ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಅಂತಿಮ ಘಟ್ಟ ತಲುಪಿದ್ದು, ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ್ ಆರಂಭವಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ರಾಜ್ಯದಲ್ಲಿ 80 ಲಕ್ಷ ವೀರಶೈವ ಲಿಂಗಾಯಿತರಿದ್ದಾರೆ. ಮೀಸಲಾತಿ ನೀಡುವ ಸಂಬಂಧ ಉಪಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ನಾನೂ ಕೂಡ ಸದಸ್ಯನಾಗಿದ್ದೇನೆ. ಕಾನೂನು ತೊಡಕು ಬಂದ ಹಿನ್ನೆಲೆಯಲ್ಲಿ ಪಂಚಮಸಾಲಿಗೆ ಮೀಸಲಾತಿ ನೀಡಲು ಆಗಿರಲಿಲ್ಲ. ಇನ್ನು ಕೆಲದಿನಗಳ ಕಾಲ ಸಮುದಾಯಗಳು ಕಾಯಬೇಕು ಎಂದರು.
ಮೀಸಲಾತಿಗಾಗಿ 70 ವರ್ಷಗಳ ಕಾಲ ಕಾದಿದ್ದೇವೆ. ಹೀಗಿರುವಾಗ ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕಾದ ಅಗತ್ಯವಿದೆ. ಮೀಸಲಾತಿ ನೀಡಲು ಸರ್ಕಾರಕ್ಕೆ ಸ್ವಲ್ಪ ಸಮಯ ನೀಡಬೇಕು ಎಂದು ಹೆಳಿದರು.