ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರವೊಂದರಲ್ಲಿಯೇ ೨೨ ಸಾವಿರ ನಿವೇಶನ ನೀಡುವುದಾಗಿ ಗ್ರಾಮಸಭೆಗಳ ಮೂಲಕ ಪ್ರಚಾರ ಪಡೆಯುತ್ತಿರುವ ಸಚಿವ ಸುಧಾಕರ್ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಚುನಾವಣೆ ಸಮಯದಲ್ಲಿ ಭೂಮಿ ಪರಿವರ್ತನೆ ಮಾಡಿಸದೆ, ನಿವೇಶನ ಸಂಖ್ಯೆ ನೀಡದೆ, ಕ್ರಮಬದ್ಧವಾಗಿ ಹಕ್ಕುಪತ್ರ ವಿತರಿಸದೆ ಮತದಾರರನ್ನು ಯಾಮಾ ರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಕಿಡಿಕಾರಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ದರು.
ಸಚಿವ ಸುಧಾಕರ್ ಚುನಾವಣೆ ಬಂದಾಗಲೆಲ್ಲಾ ಹೀಗೆ ನಿವೇಶದ ಗುಮ್ಮ ಮುಂದೆ ಬಿಡುವುದು ಅವರಿಗೆ ಅಂಟಿ ಬಂದ ಚಾಳಿಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ೫ ಮಂದಿಗೆ ವೇದಿಕೆಯಲ್ಲಿ ಪತ್ರ ನೀಡಿ ವಾಪಸ್ಸು ಪಡೆದು ಕೊಂಡಿದ್ದಷ್ಟೇ ಆಯಿತು. ಈವರೆಗೆ ಅವರಿಗೆ ಸೈಟ್ ತೋರಿಸಿಲ್ಲ.ಅವರನ್ನು ಕೇಳುತ್ತೇನೆ ಇಷ್ಟು ನಿವೇಶನಕ್ಕೆ ಬೇಕಾದ ಭೂಮಿ ಎಲ್ಲಿದೆ ಸ್ವಾಮಿ, ಬಡವರ ಸಾಗವಳಿ ಭೂಮಿ ವಶಪಡಿಸಿಕೊಳ್ಳುವ ಕೆಲಸ ಮಾತ್ರ ಮಾಡಿದರೆ ಸಾಕೇ ? ಎಂದ ಅವರು.
ಇವರು ನಿವೇಶನ ನೀಡುವುದಿಲ್ಲ.ಇದಕ್ಕಾಗಿ ನೀವು ಸಾವಿರಾರು ರೂಪಾಯಿ ಖರ್ಚು ಮಾಡಿ ಜಾತಿ ಆದಾಯ, ವಾಸಸ್ಥಳ ದೃಢೀ ಕರಣ, ಮನೆಯಿಲ್ಲದ ಬಗ್ಗೆ ದೃಢೀಕರಣ ಅದಕ್ಕೆ ನೋಟರಿ ಮಾಡಿಸೋದು ಬೇಡ.೧೦ ವರ್ಷಗಳಿಂದ ಕಾಲಹರಣ ಮಾಡಿ ಚುನಾವಣೆ ಸಮಯದಲ್ಲಿ ಹೀಗೆ ಮಾಡಲು ಹೊರಟಿರುವುದು ಅಕ್ಷಮ್ಯ. ಕುಮಾರಸ್ವಾಮಿಗೆ ಅಧಿಕಾರ ನೀಡಿ ಮನೆ ಭಾಗ್ಯ ಪಡೆಯಿರಿ. ಅವರು ಅಭಿವೃದ್ಧಿ ಹರಿಕಾರ ಆಗಿ ಅದನ್ನು ಮಾಡಿರುವುದು ನಿಜವೇ ಆಗಿದ್ದರೆ ಕುಕ್ಕರ್,ಮಿಕ್ಸಿ, ಪೋಟೋ ಇರುವ ಸ್ಟೌವ್ ಮನೆಮನೆಗೆ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನೆಗಳ ಸುರಿಮಳೆಗೈದರು.
