Wednesday, 11th December 2024

ಚಿಕ್ಕಬಳ್ಳಾಪುರ ಉತ್ಸವ ಅಲ್ಲ, ವ್ಯಕ್ತಿಯ ವೈಭವೀಕರಣ : ಡಾ.ಎ.ಸಿ.ಸುಧಾಕರ್ ನೇರ ಆರೋಪ

ಹುಲಿ ಕಾಡಲ್ಲಿದ್ದರೂ ಹುಲಿಯೇ ಬೋನಲ್ಲಿದ್ದರೂ ಹುಲಿಯೇ
ಚಿಕ್ಕಬಳ್ಳಾಪುರ ಅಭಿವೃದ್ಧಿ ಬಗ್ಗೆ ನ್ಯಾಯಾಧೀಶರೇ ಛೀಮಾರಿ ಹಾಕಿದ್ದಾರೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಅಭಿವೃದ್ಧಿ ಬಗ್ಗೆ ಬೀಗುವ ಸಚಿವ ಸುಧಾಕರ್ ಅವರಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಮೂರ್ತಿಗಳೇ ಬಂದು ಮಂಗಳಾರತಿ ಮಾಡಿದ್ದಾರೆ.ನಾನು ಹುಲಿ ಹೊಟ್ಟೆಯಲ್ಲಿ ಹುಟ್ಟಿದವನು ರಾಜಕೀಯದಲ್ಲಿ ಸೋಲು ಗೆಲುವು ಸಹಜ,ಹುಲಿ ಕಾಡಲಿದ್ದರೂ ಬೋನಲ್ಲಿದ್ದರೂ ಹುಲಿನೇ.ಸರಕಾರಿ ಹಣದಲ್ಲಿ ಉತ್ಸವ ಮಾಡಿ,ಹೊಗಳಿಸಿಕೊಳ್ಳುವ ಸಚಿವ ಸುಧಾಕರ್‌ಗೆ ಸೋಲುವ ದಿನಗಳು ಹತ್ತಿರ ಬಂದಿವೆ ಎಂದು ಚಿಂತಾಮಣಿಯ ಮಾಜಿ ಶಾಸಕ ಎಂ.ಸಿ.ಸುಧಾಕರ್ ಎಚ್ಚರಿಕೆ ನೀಡಿದರು.

ನಗರ ಹೊರವಲಯ ಕೆ.ವಿ.ಕ್ಯಾಂಪಸ್ ಆವರಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಜನಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಬೀಸುತ್ತಿರುವ ತಣ್ಣನೆಯ ಗಾಳಿ ಬಿಸಿಗಾಳಿಯಾಗಿ ಪರಿವರ್ತನೆ ಆಗಿ ೫ ಕ್ಷೇತ್ರಗಳಿಗೆ ೫ ರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ.ಇಲ್ಲಿನ ಮತದಾರರು ಜಿಲ್ಲೆಗೆ ಹಿಡಿದಿರುವ ಗ್ರಹಣ ಬಿಡಿಸುವ ಕೆಲಸ ಮಾಡಬೇಕು.ಭ್ರಷ್ಟಾಚಾರ ಮಾಡುತ್ತಾ ತಾರತಮ್ಯ ದಲ್ಲಿ ಮುಳುಗಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುವರು.ಅತಿವೃಷ್ಟಿ ಪರಿಹಾರ ಹಣದಲ್ಲೂ ಕೂಡ ಇಲ್ಲಿಗೆ ಉಸ್ತುವಾರಿ ಸಚಿವರಲ್ಲದವರ ಪೋಟೋ ಬಳಸಿದ್ದಾರೆ.ಅಧಿಕಾರದ ದುರ್ಭಳಕೆ ಮೇರೆ ಮೀರಿದೆ.

