ಗೌರಿಬಿದನೂರು : ಉತ್ತರಪಿನಾಕಿನಿ ನದಿ ತುಂಬಿ ಹರಿಯುತ್ತಿರುವ ರಭಸಕ್ಕೆ ನಗರದಿಂದ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸಲು ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು ಸಂಚಾರಕ್ಕೆ ಅನಾನುಕೂಲವಾಗಿದೆ.
ಕಾಮಗಾರಿ ಕಾರಣವಾಗಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪರ್ಯಾಯವಾಗಿ ಕಿರು ಸೇತುವೆ ನಿರ್ಮಾಣ ಮಾಡಿಲಾಗಿತ್ತು. ಇದೀಗ ಹರಿಯುತ್ತಿರುವ ನದಿ ನೀರಿನ ರಭಸಕ್ಕೆ ಸೇತುವೆ ಕುಸಿದು ಅದಕ್ಕೆ ಅಳವಡಿಸಿದ್ದ ಪೈಪುಗಳು ಕೊಚ್ಚಿಕೊಂಡು ಹೋಗಿರುವ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತ್ಯಂತ ಗುಣಮಟ್ಟದ್ದು ಎಂಬ ಖಾತ್ರಿ ಇದೆ, ಆದರೆ ಇಲ್ಲಿ ತಾತ್ಕಾಲಿಕ ಸೇತುವೆಯೇ ಕೊಚ್ಚಿ ಹೋಗಿರುವುದರಿಂದ ಗುಣಮಟ್ಟದ ಬಗ್ಗೆ ಅನುಮಾನ ಮೂಡುವಂತಾಗಿದೆ. ನದಿಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿಗೆ ಅನುಕೂಲವಾಗಲೆಂದು 100 ಮೀಟರ್ ಉದ್ದದ ಬೃಹತ್ ಸೇತುವೆ ನಿರ್ಮಾಣ ಮಾಡುತ್ತಿದ್ದು ಇದರ ಕಾಮಗಾರಿ ಇನ್ನೆಷ್ಟು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಬಹುದು ಎಂಬ ಆತಂಕ ಸಾರ್ವತ್ರಿಕ ವಲಯದಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಗುಣಮಟ್ಟದಿಂದ ಇರಬೇಕು ಎಂಬುದು ಜನತೆಯ ಆಶೆಯಾಗಿದೆ. ಆದರೆ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿರುವುದು ನೋಡಿದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಸ್ಥಳೀಯರು ದೂರುತ್ತಾರೆ. ಹಾಗೆಯೇ ಈ ರಸ್ತೆಯಲ್ಲಿ ಓಡಾಡುವಂತಹ ವಾಹನಗಳಿಗೆ ಅಡ್ಡಲಾಗಿ ಜಲ್ಲಿ ಮತ್ತು ಮಣ್ಣನ್ನು ಹಾಕಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡವಾಗುತ್ತಿದೆ. ಒಟ್ಟಾರೆಯಾಗಿ ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಎಲ್ಲಾ ರೀತಿಯ ಅಡೆತಡೆಗಳು ವ್ಯಾಪಕ ವಾಗಿದೆ ಇದನ್ನೆಲ್ಲಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಳು ಇದೆಲ್ಲವನ್ನು ನಿಭಾಯಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Chikkaballapur Breaking: ವಿದ್ಯುತ್ ಪ್ರವಹಿಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ಹಸುಗಳ ಸಾವು