Sunday, 8th September 2024

ಕರ್ನಾಟಕ ಸರ್ಕಾರದೊಂದಿಗೆ ಬಿಸ್ಲೇರಿ ಇಂಟರ್ನ್ಯಾಷನಲ್ ಪಾಲುದಾರಿಕೆ

ಹತ್ತಿರದ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ಆಚರಣೆಯ ನಂತರ ಪ್ಲಾಸ್ಟಿಕ್ ಮರುಬಳಕೆ ಮಾಡಲು ಕರ್ನಾಟಕ ಸರ್ಕಾರದೊಂದಿಗೆ ಬಿಸ್ಲೇರಿ ಇಂಟರ್ನ್ಯಾಷನಲ್ ಪಾಲುದಾರಿಕೆ

ಈ ಕಾರ್ಯಕ್ರಮವು ಬಿಸ್ಲೆರಿಯ ಪರಿಸರ ಸ್ನೇಹಿ ಯೋಜನೆ ಉಪಕ್ರಮದೊಳಗೆ ಬಿಸ್ಲೆರಿಯವರ ‘ಬಾಟಲ್ಸ್ ಫಾರ್ ಚೇಂಜ್’ ಅಭಿಯಾನದ ಒಂದು ಅಂಶವಾಗಿದೆ.

ಬೆಂಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಪ್ರಮಾಣದ ಪ್ಲಾಸ್ಟಿಕ್ ಸಂಗ್ರಹ ಅಭಿಯಾನವನ್ನು ನಡೆಸಲು ಬಿಸ್ಲೇರಿ ಇಂಟರ್‌ನ್ಯಾಶನಲ್ ಸಂಸ್ಥೆಯು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದೆ.

ಮಾರ್ಚ್ 8, 2024 ರಂದು ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆಯ ನಂತರ ಬಿಸ್ಲೆರಿ ಇಂಟರ್ನ್ಯಾಷನಲ್ ತಂಡವು ಮಾರ್ಚ್ 14, 2024 ರಂದು ತನ್ನ “ಬಾಟಲ್ಸ್ ಫಾರ್ ಚೇಂಜ್” ಉಪಕ್ರಮದ ಅಡಿಯಲ್ಲಿ ಸಂಗ್ರಹವನ್ನು ಪ್ರಾರಂಭಿಸಿದೆ. ಇದರಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಭಕ್ತರು ಸೇವಿಸಿದ 1,958 ಕೆಜಿ ಪ್ಲಾಸ್ಟಿಕ್ ಅನ್ನು ತಂಡವು ಸಂಗ್ರಹಿಸಿ ಮರುಬಳಕೆಗಾಗಿ ತಲುಪಿಸಿದೆ. ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ದೇವಾ ಲಯಕ್ಕೆ ಭೇಟಿ ನೀಡಿದ್ದರು.

ಕರ್ನಾಟಕ ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಆಫೀಸರ್ ಶ್ರೀ ಮೋಹನ್ ಕುಮಾರ್ ಹೇಳುವಂತೆ, “ಈ ಪಾಲುದಾರಿಕೆಯು ಪರಿಸರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮಹತ್ವದ ಕ್ರಮವಾಗಿದೆ. ‘ಬಾಟಲ್ಸ್ ಫಾರ್ ಚೇಂಜ್’ ಉಪಕ್ರಮದ ಅಡಿಯಲ್ಲಿ ಮರುಬಳಕೆಯ ಪ್ರಯತ್ನಗಳಲ್ಲಿ ಬಿಸ್ಲೆರಿ ಇಂಟರ್‌ ನ್ಯಾಶನಲ್‌ನ ಸಹಕಾರ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ನಾವು ಶ್ಲಾಘಿಸುತ್ತೇವೆ. ಕರ್ನಾಟಕದ ಪರಿಸರ ಸ್ನೇಹಿ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಶ್ರಮಿಸುತ್ತೇವೆ.”

ಸಹಭಾಗಿತ್ವದ ಕುರಿತು ಮಾತನಾಡಿದ ಬಿಸ್ಲೇರಿ ಇಂಟರ್‌ನ್ಯಾಶನಲ್‌ನ OSR ಮತ್ತು ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕರಾದ ಕೆ ಗಣೇಶ್, “ನಮ್ಮ ‘ಬಾಟಲ್ಸ್ ಫಾರ್ ಚೇಂಜ್’ ಉಪಕ್ರಮದ ಮೂಲಕ ಪರಿಸರ ಜಾಗೃತಿಯನ್ನು ಮೂಡೆಸಲು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಅರಣ್ಯ ಇಲಾಖೆ ಯೊಂದಿಗೆ ಪಾಲುದಾರಿಕೆ ಹೊಂದುವುದು ನಮ್ಮ ಸೌಭಾಗ್ಯವಾಗಿದೆ. ಈ ಸಹಯೋಗವು ಸಕಾರಾತ್ಮಕ ಬದಲಾವಣೆಯನ್ನು ಉಂಟು ಮಾಡುವ ಮತ್ತು ಕರ್ನಾಟಕಕ್ಕೆ ಸುಸ್ಥಿರ ಭವಿಷ್ಯವನ್ನು ರೂಪಿಸುವ ನಮ್ಮ ಜಂಟಿ ಬದ್ಧತೆಯನ್ನು ಒತ್ತಿಹೇಳುತ್ತದೆ.”

ಮುಂಡಾಜೆ ಮೂಲದ ಎನ್‌ಜಿಒ ಹಸಿರು ತಪಸ್ಸು, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ತಂಡ ಮತ್ತು ಮುಂಡಾಜೆಯ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ರೋವರ್ ಮತ್ತು ರೇಂಜರ್ ತಂಡವು ‘ಬಾಟಲ್ಸ್ ಫಾರ್ ಚೇಂಜ್’ ಉಪಕ್ರಮದ ಭಾಗವಾಗಿ ಬಿಸ್ಲೇರಿ ಇಂಟರ್‌ನ್ಯಾಶನಲ್‌ನೊಂದಿಗೆ ಕಾರ್ಯ ನಿರ್ವಹಿಸಿತು.

Leave a Reply

Your email address will not be published. Required fields are marked *

error: Content is protected !!