Wednesday, 9th October 2024

ಭೀಮಾ ಕೋರೆಗಾಂವ್  ದಲಿತರ ಸ್ವಾಭಿಮಾನಿ ಹೋರಾಟ

ತುಮಕೂರು: ಭೀಮಾ ಕೋರೆಗಾಂವ್  ದಲಿತರ ಸ್ವಾಭಿಮಾನಿ ಹೋರಾಟದ ಮೈಲಿಗಲ್ಲು ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿವತಿಯಿಂದ,ದಲಿತ, ಪ್ರಗತಿಪರ ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ 204ನೇ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ ದರು.
ದಲಿತ  ಸಮುದಾಯವನ್ನು ಮರಾಠರ 2ನೇ ಬಾಜಿರಾಯ್ ಮತ್ತು ಅವರ ಸಮಕಾಲಿನ ರಾಜ್ಯಗಳು, ಹಿಯಾಳಿಸಿ, ಅವಮಾನಿಸಿ, ದೌರ್ಜನ್ಯವೆಸಗಿದ್ದ ವಿರುದ್ದ 1818ರ ಜನವರಿ 1 ರಂದು ನಡೆದ ಈ ಯುದ್ದ ಈ ಹೊತ್ತಿನ ದಲಿತ ಹೋರಾಟಕ್ಕೂ ಚೈತನ್ಯ ತುಂಬಲಿದೆ ಎಂದರು.
ದಲಿತ ಮುಖಂಡ ಟಿ.ಕೆ.ಗುರುಪ್ರಸಾದ್ ಮಾತನಾಡಿ,ಶಿವಾಜಿ ಸೈನ್ಯದಲ್ಲಿ ಮಹತ್ವದ ಹುದ್ದೆ ಗಳಲ್ಲಿದ್ದ ಮಹರ್ ಸೈನಿಕರನ್ನು ಒಂದನೇ ಬಾಜಿರಾಯ ಮತ್ತು ಎರಡನೇ ಬಾಜಿ ರಾಯ ಅವರುಗಳ ಆಡಳಿತದಲ್ಲಿ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳ ಲಾಗುತ್ತಿತ್ತು.
ದಲಿತ ಸಮುದಾಯಕ್ಕೆ ಸೇರಿದ ಮಹರ್ ಸೈನಿಕರು,ಸ್ವಾಭಿಮಾನದ ಬದುಕಿಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದವರು.ಇತಿಹಾಸದಿಂದ ಮರೆಯಾಗಿದ್ದ ಈ ಸಂಗತಿ,ಅಮನಬೇಡ್ಕರ್ ಅವರಿಂದ ಬೆಳಕಿಗೆ ಬರುವ ಮೂಲಕ ನಮಗೂ ಒಂದು ಐತಿಹಾಸಿಕ ಹಿನ್ನೆಲೆಯಲ್ಲಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಅಧ್ಯಕ್ಷ ಮನು ಮಾತನಾಡಿ, ಹಲವಾರು ದಲಿತ ಹೋರಾಟ ಗಳು ಇತಿಹಾಸದ ಪುಟಗಳಿಂದ ಮರೆಯಾಗಿವೆ.ಆದರೆ ಅಂಬೇಡ್ಕರ್ ರಂತಹ ಪ್ರಾಜ್ಞರು,ಇದನ್ನು ಹೆಕ್ಕಿ ತೆಗೆದು, ದಲಿತರು ಸ್ವಾಭಿ ಮಾನದಿಂದ ತಲೆ ಎತ್ತಿ ಬದುಕುವಂತೆ ಮಾಡಿದ್ದಾರೆ.ಭೀಮಾ-ಕೋರೆಗಾವ್ ವಿಜಯೋತ್ಸವ ನಮ್ಮಂತಹ ಯುವಜನತೆಗೆ ಸ್ಪೂರ್ತಿ ಎಂದರು.
ಕಾರ್ಯಕ್ರಮದಲ್ಲಿ ಮನೋಜ್.ಟಿ, ನಿತೀನ್, ನವೀನ್,ರಂಗಸ್ವಾಮಯ್ಯ, ಗೋವಿಂದರಾಜು, ರಾಮಣ್ಣ, ಶಿವಣ್ಣ, ರಾಮಚಂದ್ರ ರಾವ್, ಶಬ್ಬೀರ್, ಗೋಪಿ.ಎಂ., ಶಿವಮೂರ್ತಿ, ಬಾಲರಾಜು, ಮಾರುತಿ, ಗಂಗಾಧರ್, ವಿನಯ್, ಸಿದ್ದಲಿಂಗಯ್ಯ, ರಮೇಶ್, ಮಹಾಂತೇಶ್, ತಿಪ್ಪೇಶ್  ಭಾಗವಹಿಸಿದ್ದರು.