Friday, 20th September 2024

manjunath pandit: ಸದಸ್ಯತ್ವ ಅಭಿಯಾನ ಸಭೆಗೆ ಜಿಲ್ಲಾಧ್ಯಕ್ಷ ಗೈರು: ಮಂಜುನಾಥ ಪಂಡಿತ ಟಾಂಗ್

ಹಳಿಯಾಳ : ಸಾವಿರಾರು ಕಾರ್ಯಕರ್ತರನ್ನು ವಿರೋಧಿಸಿ ಸ್ವಪ್ರತಿಷ್ಠೆ ಹಾಗೂ ಅಹಂಕಾರದಿಂದ ಸದಸ್ಯತ್ವ ಅಭಿಯಾನ ಸಭೆ ಪ್ರವೇಶಿಸದೆ ಹೋದ ಜಿಲ್ಲಾಧ್ಯಕ್ಷ ಇವರಿಗೆ ಎಷ್ಟು ನೈತಿಕತೆ ಇದೆ ಎಂದು ಹಳಿಯಾಳದ ಬಿಜೆಪಿ ಕಾರ್ಯಕರ್ತರು ಅರಿತಿದ್ದಾರೆ ಎಂದು ಹಿರಿಯ ಮುಖಂಡ ಮಂಜುನಾಥ ಪಂಡಿತ ಟಾಂಗ್ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ನಾನು 1991 ರಿಂದ ದಿ.ಎಮ್ ಪಿ ಕರ್ಕಿ ಅವರ‌ ಲೋಕಸಭಾ ಚುನಾವಣೆಯಿಂದ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿದ್ದೇನೆ ಮತ್ತೆ ನಾನು ಸಂಘ ಪರಿವಾರದಿಂದ ರಾಜಕೀಯ ಪ್ರವೇಶ ಮಾಡಿ ವಿವಿಧ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ,

ಇವರು ಜನತಾ ಪರಿವಾರದಿಂದ ಬಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತು ಆಮೇಲೆ ಬಿಜೆಪಿ ಸೇರಿದ್ದಾರೆ. ನಾನು ಯಾವುದೇ ಹುದ್ದೆಯನ್ನು ಬಯಸದೆ 30 ವರ್ಷಗಳಿಂದ ಸ್ಥಳೀಯ ಎಲ್ಲಾ ಚುನಾವಣೆ ತನು ಮನ ಧನದಿಂದ ಶ್ರಮವಹಿಸಿ ಪಕ್ಷವನ್ನು ಅಧಿಕಾರ ತರಲು ಹಗಲು ಇರುಳು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ನಾನು ಪಕ್ಷದ ಕಾರ್ಯಕರ್ತನೆಂದು ಎಲ್ಲೂ ಹೇಳಲಿಲ್ಲ ಪಕ್ಷದ ಅಭಿಮಾನಿ ಹಾಗೂ ಈಗ ಮೋದಿ ಅಭಿಮಾನಿಯಾಗಿ ಕೆಲಸ ಮಾಡಿದ್ದೇನೆ.

