Sunday, 13th October 2024

ಬಿಜೆಪಿ ಅಭ್ಯರ್ಥಿ ಸೋಲಿಗೆ ಅವರ ಹಿಂಬಾಲಕರೇ ಕಾರಣ

ಗುಬ್ಬಿ: ಬಿಜೆಪಿ ಅಭ್ಯರ್ಥಿ ಸೋಲಿಗೆ ಅವರ ಹಿಂಬಾಲಕರೇ ಕಾರಣ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿಜೆಪಿ ಮುಖಂಡ ಚಂದ್ರಶೇಖರ ಬಾಬು ತಿಳಿಸಿದರು.

 ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ದ ಪರಿಣಾಮ ಸೋಲಾಗಿದೆ ವರೆತು. ನಾವು ಪಕ್ಷ ವಿರೋಧಿ ಕೆಲಸವನ್ನು ಮಾಡುವುದಿಲ್ಲ ನಿಮ್ಮ ಹಿಂಬಾಲಕರು ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ಅವಮಾನಿಸಿದರು ಸಹ ತಲೆಕೆಡಿಸಿಕೊಳ್ಳದೆ. ಬಿಜೆಪಿಯನ್ನು ಗೆಲ್ಲಿಸಬೇಕೆಂಬ ಗುರಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಹಿಂಬಾಲಕರ ಮಾತುಗಳನ್ನು ಕೇಳಿ ಕೊಂಡು ನೈತಿಕತೆ ಇಲ್ಲದೆ ಇನ್ನೊಬ್ಬರ ಮೇಲೆ ದೂರುವುದು ಸರಿಯಲ್ಲ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎನ್‌ ಸಿ ಪ್ರಕಾಶ್ ಮಾತನಾಡಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಸೋಲಿಗೆ ಗ್ಯಾಸ್ ಬಾಬು, ಎನ್ ಸಿ ಪ್ರಕಾಶ್ ಮತ್ತು ಸಂಸದ ಜಿಎಸ್ ಬಸವರಾಜು ಕಾರಣ ಎಂದು ತಿರುಳಿಲ್ಲದ ಆರೋಪ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ, ಎಪಿಎಂಸಿ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಅಭ್ಯರ್ಥಿ ಗಳನ್ನು ಹಾಕುವ ಮೂಲಕ ಅಂದು ಬಂಡಾಯ ಅಭ್ಯರ್ಥಿಯಾಗಿ ಬಿಜೆಪಿಯ ಸೋಲಿಗೆ ಕಾರಣರಾಗಿದ್ದವರು ನೀವು ಇದೆಲ್ಲದರ ನಂತರ ಪಕ್ಷದಿಂದ ಉಚ್ಚಾಟಿಸಿರುವುದನ್ನು ರದ್ದು ಮಾಡಬೇಕೆಂದು ಕೇಳಿಕೊಂಡು ನಂತರ ಮತ್ತೆ ಪಕ್ಷಕ್ಕೆ ಬಂದು ಹಿಂಬಾಲಕರ ನಿಟ್ಟುಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ನಮ್ಮ ಮೇಲೆ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ದ್ವೇಷದ ರಾಜಕಾರಣವನ್ನು ನಿಲ್ಲಿಸಿ ಪಕ್ಷದ ಘನತೆ ಗೌರವ ಮತ್ತು ಕ್ಷೇತ್ರದ ಬೆಳವಣಿಗೆ ಬಗ್ಗೆ ಸಹಕರಿಸುವುದನ್ನು ತಮ್ಮ ಹಿಂಬಾಲಕರಿಗೆ ತಿಳಿಸಬೇಕು ಎಂದು ಕಿಡಿಕಾರಿದರು.