Thursday, 19th September 2024

ದೇಶದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಬೇಕಾಗಿದೆ: ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ

ಹರಪನಹಳ್ಳಿ: ದೇಶದಲ್ಲಿ ಇನ್ನೂ ಕೂಡ ಜಾತಿ ವ್ಯವಸ್ಥೆ ಹೋಗಿಲ್ಲ. ಈ ಜಾತಿ ವ್ಯವಸ್ಥೆ ಹೋಗಲಾಡಿಸಬೇಕಾದರೆ ಮೊದಲು ನಾವು ಮನುಷ್ಯರಾಗಿ ಬಳಬೇಕು ನಂತರ ನ್ಯಾಯಾ ಮತ್ತು ಧರ್ಮದ ಆದಿಯಲ್ಲಿ ನಡೆದಾಗ ಮಾತ್ರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವು ದಕ್ಕೆ ಸಾಧ್ಯವಾಗುತ್ತದೆ. ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಬಳಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರವರು ದೇಶಕ್ಕೆ ಸ್ವಾತಂತ್ರö್ಯ ಪಡೆಯಲು ದೇಶದ ಪ್ರತಿಯೊಂದು ತಾಲೂಕು ಜಿಲ್ಲೆಗಳಿಗೆ ಕಾಲು ನಡಿಗೆಯಿಂದ ದೇಶದ ಸ್ವಾತಂತ್ರ‍್ಯಕ್ಕಾಗಿ ಜಾಗೃತಿ ಮೂಡಿಸಿ ಬ್ರಿಟಿಷರಿಂದ ಆಗಸ್ಟ್ ೧೫ , ೧೯೪೭ ರ ಮಧ್ಯ ರಾತ್ರಿ ೧೨ ಗಂಟೆಗೆ ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟಿದ್ದಾರೆ ಎAದರು.

ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ , ಸಂಗೋಳ್ಳಿ ರಾಯಣ್ಣ , ರಂತಹ ಅನೇಕ ಮಹಾನೀಯರು ತಮ್ಮ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟಿದ್ದಾರೆ.

ಭಗತ್ ಸಿಂಗ್ ರವರು ೧೯ನೇ ವಯಸ್ಸಿನಲ್ಲಿ ಬ್ರೀಟಿಷ್ ಸೆರೆಮನೆ ವಾಸದಲ್ಲಿದ್ದಾಗ ೨೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಅಭ್ಯಾಸ ಮಾಡಿ, ದೇಶದ ಕ್ರಾಂತಿಕಾರಿ ನಾಯಕರಾಗಿದ್ದರು . ಮಹಾತ್ಮ ಗಾಂಧಿಜೀ ರವರ ಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ಜಾನ್ಸಿರಾಣಿ ಲಕ್ಷ್ಮಿಬಾಯಿ ರವರು ಬ್ರಿಟಿಷ್ರು ಜಾರಿಮಾಡಿದ ದತ್ತುಮಕ್ಕಳಿಗೆ ಹಕ್ಕು ಇಲ್ಲ ಎಂಬ ನೀತಿಯ ವಿರುದ್ದ ಹೋರಾಡಿ ದೇಶದ ಹೆಣ್ಣುಮಕ್ಕಳಿಗಾಗಿ ಅನೇಕ ಹೋರಾಟಮಾಡಿದ್ದಾರೆ ಎಂದರು.

ದೇಶಕ್ಕಾಗಿ ಹೋರಾಡಿದ ಮಹನೀಯರು ಒಂದು ಕಡೆಯಾದರೆ ದೇಶದಲ್ಲಿ ಸಮಾನತೆಯನ್ನು ಸಾರಿ ದೇಶದ ಜನರಿಗಾಗಿ ಸಂವಿಧಾನ ರಚಿದ ಮಹಾನ್ ನಾಯಕ ಡಾ:ಬಿ.ಆರ್.ಅಂಬೇಡ್ಕರ್‌ರವರ ಅನುಯಾಯಿಗಳಾಗಿ ನಾವುಗಳು ಬದುಕಬೇಕಾಗಿದೆ ಎಂದುರು.

ವಕೀಲರ ಸಂಘದ ಅಧ್ಯಕ್ಷ ಮತ್ತಿಹಳ್ಳಿ ಅಜ್ಜಣ್ಣ ಮಾತನಾಡಿದರು. ಈ ಸಂದರ್ಭಗಳಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಫಕ್ಕೀರವ್ವ ಕೆಳಗೇರಿ. ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಹಿರಿಯ ವಕೀಲರಾದ, ಬಿ.ಕೆ.ಕೃಷ್ಣ ಮೂರ್ತಿ, ಕೆ.ಚಂದ್ರಗೌಡ, ಬಿ.ರೇವನಗೌಡ, ಎಸ್.ಎಂ.ರುದ್ರಮನಿ ಸ್ವಾಮಿ, ಬಿ.ಗೋಣಿಬಸಪ್ಪ, ವೀರಣ್ಣ, ಕೆ.ಎಂ.ಚ0ದ್ರಮೌಳಿ, ರಾಮ್ ಭಟ್,ಎಂ.ಎಸ್. ಮಂಜುನಾಥ್, ಕೆ. ಪ್ರಕಾಶ್ ಬಿ. ಹಾಲೇಶ್, ಬಸವನಗೌಡ, ವಾಮದೇವ,ಸೇರಿದಂತೆ ಅನೇಕ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಬಾಗವಹಿಸಿದ್ದರು.

Leave a Reply

Your email address will not be published. Required fields are marked *