Thursday, 12th December 2024

Chikkaballapur News: ಗೊಂದಲದ ಗೂಡಾದ ವಕೀಲರ ಚುನಾವಣೆ ಮತಎಣಿಕೆ; ಅಧ್ಯಕ್ಷ ಆಯ್ಕೆಗೆ ತೊಡಕಾದ ೨ ಮತ ಪತ್ರ ನಾಪತ್ತೆ ಘಟನೆ

ಭಾರೀ ಗದ್ದಲದ ನಡುವೆ ಡಿ.೩ ಕ್ಕೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಮರುಚುನಾವಣೆ ಘೋಷಣೆ

ಚಿಕ್ಕಬಳ್ಳಾಪುರ : ೨೦೨೪-೨೬ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಸಂಬ0ಧಿಸಿದ0ತೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹೊರತುಪಡಿಸಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಠಿಕಾರ್ಯದರ್ಶಿ, ಖಜಾಂಚಿ ಸೇರಿ ೬ ಮಂದಿ ನಿರ್ದೇಶಕ ಸ್ಥಾನಗಳ ಆಯ್ಕೆ ಆಬಾಧಿತವಾಗಿ ನಡೆದರೆ, ಅಧ್ಯಕ್ಷ ಸ್ಥಾನದ ಫಲಿತಾಂಶದ ಘೋಷಣೆಯಲ್ಲಿ ಕಗ್ಗಂಟು ಉಂಟಾದ ಪರಿಣಾಮ ತಡರಾತ್ರಿಯಾದರೂ ಫಲಿತಾಂಶ ಘೋಷಣೆ ಆಗಲೇ ಇಲ್ಲ.

ಭಾರಿ  ಗದ್ದಲಕ್ಕೆ ಕಾರಣವಾದ ಅಧ್ಯಕ್ಷ ಸ್ಥಾನದ ಘೋಷಣೆ ೨ ಮತಪತ್ರಗಳ ನಾಪತ್ತೆಯಿಂದಾಗಿ ಕಗ್ಗಂಟಾಯಿತು.ಇದೇ ಕಾರಣವಾಗಿ ಡಿ.೩ಕ್ಕೆ ಮರು ಚುನಾವಣೆ  ನಡೆಸುವುದಾಗಿ ಚುನಾವಣಾಧಿಕಾರಿ ಪಿ. ಸುಬ್ರಹ್ಮಣಿ ಘೋಷಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಗುರುವಾರ ನಡೆದ ೨೦೨೪-೨೬ನೇ ಸಾಲಿನ ನೂತನ ಆಡಳಿಯ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲ ಕೆ.ಹೆಚ್ ತಮ್ಮೇಗೌಡ,ಕೆ.ಎಂ,ಗೋವಿAದರೆಡ್ಡಿ,ಆರ್.ಮಟಮಪ್ಪ,ಯುವ ವಕೀಲ ಕೆ.ವಿ.ಅಭಿಲಾಷ್ ಸ್ಪರ್ಧೆ ಮಾಡಿದ್ದರು. ಮತ ಎಣಿಕೆ ಮಾಡುವಾಗ ತಮ್ಮೇಗೌಡರಿಗೆ ೧೦೯, ಅಭಿಲಾಷ್‌ಗೆ ೧೦೭ ಗೋವಿಂದರೆಡ್ಡಿಗೆ ೯೮, ಮಟಮಪ್ಪ ಅವರಿಗೆ ೯೪ ಮತಗಳು ಬಂದಿದ್ದು ತಮ್ಮೇಗೌಡ ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಬೇಕೆನ್ನುವಷ್ಟರಲ್ಲಿ ೨ ಮತಪತ್ರಗಳ ನಾಪತ್ತೆ ಪ್ರಕರಣ ಮುನ್ನೆಲೆಗೆ ಬಂದಿತು.

ಈ ವೇಳೆ ೧೦೭ ಮತ ಪಡೆದಿದ್ದ ಅಭಿಲಾಷ್ ಫಲಿತಾಂಶ ಘೋಷಣೆಗೆ ಮಾಡದಂತೆ ತಗಾದೆ ತೆಗೆದರಲ್ಲದೆ ಕಾಣೆಯಾಗಿರುವ ಮತಪತ್ರಗಳ ಬಗ್ಗೆ ಸ್ಪಷ್ಟತೆ ದೊರೆಯುವವರೆಗೆ ಏನೂ ಮಾಡಬಾರದು ಎಂದು ಪಟ್ಟು ಹಿಡಿದರು. ಚುನಾವಣೆಯಲ್ಲಿ ಚಲಾವಣೆ ಆದ ಒಟ್ಟು  ಮತಗಳು ೪೧೩ ಇದರಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಕೂಡಿದರೆ ೨ ಮತಗಳು ಕಣ್ಮರೆ ಆಗಿರುವುದು ಕಂಡು ಬಂದಿದೆ. ಈ ಮತಪತ್ರಗಳನ್ನು ಯಾರು ತೆಗೆದುಕೊಂಡು ಹೋಗಿದ್ದಾರೋ ಗೊತ್ತಿಲ್ಲ.ಇವು ನನಗೇ ಬರಬೇಕಿದ್ದ ಮತಗಳಾಗಿವೆ ಎಂದು ತಕರಾರು ತೆಗೆದಿದ್ದರಿಂದ ಗೊಂದಲ, ತಳ್ಳಾಟ ನೂಕಾಟ ನಡೆದು ಕೊನೆಗೆ ಮರು ಚುನಾವಣೆ ಘೋಷಣೆ ಮಾಡಲಾಯಿತು.

ಉಳಿದಂತೆ ಜಂಠಿ ಕಾರ್ಯದರ್ಶಿಯಾಗಿ ಎನ್.ಚಂದ್ರಶೇಖರ್,ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ವೆAಕಟೇಶ್, ಉಪಾಧ್ಯಕ್ಷರಾಗಿ ಹೆಚ್.ಎಂ.ಮAಜುನಾಥ್, ಖಜಾಂಚಿಯಾಗಿ ಅಯೂಬ್‌ಖಾನ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಮಂಡಳಿಗೆ ಸ್ಪರ್ಧಿಸಿದ್ದ ೨೦ ಮಂದಿಯ ಪೈಕಿ ೬ ಸ್ಥಾನಗಳಿಗೆ ಪ್ರವೀಣ್, ಎಸ್.ಮುನಿರಾಜು., ಯಣ್ಣೂರು, ಎನ್. ಶ್ರೀನಿವಾಸ್, ಅಶ್ವತ್ಥನಾರಾಯಣ, ನರಸಿಂಹಮೂರ್ತಿ, ರಾಘವೇಂದ್ರ, ಜಯಗಳಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.