Saturday, 5th October 2024

Chikkaballapur News: ಮಾಜಿ ನಗರಸಭಾಧ್ಯಕ್ಷ ಹಾಗೂ ಸರ್‌ಎಂವಿ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ ಎಂ ಪ್ರಕಾಶ್ ಆಗ್ರಹ

ರಸ್ತೆ ಅಗಲೀಕರಣ ನಿಯಮಬದ್ಧವಾಗಿಲ್ಲ: ಅಂಗಡಿಮಾಲಿಕಾರ ಅಭಿಪ್ರಾಯ ಪಡೆದು ಅಗಲೀಕರಣ ಮಾಡಲಿ

ಚಿಕ್ಕಬಳ್ಳಾಪುರ: ನಗರದ ಎಂಜಿ ರಸ್ತೆ ಅಗಲೀಕರಣ ವಿಚಾರದಲ್ಲಿ ಹೆದ್ಧಾರಿ ಪ್ರಾಧಿಕಾರದ ಅಧಿಕಾರಿಗಳು, ಜನಪ್ರತಿ ನಿಧಿಗಳು ಜನತೆಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೆ ಸರ್ವಾಧಿಕಾರಿಗಳ ಹಾಗೆ ನಡೆದುಕೊಳ್ಳು ತ್ತಿರುವುದು ಸರಿಯಲ್ಲ.ಇನ್ನಾದರೂ ಸರಿಯೆ ನಗರಾಡಳಿತ, ಜನಪ್ರತಿನಿಧಿಗಳು ಸೇರಿ ಅಂಗಡಿ ಮುಂಗಟ್ಟೆ ಕಳೆದುಕೊಳ್ಳು ವವರೊಟ್ಟಿಗೆ ಸಭೆ ನಡೆಸಿ ಸಭೆಯಲ್ಲಿ ಬರುವ ತೀರ್ಮಾನದಂತೆ ಅಗಲೀಕರಣ ಮಾಡಲಿ ಎಂದು ಮಾಜಿ ನಗರ ಸಭಾಧ್ಯಕ್ಷ ಹಾಗೂ ಸರ್‌ಎಂವಿ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ ಎಂ ಪ್ರಕಾಶ್ ಆಗ್ರಹಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ನಾವು ರಸ್ತೆ ಅಗಲೀಕರಣದ ವಿರೋಧಿಗಳಲ್ಲ. ಆದರೆ ಮಧ್ಯ ರಸ್ತೆಯಿಂದ ಎಡಕ್ಕೆ ಎಷ್ಟು ಅಡಿ, ಬಲಕ್ಕೆ ಎಷ್ಟು ಅಡಿ ಅಗಲೀಕರಣ ಮಾಡಿದರೆ ನಗರದ ಅಂದ ಚೆನ್ನಾಗಿದ್ದು, ವ್ಯಾಪಾರ ವಹಿವಾಟಿಗೂ ಅನುಕೂಲ ಆಗಲಿದೆಯೋ ಹಾಗೆ ಅಗಲೀಕರಣ ಮಾಡುವುದು ಸರಿ.ಈ ವಿಚಾರವನ್ನು ನಗರದ ಜನತೆಗೆ ಅರ್ಥವಾಗುವ ರೀತಿಯಲ್ಲಿ, ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈವರೆಗೆ ಯಾರೂ ಕೂಡ ಮಾಡಿಲ್ಲ.ಇದರಿಂದಾಗಿ ಜನ ತಮಗೆ ಇಷ್ಟ ಬಂದ ರೀತಿಯಲ್ಲಿ ತಾವೇ ಕಟ್ಟಡಗಳನ್ನು ಒಡೆದುಕೊಳ್ಳುತ್ತಿದ್ದಾರೆ.ಇದು ಸರಿಯಲ್ಲ ಎಂದು ಕಿಡಿಕಾರಿದರು.