ಮತದಾರರಿಗೆ ಆಮಿಷ ಒಡ್ಡಲು ಉತ್ಸವ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿರ ಬೇಕಾದ ಮೆಡಿಕಲ್ ಕಾಲೇಜನ್ನು ತಮ್ಮೂರಿನ ಬಳಿ ನಿರ್ಮಿಸಲು ಸ್ವಾರ್ಥ ಕಾರಣವಾಗಿದೆ .ಮುದ್ದೇನಹಳ್ಳಿ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆ ಪ್ರಾರಂಭವಾದಾಗಿನಿAದ ಜಿಲ್ಲಾಸ್ಪತ್ರೆಗೆ ಬರುತ್ತಿದ್ದ ಹೊರ ರೋಗಿಗಳ ಸಂಖ್ಯೆ ೧೦೦೦ ದಿಂದ ೪೦೦ಕ್ಕೆ ಕ್ಷೀಣಿಸಿದೆ.ತಮ್ಮ ಜೇಬು ತುಂಬಿಸಿಕೊಳ್ಳಲು ೨೦ ಕಿ.ಮೀ ದೂರದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಲಾಗಿದ್ದು ಇದರಿಂದ ಜಿಲ್ಲೆಯ ಜನತೆಗೆ ಏನೇನೂ ಅನುಕೂಲವಾಗದು ಎಂದು ದೂರಿದರು.

ಚಿರತೆ ಬರಲಿದೆ
ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಭಯದ ವಾತಾವರಣದಲ್ಲಿ ಜೀವನ ಮಾಡುತ್ತಿದ್ದಾರೆ.ಪೊಲೀಸ್ ಇಲಾಖೆ ಬಳಸಿಕೊಂಡು ಹೆದರಿಸಿದಂತೆ ನನ್ನನ್ನು ಹೆದರಿಸಲು ನೋಡಿದರು.ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪ್ರಚಾರಕ್ಕಾಗಿ ಮಾತನಾಡುತ್ತಿದ್ದಾರೆ ಎಂದರು. ನಾನು ಸ್ವಾಭಿಮಾನದ ಗಂಡು ಮಾರಾಟವಾಗುವ ಗಂಡಲ್ಲ. ಹಾಗೇನಾದರೂ ಆಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಮಂತ್ರಿಯೂ ಆಗುತ್ತಿದ್ದೆ.ಲೋಕಸಭಾ ಸದಸ್ಯನೂ ಆಗುತ್ತಿದ್ದೆ. ನಗರದ ವಾಸಿಗಳಿಗೆ ನಿವೇಶನ ನೀಡುವ ಮನಸ್ಸಿದ್ದರೆ ಇದರ ೫ ಕಿಮಿ. ವ್ಯಾಪ್ತಿಯಲ್ಲಿ ನೀಡುವುದ ಬಿಟ್ಟು, ಪೆರೇಸಂದ್ರ ಬಂಡೆಗಳ ಮೇಲೆ ನೀಡಲು ಸಿದ್ದತೆ ನಡೆಸಿದ್ದಾರೆ.ಅಲ್ಲಿಗೆ ಯಾರೂ ಹೋಗುವುದಿಲ್ಲ ಎಂದು ಕಾಲೇಳೆದ ಅವರು ಚಿಕ್ಕಬಳ್ಳಾಪುರವನ್ನು ಭಯದಿಂದ ಮುಕ್ತವಾಗಿಸಲು ಚಿರತೆ ಬರುತ್ತಿದೆ.ಅಲ್ಲಿಯವರೆಗೂ ಕಾಯಿರಿ,ತಲೆ ಮೇಲೆ ಟೋಬನ್ ಹಾಕಿಕೊಂಡು  ಜನತೆಯನ್ನು ಯಾಮಾರಿಸಲು ಹೊರಟಿದ್ದೀರಿ. ನಾವೆಲ್ಲಾ ಹಗಲೊತ್ತು ಸಕ್ರಿಯವಾಗಿದ್ದರೆ ನೀವು ರಾತ್ರಿಹೊತ್ತು ಸಕ್ರಿಯರಾಗಿರುವಿರಿ ಎಂಬುದು ಗೊತ್ತು.ಬರುವ ದಿನಗಳಲ್ಲಿ ಇವೆಲ್ಲಾ ಒಂದೊAದಾಗಿ ಹೊರಗೆ ಬರಲಿವೆ ಎಂದು ಟಾಂಗ್ ನೀಡಿದರು.