ಬೆಂಗಳೂರು: ಮುಂಚೂಣಿ ಇವಿ (Electric Vehicle) ಚಾರ್ಜಿಂಗ್ ಸ್ಟೇಷನ್ ಅಗ್ರಿಗೇಟಿಂಗ್ ಪ್ಲಾಟ್ ಫಾರ್ಮ್ ಆಗಿರುವ ಚಾರ್ಜರ್ (Charzer) ಬೆಂಗಳೂ ರಿನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಸ್ಮಾರ್ಟ್ ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದೆ. ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ನ ನೆಲ ಮಹಡಿಯಲ್ಲಿರುವ ಈ ಮೀಸಲು ಪ್ರದೇಶದಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬ್ಯಾಟರಿ ಚಾರ್ಚ್ ಮಾಡಬಹುದಾದ ನಾಲ್ಕು ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉದ್ಯೋಗಿಗಳು ಮತ್ತು ಅಲ್ಲಿಗೆ ಭೇಟಿ ನೀಡವವರು ಈ ಸೌಲಭ್ಯವನ್ನು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.
ಇವಿ ಮಾಲೀಕರು ಚಾರ್ಜರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಚಾರ್ಜಿಂಗ್ ಕೇಂದ್ರಗಳನ್ನು ಬಳಸಿಕೊಳ್ಳಬಹುದು. ಇದು ಚಾರ್ಜಿಂಗ್ ಕೇಂದ್ರದ ಸೌಲಭ್ಯವನ್ನು ಸುಲಭವಾಗಿ ಪಡೆಯಲು ನೆರವಾಗುತ್ತದೆ. ಡಬ್ಲ್ಯುಟಿಸಿಯ ಉದ್ಯೋಗಿಗಳು, ಒರಾಯನ್ ಮಾಲ್ಗೆ ಶಾಪಿಂಗ್ ಮಾಡಲು ತೆರಳುವವರು . ಕ್ಯಾಂಪಸ್ ನೊಳಗಿನ ಹಲವಾರು ಔದ್ಯೋಗಿಕ ಸಂಸ್ಥೆಗಳಿಗೆ ಭೇಟಿ ನೀಡುವವರು ಇವಿ ಚಾರ್ಜಿಂಗ್ ವಲಯದ ಸೌಲಭ್ಯ ಪಡೆಯಬಹುದು. ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನ ಮಾಲೀಕರು ಈ ವಲಯದ ಸೌಲಭ್ಯ ಪಡೆಯಬಹುದಾಗಿದೆ.
ಫೆಸಿಲಿಟಿ ಮ್ಯಾನೇಜ್ಮೆಂಟ್-ಬ್ರಿಗೇಡ್ ಗ್ರೂಪ್ನ ಉಪಾಧ್ಯಕ್ಷ ಸಿತಾಂಶು ಎಸ್ ಈ ಕುರಿತು ಮಾತನಾಡಿ “ನಮ್ಮ ನಿವಾಸಿಗಳಿಂದ ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ನಮ್ಮ ಇಎಸ್ಜಿ ಬದ್ಧತೆಗಳ ಭಾಗವಾಗಿ ನಾವು 2 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಭಾವ್ಯ ಆಪರೇಟರ್ಗಳ ಅನ್ವೇಷಣೆ ಮಾಡಿದೆವು. ತಮ್ಮ ಬ್ಯುಸಿನೆಸ್ ಮಾಡೆಲ್ನಲ್ಲಿ ಹೆಚ್ಚು ಸರಳವಾಗಿರುವವರು ಹಾಗೂ ಹೆಗಲಿಗೆ ಹೆಗಲುಕೊಡುವಂಥ ನೈಜ ಪಾಲುದಾರರೇ ನಮ್ಮ ನಿರೀಕ್ಷೆಯಾಗಿದ್ದವು. ‘ಚಾರ್ಜರ್’ ತಂಡವು ವಾಸ್ತವತೆಯನ್ನು ಅರಿತುಕೊಂಡಿರುವ ಜತೆಗೆ ಪ್ರಸ್ತುತ ನಮ್ಮ ಸುತ್ತಲಿರುವ ಇವಿ ವಾಹನಗಳು ಈ ಕ್ಷೇತ್ರದ ಬೆಳವಣಿಗೆ ಹಾಗೂ ಹತ್ತಿರದ ಇವಿ ಚಾರ್ಜಿಂಗ್ ಸೌಲಭ್ಯದ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚುಆಸಕ್ತಿ ವಹಿಸಿತ್ತು. ಅದೇ ರೀತಿ ಅತ್ಯುತ್ತಮ ವ್ಯವಹಾರ ಮಾದರಿಯನ್ನು ನಮ್ಮ ಪ್ರಸ್ತುತಪಡಿಸಿತು. ಹೀಗಾಗಿ ಈ ಸ್ಥಾಪನೆ ಬ್ರಿಗೇಡ್ ಮತ್ತು ಚಾರ್ಜರ್ ತಂಡಕ್ಕೂ ಲಭಿಸಿದ ಗೆಲುವು. ವೃತ್ತಿಪರ ಕಾರ್ಯ ವಿಧಾನ ಮತ್ತು ಗ್ರಾಹಕರ ಅವಶ್ಯಕತೆಗಳ ಬಗ್ಗೆ ಆಳವಾದ ತಿಳುವಳಿಕೆ ಚಾರ್ಜರ್ ಸಂಸ್ಥೆಗೆ ಇದ್ದ ಕಾರಣ ಅದು ಪ್ರತಿಸ್ಪರ್ಧಿಗಳ ವಿರುದ್ಧ ಮೇಲುಗೈ ಸಾಧಿಸಿತು. ಇದು ಅಂತಿಮ ಒಪ್ಪಂದಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ಹೊಸ ಇವಿ ಸ್ಟೇಷನ್ಗಳ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿದ ಚಾರ್ಜರ್ನ ಸಿಇಒ ಮತ್ತು ಸಹ-ಸಂಸ್ಥಾಪಕ ಸಮೀರ್ ರಂಜನ್ ಜೈಸ್ವಾಲ್, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಕಡೆಗಿನ ಜನರ ಆಸಕ್ತಿ ಹೆಚ್ಚುತ್ತಿರುವುದರಿಂದ, ವಾಣಿಜ್ಯ ಕೇಂದ್ರಗಳಲ್ಲಿ ಇವಿ ಚಾರ್ಜಿಂಗ್ ವಲಯವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಇವಿ ಚಾರ್ಜಿಂಗ್ ಕೇಂದ್ರಗಳ ಅಳವಡಿಕೆಯನ್ನು ವೇಗಗೊಳಿಸುವ ನಮ್ಮ ಧ್ಯೇಯಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಸೌಲಭ್ಯವನ್ನು ಬಯಸುವ ಯಾವುದೇ ವಾಣಿಜ್ಯ ಕೇಂದ್ರಗಳಲ್ಲಿ ಶೂನ್ಯ ವೆಚ್ಚದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಅಳವಡಿಸಲು ಸಿದ್ದರಿದ್ದೇವೆ.
ಇವಿ ವಾಹನಗಳ ಮಾಲೀಕರಿಗೆ ತಡೆರಹಿತ ಮತ್ತು ಸುಲಭವಾಗಿ ದೊರಕಬಹುದಾದ ಇವಿ ಚಾರ್ಜಿಂಗ್ ಅನುಭವವನ್ನು ನೀಡಲು ಡಬ್ಲ್ಯುಟಿಸಿಯೊಂದಿನ ನಮ್ಮ ಒಪ್ಪಂದದ ಬಗ್ಗೆ ಹೆಚ್ಚು ಉತ್ಸುಕರಾಗಿದ್ದೇವೆ. ಇವಿ ವಾಹನಗಳ ಮಾಲೀಕರು ಕೆಲಸ ಮಾಡುತ್ತಿರಲಿ, ಊಟ ಮಾಡುತ್ತಿರಲಿ ಅಥವಾ ಮಾಲ್ಗಳಲ್ಲಿ ಅಡ್ಡಾಡುತ್ತಿರಲಿ, ಚಾರ್ಜರ್ನ ಇವಿ ಚಾರ್ಜಿಂಗ್ ವಲಯವು ಅವರ ವಾಹನಗಳು ಚಾರ್ಜ್ ಆಗುವಂತೆ ಮಾಡಲಿದೆ ಅವರು ವಾಣಿಜ್ಯ ಕೇಂದ್ರಗಳಲ್ಲಿ ನಾನಾ ಚಟುವಟಿಕೆಗಳಲ್ಲಿ ತೊಡಗಿದ್ದಾಗ ವಾಹನವನ್ನು ಅನುಕೂಲಕರವಾಗಿ ನಿಲ್ಲಿಸಲು ಮತ್ತು ಚಾರ್ಜ್ ಮಾಡಲು ನೆರವಾಗಲಿದೆ ಎಂದು ಹೇಳಿದರು.
ಪ್ರಸ್ತುತ, ಚಾರ್ಜರ್ ಭಾರತದ 250+ ನಗರಗಳಲ್ಲಿ 300 ಮೆಗಾ ವ್ಯಾಟ್ ವಿದ್ಯುತ್ ಅನ್ನು ವಿತರಿಸುವ ಮೂಲಕ ಪ್ರತಿ ತಿಂಗಳು 19 ಲಕ್ಷ ಇವಿ ಕಿಲೋ ಮೀಟರ್ ಗಿಂತ ಹೆಚ್ಚು ಶಕ್ತಿಯನ್ನು ನೀಡುತ್ತಿದೆ.
