Saturday, 14th December 2024

Pthotgraph: Chickballapur News: ಛಾಯಾಗ್ರಾಹಕರು ಇಂದಿನ ಸಮಾಜದ ಪ್ರತಿಬಿಂಬ; ರಾಜ್ಯ ನಿರ್ದೇಶಕ ಬೀಡಿಕೆರೆ ರವಿಕುಮಾರ್


ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಪೋಸ್ಟರ್ ಬಿಡುಗಡೆ ಮಾಡಿ ಹೇಳಿಕೆ

ಶಿಡ್ಲಘಟ್ಟ : ಛಾಯಾಗ್ರಾಹಕರು ಇಂದಿನ ಸಮಾಜದ ಪ್ರತಿಬಿಂಬವಾಗಿ ಕಾಣುತ್ತಾರೆ. ಎಲ್ಲಾ ಛಾಯಾಗ್ರಾಹಕರು ಒಗ್ಗಟ್ಟು ಇಟ್ಟುಕೊಂಡು ಸಂಘಟಿತರಾದರೆ ಸಂಘಕ್ಕೆ ಇನ್ನೂ ಹೆಚ್ಚಿನ ಬಲ ಬರುತ್ತದೆ ಎಂದು ರಾಜ್ಯ ಛಾಯಾ ಗ್ರಾಹಕ ಸಂಘದ ರಾಜ್ಯ ನಿರ್ದೇಶಕ ಬೀಡಿಕೆರೆ ರವಿಕುಮಾರ್ ಹೇಳಿದರು.

ನಗರದ ವೇಣುಗೋಪಾಲ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಕರ್ನಾಟಕ ಛಾಯಾಗ್ರಕರ ಸಂಘದ ತಾಲ್ಲೂಕು ಘಟಕದ ಸಭೆಯಲ್ಲಿ ಮಾತನಾಡಿದರು.

ಛಾಯಾಗ್ರಾಹಕರೆಲ್ಲರೂ ಅಸಂಘಟಿತರಾಗಿರುವುದರಿಂದ ಸರ್ಕಾರಕ್ಕೆ ನಮ್ಮ ಕೂಗು ಕೇಳಿಸಬೇಕೆಂದರೆ ತಾಲ್ಲೂಕಿ ನಲ್ಲಿ ಎಲ್ಲರೂ ಸಂಘಟಿತರಾಗಬೇಕು. ಇಡೀ ರಾಜ್ಯದಲ್ಲಿ ಛಾಯಾಗ್ರಾಹಕರ ಸಂಘ ಬೆಳೆಸಲು ಪ್ರವಾಸ ಮಾಡು ತ್ತಿದ್ದೇವೆ. ಪ್ರತಿಯೊಬ್ಬ ಛಾಯಾಗ್ರಾಹಕ ಸಂಘಕ್ಕೆ ಸದಸ್ಯನಾದರೆ ಮುಂದಿನ ದಿನಗಳಲ್ಲಿ ಶಕ್ತಿ ಬರುತ್ತದೆ. ಇದರಿಂದಾಗಿ ಹಿರಿಯ ಛಾಯಾಗ್ರಾಹಕರಿಗೆ ವಿಶೇಷ ಗೌರವ ಕೊಡುವ ಮತ್ತು ಹೊಸಬರಿಗೆ ಅವಕಾಶ ಕಲ್ಪಿಸಿಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಹಿರಿಯ ಛಾಯಾಗ್ರಹಾಕರದ ರೂಪಸಿ ರಮೇಶ್ ಮಾತನಾಡಿ ಛಾಯಾಚಿತ್ರಗಳ ಮೂಲಕ ಹಿಡಿದಿಡುವುದು ಛಾಯಾ ಗ್ರಾಹಕ ವೃತ್ತಿಯ ಬಹಳ ವಿಶೇಷತೆ ಆಗಿದೆ. ಇತ್ತೀಚಿನ ದಿನಮಾನಗಳಲ್ಲಿ ಛಾಯಾಗ್ರಾಹಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಛಾಯಾಗ್ರಾಹಕ ವೃತ್ತಿಯ ಪಾವಿತ್ರ‍್ಯತೆ ಕಾಪಾಡಿಕೊಂಡು ಬರುತ್ತಿ ರುವ ಛಾಯಾಗ್ರಾಹಕರ ಸೇವೆ ಈ ಸಮಾಜದಲ್ಲಿ ಅಮೋಘವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ನಿರ್ದೇಶಕರಾದ ಗಿರೀಶ್ ಆರಾಧ್ಯ,ರಾಜ್ಯ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಸೀತಾರಾಮ ರೆಡ್ಡಿ,ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಮೇಘನಾ ಶ್ರೀನಿವಾಸ್, ವೆಂಕಟೇಶ್, ಲಕ್ಷ್ಮೀ ಸ್ಟುಡಿಯೋ ಮಂಜುನಾಥ್, ಬಿಕೆಆರ್ ಶ್ರೀನಿವಾಸ್, ವೆಂಕಟರೆಡ್ಡಿ, ಸುರೇಶ್, ಮಾನಸ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಛಾಯಾಗ್ರಹಕರು ಭಾಗವಹಿಸಿದ್ದರು.

*

“ರಾಜ್ಯದ ಎಲ್ಲಾ ಹಾಗೂ ತಾಲ್ಲೂಕು ಸಂಘಗಳ ಸಹಯೋಗದಲ್ಲಿ ಇದೆ. ಸೆಪ್ಟಂಬರ್ ೨೦ ರಿಂದ ೨೨ ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಜೆ ‘ಇಮೇಜ್ ನಮ್ಮ ಇಮೇಜ್’ ಎಂಬ ೧೦ನೇ ಅಂತರಾ ಷ್ಟ್ರೀಯ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ದಕ್ಷಿಣ ಭಾರತದ ಅತಿ ದೊಡ್ಡ ವಸ್ತು ಪ್ರದರ್ಶನ ಇದಾಗಿದೆ. ರಾಜ್ಯಮಟ್ಟದ ಬೃಹತ್ ಸಮಾವೇಶ ತಂತ್ರಜ್ಞಾನದ ಕಾರ್ಯಗಾರ ಹೀಗೆ ಹಲಗೂ ಕಾರ್ಯಕ್ರಮಗಳು ಇದರಲ್ಲಿ ಒಳಗೊಂಡಿದೆ. ತಾಲ್ಲೂಕಿನ ಎಲ್ಲಾ ಸದಸ್ಯರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.”

– ಬೀಡಿಕೆರೆ ರವಿಕುಮಾರ್  ಕೆ.ಪಿ.ಎ ರಾಜ್ಯ ನಿರ್ದೇಶಕ

ಇದನ್ನೂ ಓದಿ: Star Fashion: ಅಮೆರಿಕದಲ್ಲಿ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ ಹೈ ಸ್ಟ್ರೀಟ್‌ ಫ್ಯಾಷನ್‌!