Saturday, 12th October 2024

ಡಿ.೧ರಿಂದ ವಿಶೇಷಚೇತನರ ರಾಷ್ಟ್ರೀಯ  ಚೆಸ್ ಚಾಂಪಿಯನ್‌ಷಿಪ್

ತುಮಕೂರು : ನ್ಯೂ ತುಮಕೂರು ಡಿಸ್ಟ್ರಿಕ್ಟ್‌ ಚೆಸ್ ಅಸೋಸಿಯೇಷನ್ ಹಾಗೂ ಎಂ.ಎಂ. ಚೆಸ್ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ೩ನೇ ಅಖಿಲ ಭಾರತ ವಿಶೇಷಚೇತನರ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಷಿಪ್ ಪಂದ್ಯಾವಳಿಯನ್ನು ಡಿ.೧ ರಿಂದ ೪ ರವರೆಗೆ ನಗರದ ಶಿರಾ ರಸ್ತೆಯ ಶ್ರೀದೇವಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.
ರಾಷ್ಟ್ರೀಯ  ಮಟ್ಟದ ಚೆಸ್ ಫೆಡರೇಷನ್ ಆಫ್ ಫಿಜಿಕಲಿ ಡಿಸೇಬಲ್ಡ್(ಸಿಎಫ್‌ಪಿಡಿ) ಸಂಸ್ಥೆ ಕರ್ನಾಟಕ ರಾಜ್ಯಕ್ಕೆ ಪ್ರಥಮ ಬಾರಿಗೆ ವಿಶೇಷಚೇತನರ ಚೆಸ್ ಚಾಂಪಿಯನ್‌ಷಿಪ್ ಆಯೋ ಜನೆಗೆ ಅವಕಾಶ ಕಲ್ಪಿಸಿದ್ದು, ತುಮಕೂರಿಗೆ ಆತಿಥ್ಯ ವಹಿಸುವ ಅವಕಾಶ ದೊರೆತಿರುವುದು ಇಡೀ ಜಿಲ್ಲೆಗೆ ಹೆಮ್ಮೆತರುವ ವಿಷಯ.
ರಾಷ್ಟ್ರದ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಶೇ.೫೦ಕ್ಕೂ ಮೇಲ್ಪಟ್ಟು ವೈಕ್ಯಲತೆಯುಳ್ಳ ಸುಮಾರು ೧೫೦ ಮಂದಿ ವಿಶೇಷಚೇತನ ಚೆಸ್ ಆಟಗಾರರು ಆಗಮಿಸು ತ್ತಿದ್ದು, ಇಲ್ಲಿ ವಿಜೇತರಾದ ವಿಶೇಷಚೇತನ ಕ್ರೀಡಾಪಟುಗಳು ಕಾಮನ್‌ವೆಲ್ತ್ , ಒಲಂಪಿ ಯಾಡ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಾರೆ ಎಂದು ಪಂದ್ಯಾವಳಿ ಆಯೋಜಕರಾದ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ತಿಳಿಸಿದ್ದಾರೆ.
ಉದ್ಘಾಟನೆ: ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಡಿ.೧ರಂದು ಬೆಳಿಗ್ಗೆ ೧೦ಕ್ಕೆ ನಡೆಯುವ ಪಂದ್ಯಾವಳಿ ಉದ್ಘಾ ಟನೆಯ ಸಾನಿಧ್ಯವನ್ನು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ವಹಿಸಲಿದ್ದು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಪ್ಯಾರಾ ಅಥ್ಲೆಟ್ ಕೆ.ವೈ.ವೆಂಕಟೇಶ್, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪ್ರಜಾಪ್ರಗತಿ ಪ್ರಗತಿಟಿವಿ ಸಂಪಾದಕ ಎಸ್.ನಾಗಣ್ಣ, ಟೂಡಾ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಉದ್ಯಮಿ ಅರುಣ್‌ಕುಮಾರ್ ಭಾಗವಹಿಸುವರು. ಅಧ್ಯಕ್ಷತೆಯನ್ನು ಮಾಜಿ ಎಂಎಲ್ಸಿ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸುವರು.
೪ರಂದು ಸಮಾರೋಪ: ಡಿ.೪ರಂದು ಸಂಜೆ ೪.೩೦ಕ್ಕೆ ನಡೆಯುವ ಬಹುಮಾನ ವಿತರಣೆ, ಸಮಾರೋಪ ಸಮಾರಂಭವನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಸಿಎಫ್‌ಪಿಡಿ ಛರ‍್ಮನ್ ಐ.ಎಂ.ಶಶಿಕಾಂತ್ ಕುತ್ವಾಲ್, ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಿ.ಪಿ.ಅನಂತ್ ಭಾಗವಹಿಸುವರು. ಅಧ್ಯಕ್ಷತೆಯನ್ನು ಮಾಜಿ ಎಂಎಲ್ಸಿ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸುವರು ಎಂದು ಎನ್‌ಟಿಡಿಸಿಎ ಪದಾಧಿಕಾರಿ ಗಳು, ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.