Wednesday, 11th December 2024

Chicknayakanahalli News: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: 35 ವಿದ್ಯಾರ್ಥಿಗಳು ವಿಜೇತ

ಚಿಕ್ಕನಾಯಕನಹಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ (ಕೆ.ಎಂ.ಹೆಚ್.ಪಿ.ಎಸ್) ಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮದ 35 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗ: ಅರೇಬಿಕ್ ಧಾರ್ಮಿಕ ಪಠಣದಲ್ಲಿ 4ನೇ ತರಗತಿ ಅರ್ಭಿಯ ತರನಮ್ ಛದ್ಮವೇಷ ದಲ್ಲಿ ಮೌನ, ಕಥೆ ಹೇಳುವ ಸ್ಪರ್ಧೆಯಲ್ಲಿ ದಿಶಾ ಪ್ರಥಮ, ಗೀತೆಯ ಅಭಿನಯದಲ್ಲಿ ಗಮನ, ಭಕ್ತಿಗೀತೆಯಲ್ಲಿ ಜಾಹ್ನವಿ, ಕ್ಲೇ ಮಾಡ್ಲಿಂಗ್ ಪುರುಷೋತ್ತಮ ಕರಡಿ, ದ್ವಿತೀಯ, 3 ನೇ ತರಗತಿ ದುತಿ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಒಟ್ಟು ೭ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

ಇದನ್ನೂ ಓದಿ: Tumkur News: ಸೆ.14ರಂದು ರಾಜ್ಯಗಳ ಅಸ್ಮಿತೆ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ

ಹಿರಿಯ ಪ್ರಾಥಮಿಕ ವಿಭಾಗ: ಆಶು ಭಾಷಣ ಸ್ಪರ್ಧೆಯಲ್ಲಿ 7ನೇ ತರಗತಿಯ ಶೋಮಿತ, ಮಿಮಿಕ್ರಿಯಲ್ಲಿ ಶರತ್‌ ಗೌಡ, ಕನ್ನಡ ಕವನ ವಾಚನದಲ್ಲಿ ಸಾನ್ವಿ, ಪ್ರಥಮ. ಇಂಗ್ಲೀಷ್ ಕಂಠಪಾಠದಲ್ಲಿ ಮೋಕ್ಷಾಗಂಗಾ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಹಾಜೀರಬಾನು, ದ್ವಿತೀಯ. ಕನ್ನಡ ಕಂಠ ಪಾಠ ಶುಭ ತೃತೀಯ. ಚಿತ್ರಕಲೆಯಲ್ಲಿ 6 ನೇತರಗತಿ ಮನೋಜ್ಞ ದ್ವಿತೀಯ, ಕ್ಲೇಮಾಡ್ಲಿಂಗ್ ನಲ್ಲಿ ಚರಣ್ ಪ್ರಥಮ ಸ್ಥಾನಗಳಿಸಿದ್ದಾರೆ. ಒಟ್ಟು 10 ವಿದ್ಯಾರ್ಥಿಗಳು ವಿಜೇತ ರಾಗಿದ್ದಾರೆ.

ಪ್ರೌಢಶಾಲೆ ವಿಭಾಗ: ಇಂಗ್ಲೀಷ್ ಭಾಷಣದಲ್ಲಿ 10ನೇ ತರಗತಿಯ ಕೋಮಲ, ಹಿಂದಿ ಭಾಷಣದಲ್ಲಿ ಹಜರತ್ ಆಲಿ ಮಂಡಲ್, ಕವನ ವಾಚನದಲ್ಲಿ ನಂದಿತಾ ಪ್ರಥಮ. 9 ತರಗತಿಯ ಪ್ರಿಯಾ ಕನ್ನಡ ಭಾಷಣದಲ್ಲಿ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಮನೋಜ್, ಪ್ರಬಂಧ ರಚನೆ ಕನ್ನಡದಲ್ಲಿ ಗಾನವಿ, ಇಂಗ್ಲೀಷ್ ನಲ್ಲಿ ಶಕುಂತಲಾ, ಪ್ರಥಮ. ಚಿತ್ರಕಲೆಯಲ್ಲಿ ಧನ್ಯ, ಚರ್ಚಾ ಸ್ಪರ್ಧೆಯಲ್ಲಿ ಮೋಕ್ಷ ದ್ವಿತೀಯ. 8 ನೇ ತರಗತಿಯ ಸೊಗಸು ಜಾನಪದ ಗೀತೆಯಲ್ಲಿ ಹಾಗು ರಂಗೋಲಿಯಲ್ಲಿ ಸುಷ್ಮಾ, ಪ್ರಥಮ. ಭರತನಾಟ್ಯದಲ್ಲಿ ಕುಶಾಲ, ಮಿಮಿಕ್ರಿಯಲ್ಲಿ ಲಿಖಿತ್, ಗಜಾಲ್ ವಾಚನ ದಲ್ಲಿ ಮೊಹಮ್ಮದ್ ಅಬ್ದುಲ್ಲಾ ದ್ವಿತೀಯ. ಜ್ಞಾನವಿ ಭಾವಗೀತೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ರಸಪ್ರಶ್ನೆಯಲ್ಲಿ 10 ನೇ ತರಗತಿ ಮೋಹನ್ ಹಾಗು 9 ನೇತರಗತಿ ಸಿಂಚನ ಪ್ರಥಮ ಸ್ಥಾನ ಗಳಿಸಿದ್ದಾರೆ. 9 ತರಗತಿ ನವ್ಯ, ಪೂಜಾ, 8 ನೇ ತರಗತಿ ನವ್ಯಶ್ರೀ, ಧನ್ಯತ, ಮೋನಿಷಾ, ಹರ್ಷ ಭಾಗವಹಿಸಿದ್ದ ಗುಂಪು ವಿಭಾಗದ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ. 10 ನೇ ತರಗತಿ ಶಿಫಾ, ನೇಹ, ಆಯಿಷಾ ಸಿದ್ದಿಕಾ, 9 ನೇ ತರಗತಿ ನದೀಮ್, ಸೈಯದ್ ಸಾದತ್, ಮೊಹಮದ್ ಮುಜಾಮುಲ್ ಭಾಗವಹಿಸಿದ್ದ ಖವಾಲಿ ತಂಡಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಒಟ್ಟು 18 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.