Wednesday, 18th September 2024

ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ನಿಂದ 4ಜಿ ಸೇವೆ ಆರಂಭ

ತುಮಕೂರು: ಟಾಟಾ ಕಂಪನಿಯ ಉಪಕರಣಗಳೊಂದಿಗೆ ಬಿಎಸ್‌ಎನ್‌ಎಲ್ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 4ಜಿ ಸೇವೆ ಪ್ರಾರಂಭಿಸಿದೆ.

ಪರಿಣಾಮ, ಬಿಎಸ್‌ಎನ್‌ಎಲ್‌ನಿಂದ ಬೇರೆ ಕಡೆಗೆ ಹೋಗಿದ್ದ ಗ್ರಾಹಕರು ಮರಳಿ ಬಿಎಸ್‌ಎನ್‌ಎಲ್‌ನತ್ತ ವಾಪಸ್ ಬರುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ಎನ್‌ಎಲ್ ಸೀನಿಯರ್ ಜನರಲ್ ಮ್ಯಾನೇಜರ್ ದಿಗಂಬರ್ ಕುಮಾರ್, ಈವರೆಗೆ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 2ಜಿ ಮತ್ತು 3ಜಿ ಸೇವೆಗಳನ್ನು ಮಾತ್ರ ಒದಗಿಸಲಾಗುತ್ತಿತ್ತು. ಇದೀಗ 4ಜಿ ಸೇವೆ ಒದಗಿಸಲಾಗುತ್ತಿದೆ ಎಂದರು.

ತುಮಕೂರು ಮತ್ತು ಹಾಸನ ವ್ಯಾಪಾರ ವಹಿವಾಟಿನ ವಲಯದಲ್ಲಿ ಜುಲೈನಿಂದಲೇ ಈ ಸೇವೆ ಆರಂಭಗೊಂಡಿದ್ದು, ಪ್ರಸ್ತುತ ತುಮಕೂರಿನಲ್ಲಿ 50 ಮತ್ತು ಹಾಸನದಲ್ಲಿ 20 ಸೈಟ್‌ಗಳು 4ಜಿ ಸೇವೆಯಲ್ಲಿ ಕಾರ್ಯಾರಂಭಗೊAಡಿವೆ. ಜುಲೈ ಅಂತ್ಯದ ವೇಳೆಗೆ 100 ಮತ್ತು 50 ಕ್ರಮವಾಗಿ ತುಮಕೂರು ಮತ್ತು ಹಾಸನದಲ್ಲಿ ಇರುತ್ತವೆ. ಅಕ್ಟೋಬರ್ ವೇಳೆಗೆ ತುಮಕೂರಿನ 286 ಮತ್ತು ಹಾಸನದಲ್ಲಿ 194 ಅಸ್ತಿತ್ವದಲ್ಲಿರುವ ಮತ್ತು ಹೊಸ ಸೈಟ್‌ಗಳು 4ಜಿಗೆ ಹೊಂದಿಕೆ ಯಾಗಲಿವೆ ಎಂಬ ಮಾಹಿತಿ ನೀಡಿದರು.

ಈಗಾಗಲೇ ಬಿಎಸ್‌ಎನ್‌ಎಲ್ ಸಿಮ್‌ಗಳನ್ನು ಹೊಂದಿ ಕಾರಣಾಂತರಗಳಿAದ ಸ್ಥಗಿತಗೊಳಿಸಿರುವ ಗ್ರಾಹಕರು, ಉಪಯೋಗಿಸದೆ ಇರುವ ಗ್ರಾಹಕರು ಕೂಡಲೇ ಬಿಎಸ್‌ಎನ್‌ಎಲ್ ಸೇವೆ ಪಡೆಯಬಹುದಾಗಿದೆ. 4ಜಿ ಸಿಮ್ ಅನ್ನು ಗ್ರಾಹಕರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಹೊಸ ಗ್ರಾಹಕರು ಹತ್ತಿರದ ಸಿಎಸ್‌ಸಿ ಅಥವಾ ಚಿಲ್ಲರೆ ವ್ಯಾಪಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

ಡಿಸೆ0ಬರ್ 24ರ ವೇಳೆಗೆ ಎಲ್ಲ 4ಜಿ ಸೈಟ್‌ಗಳನ್ನು ಎರಡೂ ಜಿಲ್ಲೆಗಳಲ್ಲಿ 5ಜಿ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಅದು ಸಾಫ್ಟ್ವೇರ್ ಆಧಾರಿತ ವಾಗಿದೆ. ಇದೇ ಮೊದಲ ಬಾರಿಗೆ ಬಿಎಸ್‌ಎನ್‌ಎಲ್ 4ಜಿಗೆ ಮೇಕಿನ್ ಇಂಡಿಯಾ ಉಪಕರಣಗಳನ್ನು ಮಾತ್ರ ಬಳಸುತ್ತಿದೆ. ಇದಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಹಾಯ ಮಾಡುತ್ತಿದೆ ಎಂದರು.

ಪ್ರಸ್ತುತ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರತಿ ತಿಂಗಳು 5 ಸಾವಿರ ಹೊಸ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರುತ್ತಿದ್ದಾರೆ. ಇತರೆ ಅಪರೇಟರ್‌ಗಳು ಸುಂಕವನ್ನು ಶೇ.25 ರಿಂದ 30ರಷ್ಟು ಹೆಚ್ಚಿಸಿದ್ದರೂ ಸಹ ಬಿಎಸ್‌ಎನ್‌ಎಲ್ ಮಾತ್ರ ಸುಂಕವನ್ನು ಹೆಚ್ಚಿಸಿಲ್ಲ. ಮುಂದೆಯೂ ಹೆಚ್ಚಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದವರು ಸ್ಪಷ್ಟಪಡಿಸಿದರು.

ತುಮಕೂರು ಮತ್ತು ಹಾಸನ ಜಿಲ್ಲೆಯ ನಿವಾಸಿಗಳು, ಸಂಸ್ಥೆಗಳು, ಕಂಪನಿಗಳು ಸ್ವದೇಶಿ, ಮೇಡ್ ಇನ್ ಇಂಡಿಯಾ 4ಜಿ, ಕೈಗೆಟುವ ದರದಲ್ಲಿ ಒದಗಿಸು ತ್ತಿರುವ ಬಿಎಸ್‌ಎನ್‌ಎಲ್‌ನ ಇತರೆ ಸೇವೆಗಳನ್ನು ಬಳಸಿಕೊಳ್ಳಬಹುದು ಎಂದು ವಿವರಿಸಿದರು. ದಿಗಂಬರ್ ಕುಮಾರ್ ಅವರ ಇಂಗ್ಲಿಷ್ ಮಾಹಿತಿಯನ್ನು ಇಲ್ಲಿನ ಎಜಿಎಂ ಮಹೇಶ್ ಕನ್ನಡಕ್ಕೆ ಅನುವಾದಿಸಿದರು.

Leave a Reply

Your email address will not be published. Required fields are marked *