Saturday, 14th December 2024

ತಿಪಟೂರು ಜಿಲ್ಲೆಯನ್ನಾಗಿ ಮಾಡಲು ಆಗ್ರಹಿಸಿ ಬೈಕ್ ರ‍್ಯಾಲಿ: ಕೆ.ಟಿ.ಶಾಂತಕುಮಾರ್ 

ತುಮಕೂರು : ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ವಿಶ್ವಾಸವಿದೆ ಎಂದು ಮುಖಂಡ‌ ಕೆ.ಟಿ.ಶಾಂತಕುಮಾರ್ ಹೇಳಿದರು.
ಪ್ರೆಸ್ ಕ್ಲಬ್ ನಿರ್ವಹಣೆಯ ಆಲದ ಮರ ಪಾರ್ಕ್ ಗೆ ಭೇಟಿ ನೀಡಿದ  ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆಯಿದೆ. ಹೀಗಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ತನ್ನದೇ ಮತದಾರರನ್ನು ಹೊಂದಿದ್ದೇನೆ. ಸಮಾಜ ಸೇವಾ ಕೆಲಸಗಳು ಕೈ ಹಿಡಿಯುವ ವಿಶ್ವಾಸವಿದೆ ಎಂದರು.
ಬೈಕ್ ರ‍್ಯಾಲಿ: ತಿಪಟೂರು ಜಿಲ್ಲೆಗೆ ಆಗ್ರಹಿಸಿ ಜು.2ರಂದು ತಿಪಟೂರು ನಗರದಲ್ಲಿ ಬೈಕ್  ರ‍್ಯಾಲಿ ಹಮ್ಮಿಕೊಂಡಿದ್ದು, ಸುಮಾರು 500 ಬೈಕ್ ಗಳು ರ‍್ಯಾಲಿ  ಯಲ್ಲಿರುವ ನಿರೀಕ್ಷೆಯಿದೆ. ಬೆಳಗ್ಗೆ 11 ಗಂಟೆಗೆ ರ‍್ಯಾಲಿ ಆರಂಭವಾಗಲಿದೆ ಎಂದು ತಿಳಿಸಿದರು.‌
ಹುಳಿಯಾರನ್ನು ಹೊಸ ತಾಲೂಕಾಗಿ ಮಾಡಿ , ತಿಪಟೂರು, ಚಿ.ನಾ.ಹಳ್ಳಿ, ತುರುವೇಕೆರೆ ಮತ್ತು ಹುಳಿಯಾರು ಒಳಗೊಂಡ ತಿಪಟೂರು ಜಿಲ್ಲೆ ರಚನೆ ಮಾಡಬೇಕೆಂದರು ಒತ್ತಾಯಿಸಿ ದರು.
ಪ್ರೆಸ್ ಕ್ಲಬ್ ಗೆ ಶ್ಲಾಘನೆ: ತುಮಕೂರಿಗೆ ಪ್ರೆಸ್ ಕ್ಲಬ್ ಅವಶ್ಯಕವಾಗಿತ್ತು. ಈಗ ಕ್ಲಬ್ ಆರಂಭವಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಸಂತೋಷದ ವಿಚಾರ. ಆಲದ ಮರ ಪಾರ್ಕ್ ನಿರ್ವಹಣೆಗೆ ತೆಗೆದುಕೊಂಡಿರುವುದು ಮೆಚ್ಚುವಂತಹ ಕಾರ್ಯ ಎಂದು ಶ್ಲಾಘಿಸಿದರು.