Wednesday, 18th September 2024

Bheemu Rathod: ಅಧುನಿಕ ಶ್ರವಣಕುಮಾರ ಭೀಮು ರಾಠೋಡ

ಶರಣಬಸಪ್ಪಾ.ಎನ್ ಕೆ.

ಅಂದು ಭೀಮು ರಾಠೋಡ ಇಂದು ಭೀಮು ಸೇಠ್ ಸಾವಿರ ಕೋಟಿಗಳ ಒಡೆಯ

ಇಂಡಿ: ಮಾತೃ ದೇವೋ ಭವ, ಪಿತೃದೇವೋ ಭವ ಆಚಾರ ದೇವೋ ಭವ ಎಂಬ ವಾಣಿಯಂತೆ, ಪ್ರಾಚೀನ ಕಾಲದಲ್ಲಿ ಶ್ರವಣಕುಮಾರನ ತಂದೆ ತಾಯಿಯ ಮೇಲಿರುವ ಭಕ್ತಿ ಭಾವ ಓದಿದ್ದೇವೆ ಹಾಗೂ ಕೇಳಿದ್ದೇವೆ. ದರೆ ೨೧ ನೇ ಶತಮಾನದ ಅಧುನಿಕ ದಿನಮಾನಗಳಲ್ಲಿ ತಂದೆ ತಾಯಿಗಳ ಬಗ್ಗೆ ಗೌರ ಪ್ರೀತಿ ಭಕ್ತಿ ಇರುವದು ಅಪರೂಪ ಇದಕ್ಕೆ ಪುಷ್ಠಿ ಕೊಟ್ಟಂತೆ ಕೆಸರಾಳ ತಾಂಡಾದ ಯುವನಾಯಕರೋಬ್ಬರು ತಂದೆ ತಾಯಿಗಳೇ ನೀಜವಾದ ದೇವರು ಎಂದು ಕಳೆದ ಮರಣ ಹೊಂದಿದ ತಂದೆ ತಾಯಿಗಳಿಬ್ಬರ ಗುಡಿ ಕಟ್ಟಿಸಿ ಶ್ರವಣಕುಮಾರನಂತೆ ಭಕ್ತಿಯ ಪರಾಕಾಷ್ಠೇಯಲ್ಲಿ ಮಿಂದೇಳುತ್ತಿರುವ ಕಾರ್ಯಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಕೆಸರಾಳ ಎಲ್.ಟಿ ಯ ದಿ|| ಶಂಕರ ,ಚಾಂದುಬಾಯಿ ಇವರ ಸುಪುತ್ರ ಯುವ ನಾಯಕ ಭೀಮು ರಾಠೋಡ ಈ ಹಿಂದೆ ತನ್ನೇಲ್ಲಾ ಜಮೀನುಗಳನ್ನು ಮಾರಾಟ ಮಾಡಿ ಕಿತ್ತು ತಿನ್ನು ಬಡತನ ಇನ್ನೇನು ಸಾಕಪ್ಪ ಸಾಕು ಎಂದು ಹೊಟ್ಟೆ ಪಾಡಿಗಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಮಹಾರಾಷ್ಟçದ ರತ್ನಗೀರಿಗೆ ತನ್ನೇಲ್ಲಾ ಕುಟುಂಬ ಸಮೇತ ಹೋಗಿ ಕೈಸರಾದರೆ ಬಾಯಿ ಮೋಸರು ಎಂಬ ನಾಣ್ನುಡಿಯಂತೆ ದುಡಿಮೆಯಲ್ಲಿಯೇ ಕಾಯಕದಲ್ಲಿ ದೇವರನ್ನು ಕಾಣಬೇಕು ಎಂಬ ಅಛಲ ನಂಬಿಕೆ ವಿಶ್ವಾದೊಂದಿಗೆ ಅನೇಕ ವರ್ಷಗಳ ಕಾಲ ಶ್ರಮಪಟ್ಟು ಅಂದು ಕಳೆದುಕೊಂಡ ಭೂಮಿ ,ಆಸ್ತಿಗಳನ್ನು ಮತ್ತೆ ಖರೀದಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಕೋಟಿ ವೀರನಾಗಿ ಕಳೆದಲ್ಲಿ ಹುಡುಕಿದ ಛಲದಂಕ ಮಲ್ಲ ಭೀಮು ರಾಠೋಡ ಇಂದು ಭೀಮು ಸೇಠ್ ಆಗಿ ಜನಮನದಲ್ಲಿದ್ದು ಜನಪ್ರತಿನಿಧಿಗಳು ಇವರನ್ನು ಹಿಂಬಾ ಲಿಸುತ್ತಿದ್ದಾರೆ.

ಭೀಮು ರಾಠೋಡ ಎಷ್ಠೇ ಬಡತನ ಬಂದರೂ ಧೃತೀಗೇಡಲ್ಲಿಲ್ಲ ಯಾರಿಗೂ ಕೈಚಾಚಲ್ಲಿಲ್ಲ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುತ್ತೇನೆ ಎಂಬ ನಂಬಿಕೆ ಅವರಲ್ಲಿತ್ತು. ಕೇವಲ ಹಣ ಅಷ್ಠೇ ಗಳಿಸುವುದೊಂದೆ ದಂಧೆ ಎಂದು ಹಣದ ಹಿಂದೆ ಬಿದ್ದಿಲ್ಲ, ಹಣ ಇಂದು ಗಳಿಸಬಹುದು ನಾಳೆ ಕಳೆಯಬಹುದು ಬಡತನ ಶ್ರೀಮಂತಿಕೆ ಬಿಸಿಲು ಕುದುರೆ ಇದ್ದ ಹಾಗೆ ಎನ್ನುತ್ತಾರೆ. ಬಡತನದ ಬೇಗೆ ಕಷ್ಟ ನಷ್ಟ ಎಲ್ಲವನ್ನು ಅರಿತ ಇವರು ಹೃದಯ ಶ್ರೀಮಂತಿಕೆಗೆ ಕೊರತೆ ಇಲ್ಲ. ಬಡತನ ಎಂದು ಬಂದವರಿಗೆ ಕೈಲಾದಮಟ್ಟಿಗೆ ಧಾನ- ಧರ್ಮ ಮಾಡುವ ಮೂಲಕ ಕೊಡುಗೈ