ಶಿಡ್ಲಘಟ್ಟ ವೃತ್ತದ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಒಂದು ನಕ್ಷೆ ಹರಿದಾಡುತ್ತಿದೆ.ಈರೀತಿ ಮಾಡಲು ಆಗುವುದೇ ಇಲ್ಲ.ಏಕೆಂದರೆ ಚೆನ್ನಯ್ಯ ಪಾರ್ಕ್ ರಾಷ್ಟ್ರೀಯ ಸ್ಮಾರಕ ಆಗಿರುವುದರಿಂದ ಇದನ್ನು ಮುಟ್ಟಲೂ ಆಗುವುದಿಲ್ಲ, ಇದರಂತೆ ರೈಲ್ವೆ ಹಳಿಗಳ ಪಪಕ್ಕದ ರಸ್ತೆ, ರಾಷ್ಟ್ರೀಯ ಹೆದ್ಧಾರಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲ್ಸೇ ತುವೆ ಇವುಗಳನ್ನು ಬೀಳಿಸಲು ಆಗುವುದಿಲ್ಲ.ಇನ್ನು ಖಾಸಗಿ ಬಸ್‌ನಿಲ್ದಾಣ,ಮಂಗಿಶೆಟ್ಟಿ ಕಟ್ಟಡವನ್ನು ಕೂಡ ಬೀಳಿಸಿ ಹೇಗೆ ರಸ್ತೆ ನಿರ್ಮಾಣ ಮಾಡುತ್ತಾರೋ ಎಂಬುದು ಯಾರಿಗೂ ಗೊತ್ತಿಲ್ಲ.ಈ ಎಲ್ಲಾ ಗೊಂದಲಕ್ಕೆ ಹೆದ್ದಾರಿ ಪ್ರಾಧಿ ಕಾರವೇ ಹೊಣೆ ಎಂದು ಬೇಸರ ವ್ಯಕ್ತಪಡಿಸಿದರು.

ಹೆದ್ದಾರಿ ನಿರ್ಮಾಣಕ್ಕಾಗಿ ನಗರದಲ್ಲಿ ಒಂದೊAದು ಕಡೆ ಒಂದೊಂದು ರೀತಿಯಲ್ಲಿ ಕಟ್ಟಡ ಒಡೆಯುತ್ತಿದ್ದಾರೆ.ಕೆಲವು ಕಡೆ ೧೨ ಅಡಿ, ೧೬,೧೮ ಅಡಿ ಗುರುತು ಮಾಡಿದ್ದಾರೆ. ಇದರಲ್ಲಿ ಸ್ಪಷ್ಟತೆಯಿಲ್ಲ.ಹೀಗೆ ಮಾಡುವ ಮೊದಲು ಅಗಲೀ ಕರಣದ ಬಗ್ಗೆ ನೀಲನಕ್ಷೆ ತಯಾರಿಸಿ ಅದನ್ನು ಜನರ ಮುಂದಿಟ್ಟು ಮನವರಿಕೆ ಮಾಡಿದ ನಂತರ ಅಗಲೀಕರಣ ಮಾಡಲಿ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ರೈಲ್ವೇ ಇಲಾಖೆ,ನಗರಸಭೆ,ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಇವುಗಳ ಸಹಯೋಗದಲ್ಲಿ ಸಭೆ ನಡೆಸಿ, ಕೂಲಂಕುಶವಾಗಿ ಚರ್ಚಿಸಿ ತೀರ್ಮಾನ ತೆಗೆದು ಕೊಂಡರೆ ಯಾರದೂ ತಂಟೆತಕರಾರು ಇರುವುದಿಲ್ಲ. ಈ ಬಗ್ಗೆ ತಿಳುವಳಿಕೆ ಪತ್ರವನ್ನು ಎದ್ದುಕಾಣುವಂತೆ ಪ್ರದರ್ಶನ ಮಾಡಬೇಕು ಎಂದು ತಾಕೀತು ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಪರಶಿವಮೂರ್ತಿ ಮತ್ತಿತರರು ಇದ್ದರು.

ಇದನ್ನೂ ಓದಿ: Chikkaballapur News: ಪರಿಸರ ಸಂರಕ್ಷಣಾ ಕಾರ್ಯ ನಮ್ಮೆಲ್ಲರ ಕರ್ತವ್ಯ-ಪ್ರಶಾಂತ್