Saturday, 12th October 2024

Bribe: 15 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಸೆರೆ

ಹಾಜರಾತಿ ನೀಡಲು ಲಂಚಕ್ಕೆ ಬೇಡಿಕೆ

ಲೋಕಾಯುಕ್ತ ಬಲೆಗೆ ಬಿದ್ದ ವಾರ್ಡನ್

ಕಲಬುರಗಿ: ಅಡುಗೆ ಸಹಾಯಕರ ಹಾಜರಾತಿ ನೀಡಲು ಲಂಚ(Bribe)ಕ್ಕೆ ಬೇಡಿಕೆ ಇಟ್ಟು, 15 ಸಾವಿರ ಪಡೆಯುತ್ತಿದ್ದ ವೇಳೆ ವಸತಿ ನಿಲಯದ ವಾರ್ಡನ್ ಒಬ್ಬರು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷ ಬಿ.ಕೆ ಉಮೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಗುಲಬರ್ಗಾ ವಿವಿ(Gulbarga University) ಯ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಸ್ನಾತಕೋತರ ಬಾಲಕರ ವಸತಿ ನಿಲಯದ ವಾರ್ಡನ್ ಶಿವಶರಣಪ್ಪ (warden Shivasharanappa) ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Lokayukta Raid: ಹಾಜರಾತಿ ನೀಡಲು ಲಂಚಕ್ಕೆ ಬೇಡಿಕೆ, ಲೋಕಾಯುಕ್ತ ಬಲೆಗೆ ಬಿದ್ದ ವಾರ್ಡನ್

ಗ್ರೂಪ್ ಡಿ ನೌಕರ ಅಡುಗೆ ಸಹಾಯಕ ಶ್ರೀಮಂತ ಎನ್ನುವರ ದೂರಿನನ್ವಯ ದಾಳಿ ನಡೆದಿದ್ದು, ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ಅಡುಗೆ ಸಹಾಯಕರಿಗೆ ಹಾಜರಾತಿ ನೀಡಲು ಪ್ರತಿ ತಿಂಗಳು ಗ್ರೂಪ್ ‘ಡಿ’ಯ ಎಲ್ಲಾ ಅಡುಗೆ ಸಹಾಯ ಕರು 20.000 ರುಪಾಯಿ ಹಣ ನೀಡಬೇಕು ಎಂದು ತಾಕೀತು ಮಾಡಿದರು. ಹಣ ನೀಡದಿದ್ದರೆ ಹಾಜರಾತಿ ಕೊಡುವು ದಿಲ್ಲ. ಸಂಬಳ ಮಾಡಿಸುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು.

ಇದರಿಂದ ಬೇಸತ್ತ ಶ್ರೀಮಂತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ಗುರುವಾರ 15,000 ರುಪಾಯಿ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಡಿವೈಎಸ್ಪಿ ಗೀತಾ ಬೆನಾಳ ತಂಡ ದಿಂದ ತನಿಖೆ ನಡೆಯುತ್ತಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಡಿವೈಎಸ್ಪಿ ಗೀತಾ ಬೆನಾಳ, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಬಸವರಾಜ್, ಪ್ರದೀಪ್, ಪೈ ಮುದ್ದಿನ್, ರೇಣುಕಮ್ಮ, ಪೌಡಪ್ಪ, ಸಂತೋಷಮ್ಮ, ಗುಂಡಪ್ಪ ಸೇರಿ ಸಿಬ್ಬಂದಿ ಇದ್ದರು.