Saturday, 14th December 2024

ಇನ್ನೂ 40 ವರ್ಷ ಬಿಜೆಪಿಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ: ಆರ್ ಅಶೋಕ್

ಕಲಬುರಗಿ: ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಸಂಪೂರ್ಣ ಕುಸಿದು ಹೋಗಿದ್ದು,ಮುಂಬರುವ 40 ವಷ೯ಗಳ ಕಾಲ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಶನಿವಾರ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆಂದು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಇಡೀ ವಿಶ್ವವೇ ಮೆಚ್ಚುವ ಹಾಗೇ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಕೆಲಸ ಗಳನ್ನು ಮಾಡುತ್ತಿದ್ದು, ಅದೇ ರೀತಿ ರಾಜ್ಯದಲ್ಲಿ ಸಹ ಬೊಮ್ಮಾಯಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾಯ೯ಗಳು ನಡೆಯು ತ್ತಿವೆ ಎಂದರು.

ಕನಾ೯ಟಕದಲ್ಲಿ ಕಾಂಗ್ರೆಸ್ ಪಕ್ಷದ ಯೋಗ್ಯತೆಗೆ ತಕ್ಕ ನಾಯಕರಿಲ್ಲ. ಹುಡುಕಾಡಿದರೂ ಯಾವೊಬ್ಬ ನಾಯಕನಿಲ್ಲ. ಕಾಂಗ್ರೆಸ್ ಪಕ್ಷ ಮುಳುಗಿ ಹೋಗುವ ಹಡುಗಾಗಿದ್ದು, ಕಾಂಗ್ರೆಸ್ ಪಕ್ಷದ ಹಡುಗಿಗೆ ತುತು ಬಿದ್ದು ಹೋಗಿವೆ. ಡಿಕೆಶಿ, ಸಿದ್ದರಾಮಯ್ಯ ನಡುವೆ ಸಮರ ನಡೆಯುತ್ತಾನೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಕಸ ಗೂಡಿಸೋರು ಸಹ ಲಭ್ಯರಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಪದೇ ಪದೇ ಹಿಂದೂ ಕಾಯ೯ಕತ೯ರನ್ನು ಟಾಗೇ೯ಟ್ ಮಾಡುತ್ತಿರು ವುದರಿಂದಲೇ ಈ ರೀತಿ ಮೊಟ್ಟೆ ಎಸೆಯುವ ಸನ್ನೀವೇಶಗಳು ನಡೆಯುತ್ತಿವೆ. ಸಾವಕ೯ರ ಈ ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅವರು ಪೋಟೋ ಈಡೀ ದೇಶದ ಯಾವ ಮೂಲೆಯಲ್ಲಾದರೂ ಹಾಕಬಹುದು ಪ್ರಶ್ನೆ ಮಾಡಲು ಸಿದ್ದರಾ ಮಯ್ಯ ಯಾರು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸಂಸ್ಕೃತಿ ಗೂಂಡಾ ಸಂಸ್ಕೃತಿ ಆಗಿದೆ. ಸಾವಕ೯ರ ಬಗ್ಗೆ ಪ್ರಶ್ನೆ ಮಾಡುವ ಇವರು, ತುತು೯ ಪರಿಸ್ಥಿತಿ ಹೇರಿ,ಇಡೀ ದೇಶದ ಸ್ವಾತಂತ್ರವನ್ನೆ ಹರಣ ಮಾಡಿದ್ದಾರೆ. ಬಿಜೆಪಿ ಪಕ್ಷ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದು, ಮುಂಬರುವ ಚುನಾವಣೆಯನ್ನು ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಕನಾ೯ಟಕದಲ್ಲಿ ಸಿದ್ದರಾಮಯ್ಯ ಸ್ಪಧೆ೯ ಜಾಗವಿಲ್ಲ.

ಸಿದ್ದರಾಮಯ್ಯ ಅವರಿಗೆ ಕನಾ೯ಟಕ ರಾಜ್ಯದಲ್ಲಿ ಗೆಲ್ಲಲು ಯಾವ ಜಾಗವೂ ಉಳಿದಿಲ್ಲ. ಚಾಮುಂಡಿಯಲ್ಲಿ ಸೋಲು ಕಂಡರು. ಬಾದಾಮಿಯಲ್ಲಿ ಸ್ಥಳೀಯ ಜನರು ನಿಲ್ಲಬೇಡಿ ಎಂದು ಹೇಳುತ್ತಿದ್ದಾರೆ.ಹೀಗಾಗಿ ಅವರಿಗೆ ಸ್ಪರ್ಧೆ ಮಾಡಲು ರಾಜ್ಯದಲ್ಲಿ ಯಾವ ಜಾಗವೂ ಉಳಿದಿಲ್ಲ.

ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅನೇಕರು ಬಿಜೆಪಿ ಸಮಾವೇಶಗಳಲ್ಲಿ ಪಕ್ಷವನ್ನು ಸೇಫ೯ಡೆಗೊಳಲ್ಲಿದ್ದು,ಅತೀ ಸ್ಥಾನಗಳಿಂದ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ದರು.

ಸಿದ್ದರಾಮಯ್ಯ ಅವರ ಕೊಡುಗೆ ಜಿಲ್ಲೆಯಲ್ಲಿ ಇದೇ 26ರಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತಿರುವುದು ಅವರ ಸ್ವಹಿತಕ್ಕಾಗಿ ಮಾತ್ರ. ಆದರ ರಾಷ್ಟ್ರ ಹಿತಕ್ಕಾಗಿ ಅಲ್ಲ ಎಂದು ಹೇಳಿದರು.