ಆಳಂದ: ಮಹಾರಾಷ್ಟ್ರದ ಕೆಲ ಪುಂಡರು, ರಾಜ್ಯ ಗಡಿ ಹಾಗೂ ಜನರ ತಂಟೆಗೆ ಬಂದರೆ ಯಾವುದೇ ಕಾರಣಕ್ಕೂ ಸುಮ್ಮನೆ ಇರುವು ದಿಲ್ಲ ಎಂದು ತಾಲೂಕು ಕಸಾಪ ನಿಕಟ ಪೂರ್ವ ಅದ್ಯಕ್ಷ ವಿಶ್ವನಾಥ ಭಕರೆ ಅವರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಕೆಲ ದಿನಗಳ ಹಿಂದೆ ಮಹಾ ರಾಷ್ಟ್ರದ ಪುಣೆ ಜಿಲ್ಲೆಯ ದೌಂಡ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ಸಗೆ ಮಸಿ ಬಳಿದಿರುವುದು ಇಂತಹ ಪುಂಡಾಟಿಕೆ ಖಂಡನೆ, ಆಳಂದವು ಕರ್ನಾಟಕದ ಗಡಿಭಾಗದಲ್ಲಿ ಇರುವುದರಿಂದ ಮಹಾರಾಷ್ಟ್ರ ಹಾಗೂ ಕರ್ನಾ ಟಕದ ಸಂಬಂಧ ಬಹಳ ಅನೂನ್ಯತೆ ಇದೆ, ಕೆಲ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಾ ನಡೆದಿದೆ. ಕರ್ನಾಟಕಕ್ಕೆ ಪ್ರವೇಶಿಸುವ ಮತ್ತು ವ್ಯವಹಾರಿಕ್ಕಾಗಿ ಬರಬೇಕಾದರೆ ಆಳಂದ ಮಾರ್ಗವಾಗಿ ಕಲಬುರಗಿ ಜಿಲ್ಲೆ ಪ್ರವೇಶಿಸಬೇಕಾಗುತ್ತದೆ.
ಧುದನಿ, ಅಕ್ಕಲಕೋಟ, ಉಮರ್ಗಾ, ಸೋಲಾಪೂರ, ಲಾತೂರ, ತುಳಜಾಪುರ ಹೆಚ್ಚಾಗಿ ಸಾರಿಗೆ ಸಂಪರ್ಕ ಇದ್ದು, ಇದೇ ರೀತಿ ರಾಜ್ಯಕ್ಕೆ ಅಪಮಾನ ಮಾಡುವ ಕೆಲಸಗಳು ಮುಂದೆ ವರೆಸಿದೆ ಆದರೆ ಈ ಮೇಲೆ ಹೇಳಲಾದ ಮಹಾರಾಷ್ಟ್ರ ತಾಲ್ಲೂಕು, ಜಿಲ್ಲೆ ಗಳಿಂದ ಬರುವ ವಾಹನಗಳನ್ನು ಜಿಲ್ಲೆಯಲ್ಲಿ ಪ್ರವೇಶ ಮಾಡದಂತೆ ತಡೆಗಟ್ಟಲಾಗುವುದು, ಅಲ್ಲಿಯ ಸರಕಾರ ಎಚ್ಚೆತ್ತುಗೊಂಡು ರಾಜ್ಯ ಗಡಿ ವಿವಾದ ತಡೆಗಟ್ಟಲು ಮುಂದಾಗದಿದ್ದರೆ ಗಡಿ ಭಾಗದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್.ಎಲ್.ಬೀದಿ, ಗುರುಪಾಟೀಲ್, ಪ್ರಮೋದ ಪಾಂಚಾಳ, ಮೋನಪ್ಪ ಸುತಾರ, ಡಾ. ವಿದ್ಯಾಸಾಗರ ಉಪಸ್ಥಿತರಿದ್ದರು.