Friday, 13th December 2024

ಬಿಜೆಪಿ ತೊರೆದ ಯಲ್ಲಾಪುರದ ಸಾವಿರಾರು ಕಾರ್ಯಕರ್ತರು

ಶಿರಸಿ: ಬಿಜೆಪಿ ಶಾಸಕರ ಪುತ್ರ ವಿವೇಕ ಹೆಬ್ಬಾರ್ ಸಾವಿರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿಯೇ ಇಂದು ಯಲ್ಲಾಪುರದ ಸಾವಿರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಎಪಿಎಂಸಿ ಅಡಕೆ ಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಉದ್ಯಮಿ ವಿವೇಕ ಹೆಬ್ಬಾರ್, ರಾಜ್ಯ ಉಪಾಧ್ಯಕ್ಷ ಐವಾನ್ ಡಿಸೋಜ, ಜಿಲ್ಲಾಧ್ಯಕ್ಷ ಸಾಯಿ ಗೌಂವ್ಕರ್, ಕೆಪಿಸಿಸಿಯ ವೆಂಕಟೇಶ್ ಹೆಗಡೆ ಹೊಸಬಾಳೆ, ಮಾಜಿ ಶಾಸಕ ವಿಎಸ್ ಪಾಡೀಲ್ ಪ್ರಕಾಶ್ ಹೆಗಡೆ ಸೇರಿದಂತೆ ಹಲವರು ಉಪಸ್ಥಿತ ರಿದ್ದರು. ಎನ್ ಕೆ ಭಟ್ ಸ್ವಾಗತಿಸಿದರು.