Friday, 2nd June 2023

ಹಿರಿಯೂರು ಪ್ರವೇಶಿಸಿದ ಭಾರತ್ ಜೋಡೋ ಪಾದಯಾತ್ರೆ

ಚಿತ್ರದುರ್ಗ: ತುಮಕೂರು ಜಿಲ್ಲೆಯಿಂದ ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಹಿರಿಯೂರು ನಗರ ಪ್ರವೇಶಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಸೆಪ್ಟೆಂಬರ್ 30ರಿಂದ ಕರ್ನಾಟಕದಲ್ಲಿ ಆರಂಭವಾಗಿದೆ.

ರಾಜ್ಯದಲ್ಲಿ ಸೋಮವಾರ 9ನೇ ದಿನದ ಭಾರತ್‌ ಜೋಡೊ ಪಾದಯಾತ್ರೆ ಮುಂದುವರೆದಿದೆ, ತುಮಕೂರಿನ ಹುಳಿಯಾರು ಮೂಲಕ ಹೊಸದುರ್ಗ ಗಡಿಭಾಗದ ಹಿರಿಯೂರು ಪ್ರವೇಶಿಸಿದೆ. 15ರಂದು ಬಳ್ಳಾರಿಯಲ್ಲಿ ಸಮಾವೇಶ ಏರ್ಪಡಿಸಿದ ಕಾರಣಕ್ಕೆ ಯಾತ್ರೆ ಎರಡು ದಿನ ಮುನ್ನ ಜಿಲ್ಲೆಯನ್ನು ಪ್ರವೇಶಿಸಿದೆ.

ತುಮಕೂರು ಗಡಿಯಿಂದ ಬಳ್ಳಾರಿ ಗಡಿಯವರೆಗೆ 130 ಕಿ.ಮೀ ದೂರದವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ಸಾಗಲಿದೆ.

ಅಕ್ಟೋಬರ್ 14 ರವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಹಿರಿಯೂರು ಚಳ್ಳಕೆರೆ, ಮೊಳಕಾಲ್ಮೂರು ಮಾರ್ಗದಲ್ಲಿ ಯಾತ್ರೆ ನಡೆಯಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನೀಡಲಾಗಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 30 ರಿಂದ ಅ.14ರ ವರೆಗೆ ರಾಹುಲ್ ಪಾದಯಾತ್ರೆ ನಡೆಯುತ್ತಿದೆ. ಹಿರಿಯೂರು ನಗರದಿಂದ ಚಳ್ಳಕೆರೆ ರಸ್ತೆಯ ಬಾಲೆನಹಳ್ಳಿ ಮುಂದುವರಿದು ಹರ್ತಿಕೋಟೆಯಲ್ಲಿ ವಾಸ್ತವ್ಯ ಹೂಡುವರು. ನಂತರ ಬೆಳಿಗ್ಗೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಚೇತನ್ ಹೋಟೆಲ್ ಬಳಿ ವಿಶ್ರಾಂತಿ ಪಡೆದು ಚಳ್ಳಕೆರೆ ನಗರದ ಪ್ರವೇಶಿಸಲಿದೆ.

error: Content is protected !!