ಧಾರವಾಡ: ‘ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅತ್ಯಾಚಾರ ಮಾಡುವ ಆರೋಪಿಗಳ ಜನನಾಂಗ ಕತ್ತರಿ ಸುವ ಕಾನೂನು ಜಾರಿಯಾಗಬೇಕು’ ಎಂದು ಉಳವಿ ಕೂಡಲಸಂಗಮ ಪೀಠದ ಬಸವಪ್ರಕಾಶ ಸ್ವಾಮೀಜಿ ಧಾರವಾಡದಲ್ಲಿ ಹೇಳಿ ದ್ದಾರೆ.
‘ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಯುವತಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಆದರೆ, ಈವರೆಗೆ ಸೌಜನ್ಯಕ್ಕೂ ಯಾರೊಬ್ಬ ಜನಪ್ರತಿನಿಧಿ ಸಾಂತ್ವನದ ಮಾತು ಹೇಳಲು ಹೋಗಿಲ್ಲ. ಇತ್ತ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನೂ ನೀಡಲು ಸರ್ಕಾರಗಳು ಮುಂದಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸರ್ಕಾರಗಳು ಅತ್ಯಾಚಾರ ಮಾಡುವ ಆರೋಪಿಗಳಿಗೆ ಜನನಾಂಗ ಕತ್ತರಿಸುವ ಶಿಕ್ಷೆ ಜಾರಿಗೆ ತಂದರೆ, ಇದರಿಂದ ಭಯಗೊಂಡು ಮುಂದೆ ಇಂಥ ಪ್ರಕರಣಗಳು ನಿಯಂತ್ರಣಕ್ಕೆ ಬರಲಿದೆ. ಅಲ್ಲದೇ, ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಮೈತುಂಬ ಬಟ್ಟೆ ಧರಿಸಬೇಕು. ತುಂಡು ಬಟ್ಟೆಗಳನ್ನು ಧರಿಸುವುದರಿಂದ ಕಾಮುಕರಿಗೆ ಇನ್ನಷ್ಟು ಪ್ರಚೋದನೆ ನೀಡಿದಂತಾಗುತ್ತದೆ. ರಣಭೂಮಿಯಲ್ಲೂ ತಲೆ ಮೇಲೆ ಸೆರಗು ಹೊದ್ದುಕೊಂಡಿದ್ದ ಚೆನ್ನಮ್ಮ, ಮಲ್ಲಮ್ಮ ಅವರನ್ನೇ ಮಾದರಿ ಯಾಗಿಸಿಕೊಂಡು ಇಂದಿನ ಮಹಿಳೆಯರು ಉಡುಪುಗಳನ್ನು ತೊಡಬೇಕು’ ಎಂದರು.