ಕುಮಾರಸ್ವಾಮಿ ಸರಕಾದಿಂದ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯವಿದೆ ಎಂಬುದನ್ನು ಇತಿಹಾಸ ಹೇಳಿದೆ.ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ವಸತಿ,ಆರೋಗ್ಯ, ಶಿಕ್ಷಣ, ರೈತಚೈತನ್ಯ, ಮಹಿಳಾ ಸಬಲೀಕರಣ ಯೋಜನೆಗಳು ಜಾರಿಯಾಗಲಿವೆ. ಸರಕಾರವೇ ಪ್ರತಿಯೊಬ್ಬರಿಗೂ ವಿಮೆ ಮಾಡಿಸಿಕೊಡಲಿದೆ ಎಂದು ತಿಳಿಸಿದ ಅವರು ರಾಜ್ಯವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಆಡಳಿತದಲ್ಲಿ ಗುತ್ತಿಗೆದಾರರು ನೆಮ್ಮದಿಯಿಂದ ಬಾಳಲು ಆಗುತ್ತಿಲ್ಲ.ಗೋಪಾಲಕೃಷ್ಣ ಕೆರೆಯಲ್ಲಿ ಕೋಟ್ಯಾಂತರ ಹಣ ಬಳಸಿ ಕಟ್ಟಿರುವ ಗ್ಲಾಸ್ ಹೌಸ್ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನಿಯರ್ ಕಾಲೇಜು ಶಾಲಾ ಆವರಣದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಸೀರೆ ವಿತರಣೆ ಮಾಡಿಸುವ ಮೂಲಕ ಅವತ್ತೇ ಜೆಡಿಎಸ್ ಪಕ್ಷ ಆಯೋಜಿಸಿದ್ದ ಮಹಿಳಾ ಕಾರ್ಯ ಕ್ರಮಕ್ಕೆ ಅಡ್ಡಿಪಡಿಸಲಾಯಿತು ಎಂದು ದೂರಿದರು.
ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿಯೂ ಇಲ್ಲದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರಿಗಳ ಏಕಮುಖ ಆಡಳಿತ ಚಿಕ್ಕಬಳ್ಳಾಪುರ ದಲ್ಲಿದೆ. ೬೫೦ಕೋಟಿ ಗಂಗಾಕಲ್ಯಾಣದ ಹಣ ದುರುಪಯೋಗ ಆಗಿದೆ ಎಂದರೆ ಯಾವ ಮಟ್ಟಕ್ಕೆ ಭ್ರಷ್ಟಾಚಾರ ಆಗಿದೆ ನೋಡಿ. ಜನವಿರೋಧಿ ಆಡಳಿತ ಬಹಳ ದಿನ ನಡೆಯುವುದಿಲ್ಲ,ಜನ ಬದಲಾವಣೆ ಬಯಸಿದ್ದಾರೆ.ಮತದಾರರಲ್ಲಿ ಮನವಿ ಮಾಡುವುದಿಷ್ಟೇ ಇವರು ಕೊಡುವ ಸೀರೆ, ಕುಕ್ಕರ್, ಮಿಕ್ಸ್, ಸ್ಟೌವ್ ತುಂಬಾ ದಿನ ಇರೋದಿಲ್ಲ.