ಬಿಜೆಪಿ ಒಂದು ಶಿಸ್ತಿನ ಪಕ್ಷ ಇಂತಹ ತತ್ವ ಸಿದ್ಧಾಂತವುಳ್ಳ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಏಜೆಂಟ್ ಎಂದು ಹೇಳಿದ ಗುರುಪ್ರಸಾದ ಹೆಗಡೆಯವರ ವಿರುದ್ಧ ಏನು ಕ್ರಮ ಕೈಗೊಳ್ಳದೆ ನನ್ನನ್ನು ಉಚ್ಛಾಟಿಸಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಮೋದಿಯವರು ದೇಶಾದ್ಯಂತ ಸದಸ್ಯತ್ವ ಅಭಿಯಾನ ಪ್ರಾರಂಭ ಮಾಡಿದ್ದಾರೆ ಅದೇ ದಿನ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಇವರು ಉಚ್ಛಾಟಿಸುವುದು ಇವರು ಅಯೋಗ್ಯ ಮತ್ತು ಅಸಮರ್ಥ ಜಿಲ್ಲಾಧ್ಯಕ್ಷರು ಎಂದು ಪರಿಗಣಿಸಬೇಕಾಗುತ್ತದೆ ಹೀಗಾಗಿ ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಕೂಡಲೇ ಇದರ ಬಗ್ಗೆ ಗಮನ ಹರಿಸಿ ಈ ಅಸಮರ್ಥ ಜಿಲ್ಲಾಧ್ಯಕ್ಷನನ್ನು ವೈಯಕ್ತಿಕ ಪ್ರತಿಷ್ಠೆಗಾಗಿ ಸಹಸ್ರಾರು ಕಾರ್ಯಕರ್ತರ ಭಾವನೆ ಗಳನ್ನು ದಕ್ಕೆ ಮಾಡಿ ನಾನು ಮಾಡಿದ ಕಾರ್ಯದರ್ಶಿ ನಾನು ಮಾಡಿದ ಪ್ರಧಾನ ಕಾರ್ಯದರ್ಶಿ ಎಂದು ತನ್ನ ಸ್ವಪ್ರತಿಷ್ಠೆಗೆ, ಸಾಮೂಹಿಕ ನಾಯಕತ್ವಕ್ಕೆ ವಿರುದ್ಧ ಮಾಡಿ ಸಭೆಯನ್ನು ಹಾದಿ ದಂಪಾಟ ಮಾಡಿದ್ದು ಜಿಲ್ಲಾಧ್ಯಕ್ಷರೆ ಹೊರತು ಯಾವ ನೈಜ ಕಾರ್ಯಕರ್ತರು ಅಲ್ಲ.

ಕಾರ್ಯಕ್ರಮವನ್ನು ಘಾಸಿಗೊಳಿಸಿದ ಗುರುಪ್ರಸಾದ್ ಹೆಗಡೆ ಇನ್ನಿತರ ಪದಾಧಿಕಾರಿಗಳ ಮೇಲೆ ಇವರು ಶಿಸ್ತು ಕ್ರಮ ಕೈಗೊಳ್ಳುವುದು ಬಿಟ್ಟು ತನ್ನ ಸ್ವಂತ ಪಡೆಯನ್ನು ತಯಾರು ಮಾಡಲು ಹೊರಟ ಈ ಜಿಲ್ಲಾಧ್ಯಕ್ಷ ನನ್ನು ತಕ್ಷಣ ಬದಲಿಸಿ ಸಾವಿರಾರು ಕಾರ್ಯಕರ್ತರನ್ನು ರಕ್ಷಿಸಿ ಗೌರವಿಸಬೇಕೆಂದು ನಾನು ರಾಜ್ಯ ಹಾಗೂ ರಾಷ್ಟ್ರೀಯ ವರಿಷ್ಠರಿಗೆ ಆಗ್ರಹಿಸುತ್ತೇನೆ.

ಅಲ್ಲದೇ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಕೊನೆಯ ಸ್ಥಾನಕ್ಕೆ ಇಳಿದು, ಪಕ್ಷದಲ್ಲಿದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಪ್ರಧಾನ ಕಾರ್ಯದರ್ಶಿಯನ್ನು ಸಹಸ್ರಾರು ಕಾರ್ಯಕರ್ತರ ಭಾವನೆಯನ್ನು ಅರಿಯದೆ ಅವರನ್ನು ರಕ್ಷಿಸುವುದು, ಅವರಿಗೋಸ್ಕರ ಸಹಸ್ರಾರು ನೈಜ ಮತ್ತು ಸ್ವಾಭಿಮಾನಿ ಕಾರ್ಯಕರ್ತ ಭಾವನೆಗಳಿಗೆ ಘಾಸಿ ಪಡಿಸುವುದು ಎಷ್ಟರಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿ ನಾನು ಯಾವಾಗಲೂ ಬಿಜೆಪಿ ಹಾಗೂ ಮೋದಿ ಅಭಿಮಾನಿಯಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.