Charzer ಬಗ್ಗೆ ಭಾರತದ ಎಲೆಕ್ಟ್ರಿಕ್ ವಾಹನ (ಇವಿ) ಉದ್ಯಮದಲ್ಲಿ ಪ್ರವರ್ತಕ ಶಕ್ತಿಯಾದ ಚಾರ್ಜರ್, ವೈವಿಧ್ಯಮಯ ಶ್ರೇಣಿಯ ಪರಿಹಾರಗಳೊಂದಿಗೆ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಪರಿವರ್ತನೆ ಮಾಡುತ್ತಿದೆ. ದ್ವಿಚಕ್ರ ವಾಹನಗಳಿಂದ ಹಿಡಿದು ಕಾರುಗಳು ಮತ್ತು ಬಸ್ಸುಗಳವರೆಗೆ, ಚಾರ್ಜರ್ ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲು ಸಮರ್ಪಿತವಾಗಿದೆ, ಇದು ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ನಾಂದಿಯಾಗಿದೆ. .
ಇವಿ ಕ್ಷೇತ್ರದ ಪ್ರಗತಿಗಾಗಿ ಚಾರ್ಜರ್ ಸಂಸ್ಥೆಯು ಒಂದೇ ಸೂರಿನಡಿ ಪರಿಹಾರ ಒದಗಿಸುತ್ತದೆ, ಹೊಸ ವಾಣಿಜ್ಯ ಮತ್ತು ವಸತಿ ಸಮುಚ್ಛಯಗಳು, ಕಚೇರಿ ಗಳು, ಅಪಾರ್ಟ್ಮೆಂಟ್ಗಳು ಮತ್ತು ಟೆಕ್ ಪಾರ್ಕ್ಗಳಲ್ಲಿ ಇವಿ ಸ್ಟೇಷನ್ಗಳ ಸ್ಥಾಪನೆಯ ಯೋಜನೆಯಿಂದ ಹಿಡಿದು ಅದರ ಸಂಪೂರ್ಣ ಪ್ರಕ್ರಿಯೆ ಯನ್ನು ನಿರ್ವಹಿಸುತ್ತದೆ.
ಇದಲ್ಲದೆ, ಚಾರ್ಜರ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬಯಸುವ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಸಮಗ್ರ, ತಂತ್ರಜ್ಞಾನಯುಕ್ತ ಪ್ಯಾಕೇಜ್ ಅನ್ನು ಒದಗಿಸುತ್ತದೆ. ಈ ಕೊಡುಗೆಯು ಶೂನ್ಯ ಮುಂಗಡ ವೆಚ್ಚದಲ್ಲಿ ನಿಧಾನ ಮತ್ತು ವೇಗದ ಚಾರ್ಜರ್ಗಳ ಅಳವಡಿಕೆಯನ್ನು ಒಳಗೊಂಡಿದೆ. ಜೊತೆಗೆ ಚಾರ್ಜರ್ ಮೊಬೈಲ್ ಅಪ್ಲಿಕೇಶನ್, ಆರ್ಎಫ್ಐಡಿ ಕಾರ್ಡ್ಗಳು, ವಾಟ್ಸಾಪ್ ನಿರ್ವಹಣೆ ಮತ್ತು ಸ್ಟೇಷನ್ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ಡ್ಯಾಶ್ಬೋರ್ಡ್ ಸೌಲಭ್ಯವನ್ನೂ ಇದು ಒಳಗೊಂಡಿರುತ್ತದೆ.
ಚಾರ್ಜರ್ ಸ್ಥಾಪನೆ ಮಾಡುವ ಮೊದಲು, ಸಮೀರ್ ಅವರು ಇವಿ ಸ್ಕೂಟರ್ ಬಾಡಿಗೆ ಮತ್ತು ಫ್ಲೀಟ್ ಮ್ಯಾನೇಜ್ಮೆಂಟ್ ಸ್ಟಾರ್ಟ್ಅಪ್ ಆಗಿರುವ ಎಫ್ಎಇ ಬೈಕ್ಸ್ ನ ಸಹ-ಸ್ಥಾಪಕರಾಗಿದ್ದರು . ದೊಡ್ಡ ಇವಿ ಫ್ಲೀಟ್ ಅನ್ನು ನಿರ್ವಹಿಸುವಲ್ಲಿ ಸಮೀರ್ ಅವರು ಅಪಾರ ಅನುಭವ ಹೊಂದಿದ್ದಾರೆ. ಈ ಮೂಲಕ ಅವರು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಎದುರಿಸುವ ಮುಖ್ಯ ಸವಾಲುಗಳು ಮತ್ತು ಇವಿ ಚಾರ್ಜರ್ಗಳ ಸ್ಥಾಪನೆಗಿರುವ ಅಡೆತಡೆಗಳನ್ನು ಪತ್ತೆ ಹಚ್ಚಿದ್ದರು.