Friday, 13th December 2024

ಜೊಡೊ ಯಾತ್ರೆ ಯಶಸ್ಸಿಗೆ ಸಜ್ಜಾಗಿ : ಮಾಜಿ ಶಾಸಕ ರಫೀಕ್ ಮನವಿ

ಚಿಕ್ಕನಾಯಕನಹಳ್ಳಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೊ ಪಾದಯಾತ್ರೆ ಯಶಸ್ಸಿಗೆ ಜಿಲ್ಲೆಯ ಕೈ ಕಾರ್ಯಕರ್ತರು ಸಜ್ಜಾಗಬೇಕೆಂದು ಮಾಜಿ ಶಾಸಕ ರಫೀಕ್ ಅಹಮದ್ ಮನವಿ ಮಾಡಿದ್ದಾರೆ.

ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಾದಯಾತ್ರೆಯು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸಾಗಲಿದೆ. ತುರುವೇಕೆರೆ ತಾಲ್ಲೂಕಿನ ಟಿ.ಬಿ.ಕ್ರಾಸ್‌ಗೆ ಅ.೮ ರಂದು ಆಗಮಿಸುವ ಮೂಲಕ ಯಾತ್ರೆ ಜಿಲ್ಲೆಗೆ ಪ್ರವೇಶಿ ಸಲಿದೆ.

ನಂತರ ತುರುವೇಕೆರೆ ಪಟ್ಟಣದ ಮೂಲಕ ತೆರಳಿ ಅಂದು ರಾತ್ರಿ ಬಾಣಸಂದ್ರದಲ್ಲಿ ರಾಹುಲ್ ಗಾಂಧಿಯವರು ತಂಗಲಿದ್ದಾರೆ. ೯ ರಂದು ತಿಪಟೂರಿನ ಕೆ.ಬಿ.ಕ್ರಾಸ್ ನಿಂದ ಬೆ.೬.೩೦ ಕ್ಕೆ ಯಾತ್ರೆ ಆರಂಭವಾಗಿ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರ, ಗೋಡೆಕೆರೆ ಹಾಗು ಪಟ್ಟಣದ ಮೂಲಕ ಹಾದುಹೋಗಿ ಪೋಚಕಟ್ಟೆಯವರೆಗೂ ಯಾತ್ರೆ ನಡೆಯಲಿದೆ.

೧೦ ರಂದು ಪೋಚಕಟ್ಟೆ ಯಿಂದ ಪ್ರಾರಂಭವಾಗಿ ಹುಳಿಯಾರು ಮುಖಾಂತರ ಬಸವನ ಗುಡಿಗೆ ತೆರಳಿ ಅಲ್ಲಿಂದ ಕಾರಿನಲ್ಲಿ ಹಿರಿಯೂರು ಪ್ರವೇಶಿಸಲಿದ್ದಾರೆ ಎಂದು ವಿವರಿಸಿದರು.

ಮಾಜಿ ಶಾಸಕ ಲಕ್ಕಪ್ಪ ಮಾತನಾಡಿ ಯಾತ್ರೆ ಯಶಸ್ವಿಗೊಳಿಸಲು ನಮ್ಮ ನಾಯಕರು ಹಾಗು ಕಾರ್ಯಕರ್ತರು ಸಜ್ಜಾಗಿದ್ದಾರೆ. ಜೋಡೊ ಯಾತ್ರೆ ಭಾರತದ ಇತಿಹಾಸದ ನೆನಪಿನಲ್ಲಿ ಉಳಿಯಲಿದ್ದು ಹೊಸ ಅಧ್ಯಾಯ ಸೃಷ್ಟಿಯಾಗಲಿದೆ. ಈ ಯಾತ್ರೆಯು ಮುಂದಿನ ಚುನಾವಣೆಯ ರಂಗ ತಾಲೀಮಿನಂತೆ ಎಂದು ತಿಳಿಸಿದರು.

ಬೀಡಿ ಕಟ್ಟುವವರ ಜೊತೆ ಸಂವಾದ ಏಕೆ ?
ರಾಹುಲ್ ಗಾಂಧಿ ಅವರು ಬೀಡಿ ಕಟ್ಟುವವರು, ನೇಕಾರರು, ರೈತರು ಸೇರಿದಂತೆ ವಿವಿಧ ಸಮುದಾಯ, ಸಂಘಟನೆಗಳು, ಚಿಂತಕರ ಜೊತೆ ಸಂವಾದ ನಡೆಸಲಿದ್ದಾರೆ. ಬೀಡಿ ಕಟ್ಟುವವರ ಜೊತೆ ಸಂವಾದ ನಡೆಸಿ ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿ ದ್ದೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಬೀಡಿ ಕಟ್ಟುವವರನ್ನು ಇತರೆ ಕೆಲಸ ಮಾಡಲು ಉತ್ತೇಜಿಸಲಾಗುವುದು. ಆದರೂ ನಿಮ್ಮ ಸಲಹೆಯನ್ನು ಹೈಕಮಾಂಡ್ ಗಮನಕ್ಕೆ ತರುÀತ್ತೇನೆಂದು ಮಾಜಿ ಶಾಸಕ ರಫೀಕ್ ಅಹಮದ್ ನುಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪರಮೇಶ್ವರ್, ಸೇವಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಕೆಪಿಸಿಸಿ ಅಲ್ಪಾ ಸಂಖ್ಯಾತ ಘಟಕದ ವೀಕ್ಷಕರಾದ ಎಹತೇ ಶ್ಯಾಮ್ ಪಾಶ, ಥಾಮ್ಸನ್, ಅಲ್ಲಾಬಕಷ್, ಅಬ್ದುಲ್ ಸಲಾಂ, ಬ್ಲಾಕ್ ಅಧ್ಯಕ್ಷ ಬಸವ ರಾಜು, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಬ್ರಹ್ಮಾನಂದ್, ಮುಖಂಡರಾದ ಮುಜೀಬ್, ಶ್ರೀಧರ, ಸಾಸಲು ಮಂಜುನಾಥ್, ನರಸಿಂಹಮೂರ್ತಿ ಹಾಜರಿದ್ದರು.