ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಬೇಕು. 30-40 ವರ್ಷ ಯಡಿಯೂರಪ್ಪ ಪಕ್ಷಕ್ಕೆ ದುಡಿದಿದ್ದಾರೆ ಎಂದರು.
ನೀವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ ವಿಜಯೇಂದ್ರ ಪ್ರತಿಕ್ರಿಯೆ, ನನಗೆ ಇಡೀ ಕರ್ನಾಟಕದ ಮೇಲೆ ಒಲವಿದೆ. ಹೀಗಾಗಿ ಬಿಜೆಪಿ ನನಗೆ ನನ್ನ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ ಎಂದಿದ್ದಾರೆ.
ಕಾಂಗ್ರೆಸ್ ನ ಕಿತ್ತಾಟ ಬಿಜೆಪಿಗೆ ಒಳ್ಳೆಯದೆ. ಈ ಕಿತ್ತಾಟದ ಲಾಭ ಮಾಡಿಕೊಳ್ಳಲು ಬಿಜೆಪಿ ಇಷ್ಟ ಪಡುವುದಿಲ್ಲ. ನಾವು ಪಕ್ಷದ ಸಿದ್ದಾಂತ, ಅಭಿವೃದ್ದಿಯಿಂದ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಖಂಡಿತವಾಗಿಯೂ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.