ಪಾರದರ್ಶಕ ಆಡಳಿತ ನೀಡಿದ ನನಗೆ ಯಾಕೆ ಸೋಲಿನ ಶಿಕ್ಷೆ ನೀಡಿದಿರಿ? ಇನ್ನಾದರೂ ಸರಿಯೇ ಎಚ್ಚರವಹಿಸಿ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ. ರೈತಬಂಧು, ಬಡವರ ಸೇವಕ ಕುಮಾರಸ್ವಾಮಿ ಮುಖ್ಯಮಂತ್ರಿ ಆಗವಂತೆ ನೋಡೊಕೊಳ್ಳಿ ಎಂದು ಮನವಿ ಮಾಡಿದರು. ಎಂದು ಪ್ರಶ್ನಿಸಿದರು.ಹೀಗಾಗಿ ಯೋಚಿಸಿ ಜೆಡಿಎಸ್ ಗೆ ಮತ ನೀಡಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾಕಾಂತ್ ಮಾತನಾಡಿ ಸುಧಾಕರ್ ಅಧಿಕಾರ ಮದ ದುಡ್ಡಿನ ದುರಹಂಕಾರದಿAದ ಮೆರೆಯುತ್ತಿದ್ದಾರೆ .ಬಿಜೆಪಿ ಸರಕಾರದಲ್ಲಿ ಬಡವರಿಗೆ ನೀಡುತ್ತಿದ್ದ ಅಕ್ಕಿ ಕಡಿತ ಮಾಡಿ, ಗ್ಯಾಸ್ ಬೆಲೆ ಏರಿಕೆ ಮಾಡಲಾಗಿದೆ.ಈ ಬಗ್ಗೆ ಎಂದಾದರೂ ನೀವು ಸದನದಲ್ಲಿ ಬಡವರ ಪರವಾಗಿ ಪ್ರಶ್ನೆ ಮಾಡಿದ್ದೀರಾ,ಕ್ಷೇತ್ರದಲ್ಲಿ ಜನತಾದರ್ಶನ ಮಾಡಿ ಜನರ ಕಷ್ಟ ಆಲಿಸಿದ್ದೀರಾ.೧೦ ವರ್ಷಗಳಲ್ಲಿ ಕಾರ್ಮಿಕರಿಗೆ, ದಲಿತರಿಗೆ, ಕಲಾವಿದರಿಗೆ, ರೈತಾಪಿಗಳ ಯಾವ ಸಮಸ್ಯೆಗೆ ಸ್ಪಂದಿಸಿದ್ದೀರಿ? ಯಾವ ಮುಖವೊತ್ತು ಮತದಾರರ ಬಳಿ ಮತ ಕೇಳುತ್ತೀರಿ ಎಂದು ಆಕ್ರೋಶದಿಂದ ನುಡಿದರು.
ಇಲ್ಲಿ ೧೦ ವರ್ಷಗಳಲ್ಲಿ ಯಾರಿಗೂ ಗಂಗಾಕಲ್ಯಾಣ ಬೋರ್ ನೀಡಿಲ್ಲ, ಹತ್ತಾರು ವರ್ಷಗಳಿಂದ ಉಳುಮೆ ಮಾಡಿದ ಬೂಹೀನರಿಗೆ ಸಾಗುವಳಿ ಚೀಟಿ ನೀಡಿಲ್ಲ. ಈಹಿಂದೆ ಮನೆ ನೀಡಲು ೬೫೧೪ ಅರ್ಜಿ ಪಡೆದಿದ್ದೀರಿ. ಅದರಲ್ಲಿ ಎಷ್ಟು ವಿಲೇ ಮಾಡಿದ್ದೀರಿ, ಉದ್ಯೋಗ ಎಷ್ಟು ಕಲ್ಪಿಸಲಾಗಿದೆ,ಬಡಮಕ್ಕಳಿಗೆ ಕಂಪ್ಯೂಟರ್ ನೀಡಿಲ್ಲ.ಅಲೆಮಾರಿ ಸಮುದಾಯದ ಮನೆಯ ಹಣ ೫೫೦ ಕೋಟಿ ಅವರ ಕಲ್ಯಾಣಕ್ಕೆ ಬಳಸದೆ ಹಣ ವಾಪಸ್ ಪಡೆದಿದ್ದೇಕೆ? ಎಂದು ಕೇಳಿದ ಅವರು ಮತದಾರರ ಋಣ ತೀರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದೀರಿ? ಅಭಿವೃದ್ದಿ ಅಭಿವೃದ್ದಿ ಅನ್ನುತ್ತೀರಿ ಏನು ಅಭಿವೃದ್ಧಿ ನಿಮ್ಮದು. ನಿಮಗೆ ತಾಕತ್ತಿದ್ದರೆ ಹಣ ಹಂಚದೆ ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದರು.
