ಹುಡುಗಿ ವಿಚಾರಕ್ಕೆ ನಡೆದ ಜಗಳ : ಮನಸ್ಸೋ ಇಚ್ಛೆ ಇರಿದು ಪರಾರಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಚಿಕ್ಕಬಳ್ಳಾಪುರ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕರಿಬ್ಬರಿಗೆ ಚೂರಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ತಾಲೂಕಿನ ಕಂಡಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ೮ಕ್ಕೆ ನಡೆದಿದ್ದು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಏನಿದು ಘಟನೆ!!
ಕಳೆದ ೬ ತಿಂಗಳ ಹಿಂದೆ ಒಂದು ಹುಡುಗಿಯ ವಿಚಾರವಾಗಿ ಚೀಮನಹಳ್ಳಿ ಗ್ರಾಮದ ಗಿರೀಶ್, ಹರೀಶ್ ಮತ್ತು ಕಂಡಕನಹಳ್ಳಿ ಗ್ರಾಮದ ಮಧುಶ್ ಗೌಡ ಹಾಗೂ ಧನುಷ್ ಗೌಡ ಜಗಳ ಮಾಡಿಕೊಂಡಿದ್ದು ಆಗ ಮಧೂಷ್‌ಗೌಡ ಗಿರೀಶ್ ,ಹರೀಶ್ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಆಗ ದೊಡ್ಡವರು ಸೇರಿ ರಾಜಿ ಪಂಚಾಯಿತಿ ಮಾಡಿ ಜಗಳವನ್ನು ತಣ್ಣಗಾಗಿಸಿದ್ದರು.ಇದೇ ಗಲಾಟೆಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಶನಿವಾರ ನಡೆದ ಗಲಾಟೆಯಲ್ಲಿ ಕೊಲೆಯತ್ನ ನಡೆದಿದೆ ಎನ್ನಲಾಗಿದೆ.
ಶನಿವಾರ ರಾತ್ರಿ ಮತ್ತೆ ಹರೀಶ್ ಮತ್ತು ಗಿರೀಶ್ ಹಾಗೂ ಮಧುಶ್‌ಗೌಡ, ಧನುಷ್‌ಗೌಡ,ಅವರ ತಂದೆ ಚಂದ್ರಪ್ಪ ನಡುವೆ ಜಗಳ ಆಗಿದ್ದು ಹರೀಶ್ ಮತ್ತು ಗಿರೀಶ್ ಎಂಬ ಇಬ್ಬರು ಯುವಕರ ಮೇಲೆ ಮಧುಶ್‌ಗೌಡ, ಧನುಷ್‌ಗೌಡ, ಅವರ ತಂದೆ ಚಂದ್ರಪ್ಪ ಸೇರಿ ಕೋಳಿ ಪಂದ್ಯಕ್ಕೆ ಬಳಸುವ ಚಾಕುವಿನಿಂದ ದಾಳಿ ನಡೆಸಿದ್ದು ಎದೆ, ಬೆನ್ನು, ಹೊಟ್ಟೆ, ತೊಡೆ ಎಲ್ಲೆಂದರಲ್ಲಿ ಮನಸೋಯಿಚ್ಚೆ ಚುಚ್ಚಿದ್ದಾರೆ.ನೋವಿನಿಂದ ಚೀರಿಕೊಂಡ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾಮಸ್ಥರು ಜಗಳ ಬಿಡಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಈ ಕೃತ್ಯದಲ್ಲಿ ಭಾಗಿಯಾದ್ದಾರೆ ಎನ್ನಲಾದ ಧನುಷ್ ಗೌಡ, ಚಂದ್ರಪ್ಪ ಎಂಬುವರನ್ನು ಪೊಲೀಸರು ಬಂಧಿಸಿದ್ದು ಕೊಲೆಗೆ ಯತ್ನಿಸಿದ್ದ ಮಧುಶ್‌ಗೌಡ ತಲೆ ಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.