ್‌ಶಿಪ್‌ಗಳಲ್ಲಿ ಪ್ರಾಯೋಗಿಕ ತರಬೇತಿಯೂ ಸಿಗಲಿದೆ. ನಿಜವಾದ ಕೆಲಸದ ಪರಿಸರದಲ್ಲಿ ತಮ್ಮ ಕೌಶಲಗಳನ್ನು ಸುಧಾರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ಒಜೆಟಿ ಅನುವು ಮಾಡಲಿದೆ ಮತ್ತು ಉದ್ಯೋಗಕ್ಕೆ ಅವರು ಸಿದ್ಧಗೊಳಿಸಿಕೊಳ್ಳಬಹುದಾಗಿದೆ.
ಮುಂದುವರಿದು, ಕಲಿಯುತ್ತಲೇ ಗಳಿಸಿ ಮಾದರಿಯನ್ನು ಕಾರ್ಯಕ್ರಮವು ಆಧರಿಸಿದೆ. ಈ ಮಧ್ಯೆ ವಿದ್ಯಾರ್ಥಿಗಳು, ಎರಡು ವರ್ಷದ ಒಜೆಟಿ ಅವಧಿಯಲ್ಲಿ ಸ್ಟೈಪಂಡ್ ಅನ್ನು ಗಳಿಸಲಿದ್ದಾರೆ. ವಿದ್ಯಾರ್ಥಿಯ ಕಾರ್ಯಕ್ಷಮತೆಯನ್ನು ಆಧರಿಸಿ, ತನ್ನ ಡೀಲರ್‌ಶಿಪ್‌ಗಳಲ್ಲಿ ವಿದ್ಯಾರ್ಥಿಗಳನ್ನು ನಿಯೋಜಿಸಲು ಮಾರುತಿ ಸುಜುಕಿ ಬೆಂಬಲ ನೀಡಲಿದೆ.
ಉಪಕ್ರಮವು ಮಾರುತಿ ಸುಜುಕಿಯ ಕೌಶಲ ಅಭಿವೃದ್ಧಿ ಪ್ರಯತ್ನಗಳಲ್ಲಿ ಒಂದಾಗಿದೆ ಮತ್ತು ವಿದ್ಯಾರ್ಥಿಗಳಲ್ಲಿ ಉದ್ಯಮಕ್ಕೆ ಅಳವಡಿಸಿದ ಪದವಿ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ ವಿಶ್ವವಿದ್ಯಾಲಯಗಳ ಜೊತೆಗೆ ಇದು ಪಾಲುದಾರಿಕೆಯನ್ನು ವಹಿಸಿದೆ.
ವಿದ್ಯಾರ್ಥಿಗಳಿಗೆ ಪ್ರಯೋಜನಗಳು
• ಮಾರುತಿ ಸುಜುಕಿ ಡೀಲರ್‌ಶಿಪ್‌ಗಳಲ್ಲಿ ಕೆಲಸ ಮಾಡುವ ಅನುಭವ
• ಮಾರುತಿ ಸುಜುಕಿ ಪರಿಣಿತರು ಮತ್ತು ಡೀಲರ್ ತಂಡಗಳಿಂದ ತರಬೇತಿ
• ಕಾನ್ಸೆಪ್ಟ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಕೌಶಲಗಳನ್ನು ಪಡೆಯಲು ಎರಡು ವರ್ಷಗಳವರೆಗೆ ನೈಜ ಕೆಲಸದ ವಾತಾವರಣಕ್ಕೆ ತೆರೆದುಕೊಳ್ಳುವಿಕೆ
• ಡೀಲರ್‌ಶಿಪ್‌ಗಳಲ್ಲಿ ‘ತರಬೇತಿ ಕೆಲಸ’ದಲ್ಲಿ ಸ್ಟೈಪೆಂಡ್ ಮತ್ತು ಕಾರ್ಯಕ್ಷಮತೆ ಆಧರಿತ ಇನ್ಸೆಂಟಿವ್
• ಮಾರುತಿ ಸುಜುಕಿ ಡೀಲರ್‌ಶಿಪ್‌ಗಳಲ್ಲಿ ಉದ್ಯೋಗದ ಅವಕಾಶ
• ಉತ್ತಮ ಮಾನ್ಯತೆ ಹೊಂದಿರುವ ಪದವಿ
ಈವರೆಗೆ ಮಾರುತಿ ಸುಜುಕಿ ಏಳು ವಿಶ್ವವಿದ್ಯಾಲಯಗಳ ಜೊತೆಗೆ ಪಾಲುದಾರಿಕೆ ಹೊಂದಿದೆ. ಅವುಗಳೆಂದರೆ ಶ್ರೀ ವಿಶ್ವಕರ್ಮ ಸ್ಕಿಲ್ ಯೂನಿವರ್ಸಿಟಿ (ಗುರುಗ್ರಾಮ್), ದೆಹಲಿ ಸ್ಕಿಲ್ & ಎಂಟರ್‌ಪ್ರನ್ಯೂರ್‌ಶಿಪ್ ಯುನಿವರ್ಸಿಟಿ (ದೆಹಲಿ), ಸಾವಿತ್ರಿಬಾಯಿ ಫುಲೆ ಪುಣೆ ಯುನಿವರ್ಸಿಟಿ (ಪುಣೆ), ಜಿಎಲ್‌ಎಸ್ ಯೂನಿವರ್ಸಿಟಿ (ಅಹಮದಾಬಾದ್), ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ – ಸ್ಕೂಲ್ ಆಫ್ ವೊಕೇಶನ್ ಎಜುಕೇಶನ್ (ಮುಂಬೈ), ಬಿ ಕೆ ಬಿರ್ಲಾ ಕಾಲೇಜು (ಕಲ್ಯಾಣ್) ಮತ್ತು ಸೆಂಚುರಿಯನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಮಟ್, ಒಡಿಶಾ (ಭುವನೇಶ್ವರ). ಈ ಪಾಲುದಾರಿಕೆಗಳ ಭಾಗವಾಗಿ ವಿವಿಧ ನಗರಗಳಲ್ಲಿ ಒಟ್ಟು 369 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಇನ್ನಷ್ಟು ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ – https://www.kristujayanti.edu.in/