ದೊಡ್ಡ ಪೈಲುಗುರ್ಕಿ ಬಳಿ ನಗರವಾಸಿಗಳಿಗೆ ಬಂಡೆ ಮೇಲೆ ನಿವೇಶನ ಮಾಡಲು ಹೊರಟಿರುವುದು ನಾಚಿಕೆ ಗೇಡು. ನಗರ ಸಭೆಯಲ್ಲಿ ಆಗಿರುವ ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ ಕಾಲದ ನೂರಾರು ಕೋಟಿ ಅನುದಾನ ದುರ್ಭಳಕೆ ಬಗ್ಗೆ ತನಿಖೆ ಆಗಬೇಕು. ಸ್ತಿçÃಶಕ್ತಿ ಸಂಘಗಳಿಗೆ ಸಾಲ ನೀಡುವ ಚೆಕ್ ಸಚಿವರ ಮೂಲಕ ವಿತರಿಸುತ್ತಿರುವ ಡಿಸಿಸಿ ಬ್ಯಾಂಕ್ ಮೇನೇಜರ್ ಸಿಬ್ಬಂದಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು.ಸಾರ್ವಜನಿಕವಾಗಿ ಕಂಡಕAಡವರು ಚೆಕ್ ವಿತರಣೆ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಬೇಕು.ಸಾಯಿಕೃಷ್ಣ ಟ್ರಸ್ಟ್ ಡಿಸಿಸಿ ಬ್ಯಾಂಕ್ ನಡುವಿನ ಸಂಬAಧ ಏನು?ಈ ಬಾರಿ ಸುಧಾಕರ್ ಪ್ರತಿ ಮತಕ್ಕೆ ೧೦ಸಾವಿರ ನೀಡಿದರೂ ಗೆಲ್ಲುವುದಿಲ್ಲ. ಯಾರ ಲಾಭಕ್ಕೆ ಪೆರೇಸಂದ್ರದ ಬಳಿ ಮೆಡಿಕಲ್ ಕಾಲೇಜು,ಇದಕ್ಕೆ ತಂದಿದ್ದೆಷ್ಟು, ತಿAದಿದ್ದೆಷ್ಟು , ಅಧಿಕಾರಿಗಳು ಸಹ ಸಚಿವರು ಮಾತಿನಂತೆ ಕೆಲಸ ಮಾಡುತ್ತಿದ್ದಾರೆ.ಪಾಪದ ಕೆಲಸಕ್ಕೆ ಪಾಲುದಾರಿಕೆ ಬೇಡ ಎಂದು ಸುಧಾಕರ್ ಬೆಂಬಲಿಗರಿಗೆ ಮನವಿ ಮಾಡಿದರು.
ಮುಕ್ತ ಮುನಿಯಪ್ಪ ಮಾತನಾಡಿ ಜಕ್ಕಲಮಡಗು ಜಲಾಶಯಕ್ಕೋಗುವ ಮಾರ್ಗದ ರಸ್ತೆಗೆ ಇಲ್ಲದ ಆಸಕ್ತಿ ಇಶಾ ಫೌಂಡೇಶನ್‌ಗೆ ಯಾಕೆ?,ಗುಂಗಿರ್ಲ ಹಳ್ಳಿ ರಸ್ತೆ ನೀರಿನಿಂದ ಮುಚ್ಚಿಹೋಗಿದೆ.ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ?೫೩ಫಾರಂ ಭೂಮಿ ಕಿತ್ತು ಸೈಟ್ ಮಾಡುವುದು ಉಚಿತ ಅಲ್ಲ. ಸುಳ್ಳು ಭರವಸೆ ನೀಡಿ ಮೋಸ ಮಾಡಬೇಡಿ ಎಂದು ಮುಕ್ತ ಮುನಿಯಪ್ಪ ಸುಧಾಕರ್ ಅವರಿಗೆ ಮನವಿ ಮಾಡದರು.
ಸುದ್ದಿಗೋಷ್ಟಿಯಲ್ಲಿ ರಾಜಾಕಾಂತ್, ಮುನಿಯಪ್ಪ, ಮುನಿರಾಜು,ಶ್ರಿಧರ್,ಕೆ.ಆರ್.ರೆಡ್ಡಿ