Monday, 14th October 2024

Viral News: ಬಿಎಂಟಿಸಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, 45 ಜನ ಪಾರು!

viral news bmtc bus

ಬೆಂಗಳೂರು : ಬಿಎಂಟಿಸಿ ಬಸ್ (BMTC bus) ಚಾಲನೆ ಮಾಡುತ್ತಿರುವಾಗಲೇ ಬಿಎಂಟಿಸಿ ಚಾಲಕನಿಗೆ ಏಕಾಏಕಿ ಎದೆನೋವು (Heart Attack) ಕಾಣಿಸಿಕೊಂಡಿದ್ದು, ಅಪಾಯದ ಅಂಚಿನಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕನನ್ನು ಸಂಚಾರಿ ಪೊಲೀಸರು (Viral news) ರಕ್ಷಿಸಿದ್ದಾರೆ. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ ಸೇರಿದಂತೆ 45 ಜನರ ಜೀವ ಉಳಿದಿದೆ.

ಗುರುವಾರ ಮಧ್ಯಾಹ್ನ ಬೆಂಗಳೂರಿನ ಶಾಂತಿನಗರ ಡಬಲ್ ರೋಡ್ ಬಳಿ ಘಟನೆ ನಡೆದಿದೆ. ಕೆಎ 51 ಎಜೆ 6905 ನಂಬರ್ ಬಸ್ ಡ್ರೈವರ್ ದಿನೇಶ್ ಅವರಿಗೆ ಚಾಲನೆ ಮಾಡುತ್ತಿರುವಾಗಲೇ ಹೃದಯಘಾತ ಸಂಭವಿಸಿದೆ. ಬಸ್ ನಿಧಾನಕ್ಕೆ ಚಲಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ಕೂಡಲೇ ಧಾವಿಸಿ ಬಸ್ ಚಾಲಕನನ್ನು ರಕ್ಷಿಸಿದ್ದಾರೆ.

ಹಲಸೂರಿನ ಟ್ರಾಫಿಕ್ ASI ರಘು ಹಾಗೂ ಕಾನ್ಸ್ಟೇಬಲ್ ಅವರ ಸಮಯ ಪ್ರಜ್ಞೆಯಿಂದ 45 ಜನರ ಪ್ರಾಣ ಉಳಿದಿದೆ. ಬಸ್‌ನಲ್ಲಿ ಸುಮಾರು 45 ಜನ ಪ್ರಯಾಣಿಕರಿದ್ದರು. ಸಂಚಾರಿ ಪೊಲೀಸರ ಈ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸದೆ 45 ಜನರ ಜೀವ ಉಳಿದಿದೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಸತ್ತ ನಾಯಿಯನ್ನು ಪಕ್ಕಕ್ಕೆ ಇಡುವ ವೇಳೆ ಅಪಘಾತ, ಓರ್ವ ಸಾವು, ಮತ್ತೊರ್ವನ ಸ್ಥಿತಿ ಗಂಭೀರ