Friday, 13th December 2024

ಮಸ್ಕಿ: ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ

ಮಸ್ಕಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಬೆಟ್ಟದಲ್ಲಿ ಬುಧವಾರ ಚಿರತೆಯೊಂದು ಪ್ರತ್ಯಕ್ಷವಾಗಿದೆ.

ಬೆಳಗ್ಗೆ ೧೧ಕ್ಕೆ ಪರಾಪೂರ ರಸ್ತೆಯಿಂದ ಬಯಲು ಆಚಿಜನೇಯ ದೇವಸ್ಥಾನಕ್ಕೆ ತೆರಳುವ ಮಜ್ಜಿಗೆ ಗುಂಡಿನ ಹತ್ತಿರ ಚಿರತೆ ಪ್ರತ್ಯಕ್ಷ ವಾಗಿದೆ. ದನ ಹಾಗೂ ಕುರಿ ಮೇಯಿಸಲು ಹೋದ ಕೆಲವು ಯುವಕರು ಚಿರತೆ ಕಂಡು ಗಾಬರಿಯಿಂದ ಓಡಿ ಹೋಗಿದ್ದಾರೆ. ಕುರಿಯೊಂದನ್ನು ಚಿರತೆ ಎಳೆದುಕೊಂಡು ಹೋಗಿದೆ.

ಸುದ್ದಿ ತಿಳಿಯುತ್ತಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಚಿರತೆ ಬೇಟೆಗಾಗಿ ಯುವಕರು ಬಡಿಗೆ ಹಿಡಿದುಕೊಂಡು ಗುಡ್ಡ ಸುತ್ತಾಡಿ ಹುಡುಕಿದ್ದಾರೆ.

ಸ್ಥಳೀಯ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಬಸವೇಶ್ವರ ನಗರ ಸಮೀಪದ ಈ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.