ಧಾನಿಯಾಗಿದ್ದಾರೆ. ನಿವೇಶನ ರಹಿತ ಬಡವರಿಗೆ ೨ ಎಕರೆ ಪ್ರದೇಶ ಭೂಮಿ ಖರೀದಿ ಮಾಡಿ ಸುಮಾರು ೬೦ ಬಡಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಿದ್ದಾರೆ.

ಮಧುವೆ ,ಸಭೆ ,ಸಮಾರಂಭಗಳಿಗೆ ಬಡತನ ಬೇಗೆಯಲ್ಲಿನ ವಿಧ್ಯಾರ್ಥಿಗಳಿಗೆ ಶಾಲಾ ,ಕಾಲೇಜು ವಿಧ್ಯಾಭ್ಯಾಸಕ್ಕಾಗಿ ಸಾಕಷ್ಟು ಹಣಕಾಸಿನ ಸಹಾಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಭೀಮು ರಾಠೋಡ ಅವರ ಹೇಳಿಕೆ ಪ್ರಕಾರ ಅವರ ತಂದೆ ತಾಯಿ ಸಂಕಷ್ಟದಲ್ಲಿ ಕಾಲ ಕಳೆದಿದ್ದು ಮುಂದೊಂದು ದಿನ ಅನಾಥಾಶ್ರಮ, ವಯೋ ವೃದ್ದಾಶ್ರಮ ತೆರೆಯುವುದಾಗಿ ಅವರ ಬಯಕೆ ಇದೆ . ಒಟ್ಟಾರೇ ಜೀವನದಲ್ಲಿ ಯಾವುದು ಶಾಶ್ವತ ಇಲ್ಲ ಬೇರೆಯವರಿಗೆ ಸಹಾಯ ಮಾಡುವ ಮೂಲಕ ತಂದೆ -ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ ಇಂತಹ ಒಳ್ಳೇಯ ಜನೋಪಕಾರಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ನಾಳೆ.ಸೆ,೩ ರಂದು ಮಧ್ಯಾಹ್ನ ೧೨ ಗಂಟೆಗೆ ಶಂಕರ,ಚಾAದುಬಾಯಿ ಜಾತ್ರಾಮಹೋತ್ಸವ ಜರುಗಲಿದೆ. ಅಂದು ಮಧ್ಯಾಹ್ನ ೧೨- ೦೦ ಗಂಟೆಯಿ0ದ ಸಂಜೆ ೭-೦೦ ರವಗರೆಗೆ ಚಂದ್ರು ಪೊಲೀಸ್ ಇಂಡಿ, ಶಾವತ್ರಿಬಾಯಿ ಗದಗ ಇವರಿಂದ ಬಂಜಾರ ನೃತ್ಯ,ಬಂಜಾರ ಭಜನಾಗಳು, ರಾತ್ರಿ ೧೦-೦೦ ಗಂಟೆಗೆ ಕೋಲಾಪೂರ ಆಕೇಸ್ಟ್ರಾ ರಸಮಂಜರಿ, ಈ ಕಾರ್ಯಕ್ರಮಕ್ಕೆ ನಾಡಿನ ಹರಚರ ಮೂರ್ತಿಗಳು, ಬಂಜಾರ ಸಮುದಾಯದ ಸ್ವಾಮಿಜಿಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಪ್ರತಿನಿಧಿಗಳು ಆಗಮಿಸಿಲ್ಲಿದ್ದಾರೆ.

*

ಕಿತ್ತು ತಿನ್ನುವ ಬಡತನ ಹೊಲ ಮನೆ ಎಲ್ಲವನ್ನು ಮಾರಾಟ ಮಾಡಿ ಮಹಾರಾಷ್ಟ್ರ ರಾಜ್ಯಕ್ಕೆ ದುಡಿಯಲು ಹೋಗಿದ ಭೀಮು ರಾಠೋಡ ತಂದೆ ತಾಯಿಯ ಆರ್ಶೀವಾದವೋ ಅಥವಾ ಸೇವಾಲಾಲ್ ಮಹಾ ರಾಜರ ಕೃಪೇಯೋ ದೇವರೇ ಬಲ್ಲ ಕಳೆದು ಹೋದ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಗಳಿಸಿ ಅಂದು ಭೀಮು ರಾಠೋಡ ಎನ್ನುತ್ತಿದ ಜನಸಮುದಾಯ ಇಂದು ಭೀಮು ಸೇಠ್ ಎನ್ನುತ್ತಿದ್ದಾರೆ ಸಾವಿರ ಕೋಟಿಗಳ ಒಡೇಯ ಇದಕ್ಕೆ ಅವರ ಪರಿಶ್ರಮ ಹಾಗೂ ತಂದೆ ತಾಯಿಗಳ ಮೇಲಿಟ್ಟಿರುವ ಭಕ್ತಿಯೇ ಕಾರಣ.
ಸಂಜು ಜಾಧವ ಕೇಸರಾಳ ತಾಂಡಾ ನಿವಾಸಿ.

Leave a Reply

Your email address will not be published. Required fields are marked *